Saturday, Jan 25 2020 | Time 02:21 Hrs(IST)
National Share

ಉನ್ನವೋ ಅತ್ಯಾಚಾರ ಸಂತ್ರಸ್ತೆ ವಿಧಿವಶ

ಉನ್ನವೋ ಅತ್ಯಾಚಾರ ಸಂತ್ರಸ್ತೆ ವಿಧಿವಶ
ಉನ್ನವೋ ಅತ್ಯಾಚಾರ ಸಂತ್ರಸ್ತೆ ವಿಧಿವಶ

ನವದೆಹಲಿ, ಡಿ ೦೭ (ಯುಎನ್‌ಐ) ದುಷ್ಕರ್ಮಿಗಳು ಪೆಟ್ರೋಲ ಸುರಿದು ಹಚ್ಚಿದ ಬೆಂಕಿಯಲ್ಲಿ ಬೆಂದು ಹೋಗಿದ್ದ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೃದಯಾಘಾತಕ್ಕೊಳಗಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಆಕೆಯ ಮೇಲೆ ಆರೋಪಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ

ಆಕೆಯನ್ನು ಲಖನೌದ ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆಯಿಂದ ಏರ್ ಲಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಗಿತ್ತು. ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೧:೪೦ಕ್ಕೆ ಮೃತ ಪಟ್ಟಿದ್ದಾರೆ.

ಆಸ್ಪತ್ರೆಗೆ ಕರೆ ತಂದಾಗ ಆಕೆ ದೇಹದ ಶೇ ೯೦ರಷ್ಟು ಭಾಗ ಸುಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ನಲ್ಲಿರುವ ಆಕೆ ಸ್ಥಿತಿ ಗಂಭೀರವಾಗಿತ್ತು, ರಾತ್ರಿ ೧೧:೧೦ಕ್ಕೆ ಮೊದಲಿಗೆ ಹೃದಯಸ್ತಂಭನವಾಯಿತು, ಸತತ ಪ್ರಯತ್ನದ ನಂತರವೂ ಆಕೆಯನ್ನು ಬದುಕಿಸಲು ಆಗಲಿಲ್ಲ” ಎಂದು ಪ್ಲಾಸ್ಟಿಕ್ ಸರ್ಜರಿ, ಸುಟ್ಟಗಾಯಗಳ ಚಿಕಿತ್ಸಾ ತಜ್ಞ ಡಾ ಶಲಾಬ್ ಕುಮಾರ್ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬರುವ ವೇಳೆಯಲ್ಲಿ ಗುರುವಾರ ಶಿವರಾಂ ತ್ರಿವೇದಿ, ಶುಭಂ ತ್ರಿವೇದಿ ಎಂಬ ಇಬ್ಬರು ಆರೋಪಿಗಳು ಸೇರಿದಂತೆ ಹರಿಶಂಕರ್ ತ್ರಿವೇದಿ, ರಾಮ್ ಕಿಶೋರ್ ತ್ರಿವೇದಿ, ಉಮೇಶ್ ವಾಜಪೇಯಿ ಎಂಬ ಮೂವರು ಸೇರಿ ಒಟ್ಟು ಐದು ಮಂದಿ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಯುಎನ್‌ಐ ಎಸ್‌ಎ ವಿಎನ್ ೦೮೫೮

More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..