Wednesday, Feb 26 2020 | Time 10:15 Hrs(IST)
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಉಜಾಲಾ ಮತ್ತು ಎಸ್ ಎಲ್ ಎನ್ ಪಿ ಉಪಕ್ರಮಗಳಿಗೆ ಐದು ವರ್ಷದ ಸಂಭ್ರಮ

ನವದೆಹಲಿ, ಜ 6 (ಯುಎನ್ಐ) ದೇಶವನ್ನು ಬೆಳಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಉಜಾಲಾ ಯೋಜನೆ ಮತ್ತು ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮ (ಎಸ್‌ಎಲ್‌ಎನ್‌ಪಿ) ಭಾನುವಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಉಜಾಲಾ (ಕೈಗೆಟಕುವ ಎಲ್ ಇ ಡಿ ಮೂಲಕ ಉನ್ನತ ಜ್ಯೋತಿ) ಉಪಕ್ರಮದ ಮೂಲಕ ದೇಶಾದ್ಯಂತ 36.13 ಕೋಟಿಗೂ ಹೆಚ್ಚು ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 46.92 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯ ಸಾಧ್ಯವಾಗಿದೆ.

ಉಜಾಲಾ (ಉನ್ನತ ಜ್ಯೋತಿ ಬೈ ಅಫರ್ಡೆಬಲ್ ಎಲ್ ಇ ಡಿ ಸ್ ಫಾರ್ ಆಲ್) ಯೋಜನೆಯಿಂದ ಇಂಧನ ವಲಯದ ಮಾರುಕಟ್ಟೆ ಭಾರಿ ಪರಿವರ್ತನೆ ಕಂಡು ಬಂದಿದೆ. ಉಜಾಲಾ ಕಾರ್ಯಕ್ರಮದಡಿ ಎಲ್‌ಇಡಿ ಬಲ್ಬ್‌ ಗಳ ವಿತರಣೆಯಿಂದ ಅವುಗಳ ದರ ತಮ್ಮ ಮೂಲ ಬೆಲೆಗಿಂತ ಹತ್ತನೇ ಒಂದು ಭಾಗಕ್ಕೆ ಇಳಿದಿದೆ. 2015 ರಲ್ಲಿ 310 ರೂಪಾಯಿಯಿದ್ದ ಎಲ್ ಇ ಡಿ ಬಲ್ಬ್ ದರ 2018 ರಲ್ಲಿ 38 ರೂಪಾಯಿಗೆ ಇಳಿಕೆ ಕಂಡಿದೆ. ಅಸಮರ್ಥ ಪ್ರಕಾಶಮಾನ ಬಲ್ಬ್‌ ಗಳಿಂದ ಎಲ್‌ಇಡಿಗಳಿಗೆ ಬದಲಾಯಿಸುವುದರಿಂದ ಕುಟುಂಬಗಳ ವಿದ್ಯುತ್ ಬಿಲ್ ಕೂಡ ಕಡಿಮೆಯಾಗಲು ಸಾಧ್ಯವಾಗಿದೆ. ಈ ಮೂಲಕ ಕುಟುಂಬಗಳು ಕಡಿಮೆ ದರದಲ್ಲಿ ಪ್ರಕಾಶಮಾನ ಬೆಳಕು ಪಡೆಯಲು ಸಾಧ್ಯವಾಗಿದೆ.
ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ಇಲ್ಲಿಯವರೆಗೆ 1.03 ಕೋಟಿಗೂ ಹೆಚ್ಚು ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 6.97 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯವಾಗಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದಡಿ ದೇಶಾದ್ಯಂತ ಸುಮಾರು 13,000 ಉದ್ಯೋಗಗಳನ್ನು ಸೃಷ್ಟಿಸಲು ಸಹ ಈ ಎಲ್ ಇ ಡಿ ಬೀದಿ ದೀಪ ಅಳವಡಿಕೆ ಕ್ರಮದಿಂದ ಸಾಧ್ಯವಾಗಿದೆ.
ಯುಎನ್ಐ ಜಿಎಸ್ಆರ್ 0719