Friday, Sep 25 2020 | Time 13:18 Hrs(IST)
 • ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ
 • 19 ವರ್ಷಗಳಿಂದ ರಾಮಸ್ವಾಮಿ ವರದಿ ಕೊಳೆಯುತ್ತಿದೆ: ರಾಮ್ ದಾಸ್
 • ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
 • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
 • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
 • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
Entertainment Share

ಈ ವಾರ ‘ಮಹಿರ’ ತೆರೆಗೆ

ಬೆಂಗಳೂರು, ಜುಲೈ 22 (ಯುಎನ್ಐ) ನಾರಿಶಕ್ತಿಯನ್ನು ಸಾರುವ ‘ಮಹಿರ’ ಚಿತ್ರ ಈ ವಾರ ತೆರೆಗೆ ಬರಲಿದೆ ಜಾಕ್ ಫ್ರೂಟ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿದ್ದು, ಮಹೇಶ್‌ ಗೌಡ ನಿರ್ದೇಶನವಿರುವ ಚಿತ್ರ, ಕಥೆ ಮಾತ್ರವಲ್ಲದೆ ಕಲಾವಿದರಿಂದಾಗಿಯೂ ಕುತೂಹಲ ಮೂಡಿಸಿದೆ ‘ಒಂದ ಮೊಟ್ಟೆಯ ಕಥೆ’ ಖ್ಯಾತಿಯ ರಾಜ್‌ ಬಿ. ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದ್ದು, ಖ್ಯಾತ ನಟ ಮನೋಹರ್‌ ಬಾಲಾಜಿ ಭಾರತೀಯ ಗುಪ್ತಚರ ಇಲಾಖೆ ಮುಖ್ಯಸ್ಥರ ಪಾತ್ರದಲ್ಲಿ ಅಭಿನಯಿಸಿದ್ದಾರೆ

ಕೊಲೆಯೊಂದರ ಸುತ್ತ ನಡೆಯುವ ಕಥೆಯಲ್ಲಿ ನಾನಾ ತಿರುವುಗಳಿದ್ದು, ಅವುಗಳನ್ನು ರೋಚಕವಾಗಿ ನಿರೂಪಿಸಲಾಗಿದೆ 'ಮಗಳ ಬೆನ್ನು ಹತ್ತುವ ಕೊಲೆಗಾರರು. ಮಗಳ ರಕ್ಷಣೆ ನಿಲ್ಲುವ ತಾಯಿ. ತನ್ನ ಮಗಳನ್ನು ಕಾಪಾಡುವುದರ ಜತೆಗೆ ತನ್ನ ರಕ್ಷಣೆಗೆ ತಾಯಿ ಏನೆಲ್ಲ ತಂತ್ರಗಳನ್ನು ಹೆಣೆಯುತ್ತಾಳೆ ಎನ್ನುವುದೇ ಸಿನಿಮಾದ ಕಥೆ. ಆ ಕೊಲೆಗಾರರು ಯಾರು, ಅವರನ್ನು ಕಳುಹಿಸಿದವರಾರು, ಅವರು ಕಥಾ ನಾಯಕಿಯ ಬೆನ್ನು ಬೀಳಲು ಕಾರಣವೇನು ಹೀಗೆ ಒಂದೊಂದೇ ಪದರಗಳು ಬಿಚ್ಚಿಕೊಳ್ಳುತ್ತ ಕುತೂಹಲ ಹೆಚ್ಚಿಸುತ್ತದೆ ಎಂದು ನಿರ್ದೇಶಕರು ತಿಳಸಿದ್ದಾರೆ

ರೋಚಕ ರಹಸ್ಯ, ಸಾಹಸಮಯ ಕಥೆಯ ‘ಮಹಿರ’ ಚಿತ್ರಕ್ಕೆ ವಿವೇಕ್ ಕೊಡಪ್ಪ ಬಂಡವಾಳ ಹೂಡಿದ್ದು, ಲಂಡನ್ನಿನಲ್ಲಿರುವ ಕನ್ನಡಿಗರು ಹಾಗೂ ಉತ್ತರ ಭಾರತೀಯರೂ ಕೈಜೋಡಿಸಿದ್ದಾರೆ

ತಾರಾಗಣದಲ್ಲಿ ವರ್ಜೀನಿಯ ರಾಡ್ರಿಗೇಸ್, ರಾಜ್ ಬಿ ಶೆಟ್ಟಿ, ಚೈತ್ರ ಆಚಾರ್, ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಕೆ ಪಿ ಶ್ರೀಧರ್, ದಿಲೀಪ್ ರಾಜ್, ಬಾಬು ಹಿರಣ್ಣಯ್ಯ, ಅಪೂರ್ವ ಮೊದಲಾದರಿದ್ದಾರೆ

ಜುಲೈ 7ರಂದು ಲಂಡನ್ ನ ಪ್ರತಿಷ್ಠಿತ ಅರೇನಾದಲ್ಲಿರುವ ಓ2 ಸಿನಿ ವರ್ಲ್ಡ್ ನಲ್ಲಿ ‘ಮಹಿರ’ ಪೂರ್ವಭಾವಿ ಪ್ರದರ್ಶನ ಕಂಡಿದ್ದು, ಕನ್ನಡಿಗರು ಮಾತ್ರವಲ್ಲದೆ ವಿದೇಶಿಯರಿಂದೂ ಮೆಚ್ಚುಗೆ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದ್ದು, ರಾಜ್ಯದ ಪ್ರೇಕ್ಷಕರೂ ಸಹ ಜುಲೈ 26ರಂದು ಚಿತ್ರ ವೀಕ್ಷಿಸಿ ಹರಸುವಂತೆ ಕೋರಿದೆ.

ಯುಎನ್ಐ ಎಸ್ಎ ಎಸ್ಎಚ್ 1615