Wednesday, Jan 29 2020 | Time 14:58 Hrs(IST)
 • ಅಮೆರಿಕಾದಲ್ಲಿ ಸಿನಿಮಾಗಳಿಗಿಂತ, ಗ್ರಂಥಾಲಯಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಂತೆ !
 • ವುಹಾನ್‌ನಿಂದ ವಿದೇಶಿ ನಾಗರಿಕರ ಸ್ಥಳಾಂತರಕ್ಕೆ ಚೀನಾ ಸಹಾಯ
 • ಎಂ ಎಸ್ ಧೋನಿ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ
 • ರೋಹಿತ್ ಸ್ಪೋಟಕ ಅರ್ಧಶತಕ: ನ್ಯೂಜಿಲೆಂಡ್‌ಗೆ 180 ರನ್ ಗುರಿ
 • ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು, 40 ಜನರಿಗೆ ಗಾಯ
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
Karnataka Share

ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು..

ಉಡುಪಿ , ಡಿಸೆಂಬರ್ 8 (ಯುಎನ್‌ಐ) ಜನರಿಗೆ ತೊಂದರೆ ಕೊಡುತ್ತಿದ್ದ ಚಿರತೆಯನ್ನು ಬೋನಿಗೆ ಕೆಡುವವಲ್ಲಿ ಅರಣ್ಯ ಸಿಬ್ಬಂದಿಕೊನೆಗೂ ಯಶಸ್ವಿಯಾಗಿದೆ.
ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಲಹಳ್ಳಿ ಬಳಿಯ ಯಾದಡಿ-ಮತ್ಯಾಡಿ ಗ್ರಾಮದ ಗುಡ್ಡತ್ತಿನಲ್ಲಿ ಚಿರತೆ ಬಲೆಗೆ ಸಿಕ್ಕಿಬಿದ್ದಿದ್ದು ಸದ್ಯ ಜನರು ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿದೆ..
ಇತ್ತೀಚಿನ ದಿನಗಳಲ್ಲಿ ಈ ಸ್ಥಳದಲ್ಲಿ ಬಲೆಗೆ ಬಿದ್ದ ಸಿಕ್ಕಿಬಿದ್ದ ಎರಡನೇ ಚಿರತೆ ಇದಾಗಿದೆ . ಮೊದಲ ಚಿರತೆ ಕಳೆದ ನವೆಂಬರ್ 27 ರಂದು ಸಿಕ್ಕಿಬಿದ್ದಿತ್ತು. ಆದರೆ ಸ್ಥಳೀಯರು ಇನ್ನೂ ಎರಡು ಚಿರತೆಗಳನ್ನು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು ಇವುಗಳನ್ನು ಹಿಡಿಯಬೇಕು ಎಂದು ಹೇಳಿದ್ದಾರೆ.
ದನಕರುಗಳು ಮತ್ತು ನಾಯಿಗಳು ಕಣ್ಮರೆಯಾಗುತ್ತಿವೆ ಎಂದು ಅವರು ದೂರು ನೀಡಿದ್ದರು. ಹೀಗಾಗಿ, ಅರಣ್ಯ ಅಧಿಕಾರಿಗಳು ನವೆಂಬರ್ 28 ರಂದು ಗುಡ್ಡಟ್ಟೆಯ ಚಂದ್ರವತಿಯ ಮನೆಯ ಬಳಿ ಪಂಜರವನ್ನು ಇಟ್ಟುಕೊಂಡು ಕಡೆಗೂ ಬಲೆಗೆ ಚಿರತೆ ಕೆಡುವುದರಲ್ಲಿ ಯಶ ಕಂಡಿದ್ದಾರೆ.
ಚಿರತೆ ಶನಿವಾರ ಸಿಕ್ಕಿಬಿದ್ದಿರಬೇಕು ಎಂದುಅರಣ್ಯ ಅಧಿಕಾರಿ ಜಿ ಚಿದಾನಂದಪ್ಪ ಹೇಳಿದ್ದಾರೆ. "ಚಿರತೆ ಸಿಕ್ಕಿಬಿದ್ದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ದೊರಕಿದೆ ಎಂದು ಅವರು ಹೇಳಿದರು.
ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪಂಜರದಿಂದ ಚಿರತೆಯನ್ನು ಸ್ಥಳಾಂತರಿಸಿ, ಪಶುವೈದ್ಯ ವೈದ್ಯರೊಬ್ಬರು ಚಿರತೆಯನ್ನು ಪರೀಕ್ಷಿಸಿ ಆರೋಗ್ಯವಾಗಿದೆ ಎಂದು ಘೋಷಿಸಿದ್ದಾರೆ
ನಂತರ ಅದನ್ನು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಅವರು ಹೇಳಿದರು.
ಜನರು ಎರಡು ಚಿರತೆಗಳ ಬಗ್ಗೆ ದೂರು ನೀಡಿದ್ದರಿಂದ, ಅದೇ ಪ್ರದೇಶದಲ್ಲಿ ಮತ್ತೊಂದು ಬಲೆ ಇಡಲು ಇಲಾಖೆ ಅಯೋಜಿಸಿದೆ ಎಂದೂ ಚಿದಾನಂದಪ್ಪ ಹೇಳಿದರು.
ಯುಎನ್ಐ ಕೆಎಸ್ಆರ್ 1235