Saturday, Jan 25 2020 | Time 01:22 Hrs(IST)
National Share

ಉನ್ನಾವ್ ಪ್ರಕರಣದ ಅತ್ಯಾಚಾರಿಗಳನ್ನು ತಿಂಗಳೊಳಗೆ ಗಲ್ಲಿಗೇರಿಸಿ: ಸ್ವಾತಿ ಮಾಲಿವಾಲ್

ಉನ್ನಾವ್  ಪ್ರಕರಣದ  ಅತ್ಯಾಚಾರಿಗಳನ್ನು ತಿಂಗಳೊಳಗೆ ಗಲ್ಲಿಗೇರಿಸಿ:  ಸ್ವಾತಿ ಮಾಲಿವಾಲ್
ಉನ್ನಾವ್ ಪ್ರಕರಣದ ಅತ್ಯಾಚಾರಿಗಳನ್ನು ತಿಂಗಳೊಳಗೆ ಗಲ್ಲಿಗೇರಿಸಿ: ಸ್ವಾತಿ ಮಾಲಿವಾಲ್

ನವದೆಹಲಿ, ಡಿಸೆಂಬರ್ 7 (ಯುಎನ್‌ಐ) ಉನ್ನಾವ್ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಒಂದು ತಿಂಗಳಲ್ಲೆ ಮುಗಿಸಿ, ನಂತರ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕೆಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಅವರು ಆಗ್ರಹಪಡಿಸಿದ್ದಾರೆ.

ತ್ವರಿತ ಶಿಕ್ಷೆಗೆಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು ಯುಪಿ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಕ್ರಮಕೈಗೊಂಡು, ಈ ಪ್ರಕರಣದಲ್ಲಿ ಭಾಗಿಯಾದ ಅತ್ಯಾಚಾರಿಗಳನ್ನು ಒಂದು ತಿಂಗಳೊಳಗೆ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.

ರಾಜಕೀಯ ನಾಯಕರ ನೀಡಿರುವ ಭದ್ರತೆ ರದ್ದುಪಡಿಸಬೆಕು ಎಂದು ಗೃಹ ಕಾರ್ಯದರ್ಶಿಗೆ ಮನವಿ ಮಾಡಲಿದ್ದೇನೆ ಮಹಿಳೆ ಅನುಭವಿಸುವ ಭಯ ಮತ್ತು ಅಭದ್ರತೆಯನ್ನು ಅವರು ಅರಿಯಬೇಕು ಎಂದು ಆಗ್ರಹಪಡಿಸಿದ್ದಾರೆ.

ಆರು ತಿಂಗಳೊಳಗೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ವ್ಯವಸ್ಥೆಯನ್ನು ಸರ್ಕಾರ ರೂಪಿಸಿ ಜಾರಿಗೆ ತರುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಯುಎನ್ಐ ಕೆಎಸ್ಆರ್ 1000

More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..