Sunday, Sep 27 2020 | Time 00:10 Hrs(IST)
Parliament Share

ಉನ್ನಾವೊ ಘಟನೆ ಪ್ರತಿದ್ವನಿ: ರಾಜ್ಯಸಭೆ ಕಲಾಪ ಮುಂದಕ್ಕೆ

ನವದೆಹಲಿ, ಡಿಸೆಂಬರ್ 5 (ಯುಎನ್‌ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಭಾರಿ ಕೋಲಹಲಕ್ಕೆ ಕಾರಣವಾಗಿ ಕೊನೆಗೆ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.
ಈ ಭೀಕರ ಕೃತ್ಯದ ಬಗ್ಗೆ ಸದನಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಆದರೆ ಶೂನ್ಯವೇಳೆಯಲ್ಲಿ ಈ ವಿಷಯ ಕಾರ್ಯ ಕಲಾಪಪಟ್ಟಿಯಲ್ಲಿ ಇರದ ಕಾರಣ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿದರು.
ಆದರು ಪಟ್ಟು ಬಿಡದ ಪ್ರತಿಪಕ್ಷದ ಸದಸ್ಯರು ಚರ್ಚೆಗೆ ಪಟ್ಟು ಹಿಡಿದು ಒತ್ತಾಯಿಸಿದರು. ಸದನವನ್ನು ನಿಯಂತ್ರಣಕ್ಕೆ ತರಲು ಸಭಾಪತಿ ನಾಯ್ಡು ಅವರು ಪದೆ ಪದೇ ಮನವಿ ಮಾಡಿದರೂ ಸದಸ್ಯರು ಕಿಗೊಡಲಿಲ್ಲ . ನಂತರ ಕಲಾಪವನ್ನು ಕೆಲ ಕಾಲ ಮುಂದೂಡಿದರು.
ಇದಕ್ಕೂ ಮುನ್ನ, ಸಂಸದೀಯ ಸಮಿತಿ ಸಭೆಯಲ್ಲಿ ಸದಸ್ಯರ ಗೈರು ಹಾಜರಾತಿಯ ಬಗ್ಗೆ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "80 ಸದಸ್ಯರಲ್ಲಿ 18 ಸದಸ್ಯರು ಮಾತ್ರ ಹಾಜರಾಗಿದ್ದಾರೆ ಸದನ ನಡೆಯುವಾಗ ಸದಸ್ಯರಿಗೆ ಇದನ್ನು ಬಿಟ್ಟು ಬೇರೆ ಎನು ಕೆಲಸ ಎಂದು ಅಸಮಾಧಾನ ಹೊರಹಾಕಿದರು. ಸದನ ಸಮಿತಿ ಸಭೆಗಳಲ್ಲಿ ಧಾರ್ಮಿಕವಾಗಿ ಭಾಗವಹಿಸಿದ್ದ ಸದಸ್ಯರ ಹೆಸರನ್ನು ಪ್ರಸ್ತಾಪ ಮಾಡಿ ಇತರರು ಅವರಿಂದ ಸ್ಫೂರ್ತಿ ಪಡೆಯಲಿ ಎಂದರು.
ಅತ್ಯಾಚಾರ ಘಟನೆಯಿಂದ ಬದುಕುಳಿದ 23 ವರ್ಷದ ಮಹಿಳೆಯನ್ನು ಮನೆಯಿಂದ ಹೊರಕ್ಕೆ ಎಳೆದು ಪೆಟ್ರೋಲ್ ಸರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿದೆ ಕಳೆದ ಮಾರ್ಚ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದವರೆ ಈ ಕೃತ್ಯದ ಹಿಂದೆ ಇರಬಹದು ಎಂದೂ ಶಂಕಿಸಲಾಗಿದೆ.
ಯುಎನ್ಐ ಕೆಎಸ್ಆರ್ 1248
More News

ಲೋಕಸಭೆಯಲ್ಲಿ ಶೇ 167 ಉತ್ಪಾದಕತೆ: ಓಂ ಬಿರ್ಲಾ

23 Sep 2020 | 10:20 PM

 Sharesee more..
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..
58 ದೇಶಗಳು  517 ಕೋಟಿ    ಇದು ಪ್ರಧಾನಿ ಮೋದಿ  ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..