Sunday, Mar 29 2020 | Time 00:51 Hrs(IST)
National Share

ಉತ್ತರಪ್ರದೇಶದಲ್ಲಿ ಅತಿದೊಡ್ಡ ಡಿಫೆನ್ಸ್ ಎಕ್ಸ್‌ ಪೋ : ರಾಜನಾಥ್ ಸಿಂಗ್

ಲಕ್ನೋ, ಜ 5 (ಯುಎನ್‌ಐ) ಉತ್ತರಪ್ರದೇಶದಲ್ಲಿ ಅತಿದೊಡ್ಡ ರಕ್ಷಣಾ ಪ್ರದರ್ಶನ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಈ ಅತಿದೊಡ್ಡ ರಕ್ಷಣಾ ಎಕ್ಸ್‌ ಪೋ ಉದ್ಘಾಟಿಸಲಿದ್ದು ಇದು ಉತ್ತರ ಪ್ರದೇಶವನ್ನು ರಕ್ಷಣಾ ವಲಯ ಮತ್ತು ವೈಮಾನಿಕ ತಯಾರಿಕಾ ಕೇಂದ್ರದ ಪ್ರಮುಖ ತಾಣವನ್ನಾಗಿ ಮಾಡಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 4 ರಿಂದ 9 ರವರೆಗೆ ಲಕ್ನೋದಲ್ಲಿ ನಡೆಯಲಿರುವ ಅತಿದೊಡ್ಡ ರಕ್ಷಣಾ ಪ್ರದರ್ಶನಕ್ಕೆ ಫೆಬ್ರವರಿ 5 ರಂದು ಪ್ರಧಾನಿ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಸುಮಾರು 200 ಎಕರೆ ಪ್ರದೇಶದಲ್ಲಿ ಪ್ರದರ್ಶನ ನಡೆಯಲಿದೆ ಎಂದರು. ಈವರೆಗೆ, ಸುಮಾರು 925 ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ ಎಂದು ಅವರು ಹೇಳಿದರು.
ಪ್ರಸ್ತಾವಿತ ಡಿಫೆನ್ಸ್ ಎಕ್ಸ್‌ ಪೋ 2020 ಕುರಿತು ಚರ್ಚಿಸಲು ಕೇಂದ್ರ ರಕ್ಷಣಾ ಸಚಿವರು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಬಹು ರಾಷ್ಟ್ರೀಯ ಕಂಪೆನಿಗಳು ಸೇರಿದಂತೆ 925 ಕಂಪನಿಗಳು ಎಕ್ಸ್‌ ಪೋದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವರಿಗೆ ತಿಳಿಸಲಾಯಿತು.
ಬೆಂಗಳೂರಿನಲ್ಲಿ 2018 ರಲ್ಲಿ ನಡೆದ ಡಿಫೆನ್ಸ್ ಎಕ್ಸ್‌ ಪೋ ದಲ್ಲಿ 702 ಕಂಪನಿಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ರಕ್ಷಣಾ ಸಚಿವರು ಪ್ರೋಮೋ ಚಿತ್ರವನ್ನೂ ಸಹ ಬಿಡುಗಡೆ ಮಾಡಿದ್ದರು.
ರಕ್ಷಣಾ ವಲಯದಲ್ಲಿ ಡಿಜಿಟಲ್ ಕ್ರಾಂತಿ ಈ ವರ್ಷದ ಆದ್ಯತೆಯ ವಿಷಯವಾಗಿದೆ. ಏರೋಸ್ಪೇಸ್ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಈ ವರ್ಷದ ಎಕ್ಸ್‌ ಪೋದಲ್ಲಿ ಪರಿಚಯಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ. ಅಲ್ಲದೇ ಉತ್ತರಪ್ರದೇಶದ ಪೆವಿಲಿಯನ್ ಈ ವರ್ಷದ ಎಕ್ಸ್‌ ಪೋದ ಮತ್ತೊಂದು ವಿಶೇಷತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ತಮ್ಮ ಸರ್ಕಾರ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿದೆ ಮತ್ತು ರಾಜ್ಯದ ಗ್ರಹಿಕೆ ಬದಲಿಸಿದೆ ಎಂದು ಹೇಳಿದರು.
"ರಾಜ್ಯದಲ್ಲಿ ಹೂಡಿಕೆದಾರರ ಶೃಂಗಸಭೆ ಮತ್ತು ಕುಂಭ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಂಡಿದ್ದವು. ಇವು ಉತ್ತಮ ಆಡಳಿತದ ಸಾಕ್ಷಿಯಾಗಿದೆ, ಇವು ರಾಜ್ಯಕ್ಕೆ ಜಾಗತಿಕ ಗುರುತನ್ನು ನೀಡಿವೆ. ಈಗ, ಲಕ್ನೋವನ್ನು ರಕ್ಷಣಾ ಕೈಗಾರಿಕಾ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಲು ಡಿಫೆನ್ಸ್ ಎಕ್ಸ್‌ಪೋ ಸಹಾಯ ಮಾಡಲಿದೆ ಎಂದು ಯೋಗಿ ಅಭಿಪ್ರಾಯಪಟ್ಟಿದ್ದಾರೆ.
ರಕ್ಷಣಾ ಕಾರಿಡಾರ್ ತಲೆ ಎತ್ತಲಿರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ಬಗ್ಗೆ ಸಹ ಯೋಗಿ ಆದಿತ್ಯನಾಥ್ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಜಂಟಿ ಕಾರ್ಯದರ್ಶಿ ಚಂದ್ರಕಾಂತ್ ಭಾರ್ತಿ ಮಾತನಾಡಿ, ಪ್ರದೇಶ, ಪ್ರದರ್ಶಕರು ಮತ್ತು ಆದಾಯದ ದೃಷ್ಟಿಯಿಂದ ಅತಿದೊಡ್ಡ ರಕ್ಷಣಾ ಎಕ್ಸ್‌ ಪೋ ಇದಾಗಿದ್ದು ಈ ಪ್ರದರ್ಶನದ ಸಂದರ್ಭದಲ್ಲಿ 65 ಒಡಂಬಡಿಕೆಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಸುಮಾರು 70 ದೇಶಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಅಮೆರಿಕ, ರಷ್ಯಾ, ಫ್ರಾನ್ಸ್, ಯುಕೆ, ದಕ್ಷಿಣ ಕೊರಿಯಾದ ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ ಎಂದು ಅವರು ಮಾಹಿತಿ ನೀಡಿದರು.
ಈ ಪ್ರದರ್ಶನದಲ್ಲಿ ಸೇನೆ, ನೌಕೆ ಮತ್ತು ವಾಯುಪಡೆಗಳು ತಮ್ಮ ಅದ್ಭುತ ಪರಾಕ್ರಮವನ್ನು ಪ್ರದರ್ಶಿಸಲಿವೆ. ವಿವಿಧ ಏಜೆನ್ಸಿಗಳ ಕಾರ್ಯಾಗಾರಗಳು ಸಹ ನಡೆಯಲಿವೆ. ಅಲ್ಲದೇ ಈ ವೇದಿಕೆಯಲ್ಲಿ ಉತ್ತರಪ್ರದೇಶದ ಸಾಂಸ್ಕೃತಿಕ ವೈವಿಧ್ಯತೆ ಕೂಡ ಪ್ರದರ್ಶಿತವಾಗಲಿದೆ.
ಯುಎನ್ಐ ಜಿಎಸ್ಆರ್ 2230
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..