Wednesday, Feb 26 2020 | Time 08:36 Hrs(IST)
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಉತ್ತಮ ಆಹಾರ ಪದ್ಧತಿಯಿಂದ ದೇಶದಲ್ಲಿ ಕಾಯಿಲೆಗಳ ಹೊರೆ ಕಡಿಮೆಯಾಗಲಿದೆ-ಡಾ.ಹರ್ಷವರ್ಧನ್

ನವದೆಹಲಿ, ಡಿ 26(ಯುಎನ್‍ಐ)- ದೇಶದಲ್ಲಿ ಕಾಯಿಲೆಗಳ ಹೊರೆ ಕಡಿಯಾಗಲು ಉತ್ತಮ ಆಹಾರ ಪದ್ಧತಿಗಳನ್ನು ಜನರಲ್ಲಿ ಪ್ರೋತ್ಸಾಹಿಸಿ, ಇದನ್ನು ಜನಾಂದೋಲನ ಮಾಡುವ ಅಗತ್ಯತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಪ್ರತಿಪಾದಿಸಿದ್ದಾರೆ.
ಗುರುವಾರ ಇಲ್ಲಿ ‘ಉತ್ತಮ ಆಹಾರ ಸೇವಿಸಿ’ ಕುರಿತ ಎರಡನೇ ಆವೃತಿಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತಮ ಆಹಾರ ಸೇವನೆ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‍ಎಸ್‍ಎಸ್‍ಎಐ)ದ ಪ್ರಯತ್ನಗಳು ಪ್ರಶಂಸನೀಯ. ಉತ್ತಮ ಆಹಾರ ಸೇವನೆಯಿಂದ ದೇಶದಲ್ಲಿ ಕಾಯಿಲೆಗಳ ಹೊರೆ ಕಡಿಮೆಯಾಗುತ್ತದೆ. ಉತ್ತಮ ಆಹಾರ ಸೇವನೆ ಅಭಿಯಾನವು ಸಮುದಾಯ ಕಾರ್ಯಕ್ರಮಗಳು, ಸ್ಥಳೀಯ ಊಟ, ಜನರು ಸೇರುವ ಸಭೆಗಳ ಭಾಗವಾಗಬೇಕಿದೆ. ಇದರಿಂದ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಅಪೌಷ್ಟಿಕತೆಯಿಂದ ನಲುಗುತ್ತಿರುವವರು ಒಂದು ಕಡೆಯಾದರೆ, ಮತ್ತೊಂದು ಆಹಾರವನ್ನು ಪೋಲು ಮಾಡಲಾಗುತ್ತಿದೆ. ಹೆಚ್ಚು ಆಹಾರ ಮತ್ತು ಆರೋಗ್ಯಕ್ಕೆ ಹಾನಿಯೆನಿಸುವ ತಿಂಡಿಗಳನ್ನು ತಿಂದು ಬೊಜ್ಜು ಬೆಳೆಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳದೆ, ಕಾಯಿಲೆಗಳಿಗೆ ಒಳಗಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಂದು ದಶದಕ ಹಿಂದೆ ಸೇವಿಸುತ್ತಿದ್ದ ಉತ್ತಮ ಆಹಾರಕ್ಕಿಂತ ತುಂಬಾ ಕಡಿಮೆ ಪ್ರಮಾಣದ ಆಹಾರವನ್ನು ನಾವು ಸೇವಿಸುತ್ತಿದ್ದೇವೆ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 1854