Wednesday, Feb 26 2020 | Time 08:58 Hrs(IST)
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Election Share

ಎಎಪಿಯ 'ಉಚಿತ ನೀರು, ವಿದ್ಯುತ್ 'ಯೋಜನೆ ಸ್ಥಗಿತಗೊಳಿಸುವುದಿಲ್ಲ; ಬಿಜೆಪಿ

ನವದೆಹಲಿ, ಜ 18 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಗೆ ಭರದಿಂದ ಸಿದ್ಧತೆ ಆರಂಭಿಸಿರುವ ಬಿಜೆಪಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಆರಂಭಿಸಿರುವ 'ಉಚಿತ ನೀರು ಮತ್ತು ಉಚಿತ ವಿದ್ಯುತ್' ಯೋಜನೆಯನ್ನು ಸ್ಥಗಿತಗೊಳಿಸುವ ಚಿಂತನೆಯಿಲ್ಲ. ಅದನ್ನು ಕಡಿಮೆಗೊಳಿಸುವುದೂ ಇಲ್ಲ, ಹೆಚ್ಚಿಸುವುದೂ ಇಲ್ಲ ಎಂದು ತಿಳಿಸಿದ್ದಾರೆ.
ಆದರೆ ಎಎಪಿ ಪಕ್ಷ ಕಳೆದ ಮೂರು ತಿಂಗಳಿಂದಷ್ಟೇ ಉಚಿತ ನೀರು ಮತ್ತು ವಿದ್ಯುತ್ ನೀಡುತ್ತಿದೆ. ಕೇಜ್ರೀವಾಲ್ ಅವರು ಜನರಿಗೆ ನೀಡಿರುವ ಹಣದ ನೆರವಿನ ಕುರಿತು ಮಾಹಿತಿ ನೀಡಲಿ. ನಾವು ಎಎಪಿಗಿಂತ ಐದು ಪಟ್ಟು ಹಣದ ನೆರವು ಒದಗಿಸುತ್ತೇವೆ. ಈ ಭರವಸೆಯನ್ನು ಪೂರೈಸುವಲ್ಲಿ ನಾವು ವಿಫಲವಾದರೆ ರಾಜಕೀಯವನ್ನೇ ತ್ಯಜಿಸುವುದಾಗಿ ತಿಳಿಸಿದರು.
ಕಳೆದ ಮೂರು ತಿಂಗಳಿಂದ ದೆಹಲಿಯ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡಿದ್ದರೆ, ಜನರು ತಿಂಗಳಿಗೆ 800 ರೂ. ಉಳಿಸಿದಂತಾಗುತ್ತದೆ. ಅದು ಕೇವಲ 2400 ರೂ.ಗಳಾಗುತ್ತದೆ. 2015ರಲ್ಲಿ ಕೇಜ್ರೀವಾಲ್ ನೀಡಿದ್ದ ಶೇ. 30ರಷ್ಟು ವಿದ್ಯುತ್ ದರ ಕಡಿತದ ಭರವಸೆಯನ್ನು ಜಾರಿಗೊಳಿಸಿದ್ದರೆ ಜನರಿಗೆ 20ರಿಂದ 22 ಸಾವಿರ ರೂ.ಗಳಷ್ಟು ಉಳಿತಾಯವಾಗುತ್ತಿತ್ತು ಎಂದರು.
ಮಹಿಳೆಯರಿಗೆ ಕೂಡ ಕಳೆದ ಮೂರು ತಿಂಗಳಿಂದ ಮಾತ್ರ ಉಚಿತ ಪ್ರಯಾಣ ಸೇವೆ ಒದಗಿಸಲಾಗಿದೆ. ಅದರಿಂದ ಅವರು ಇಲ್ಲಿಯವರೆಗೆ ಕೇವಲ 900 ರೂ. ಉಳಿಸಿದಂತಾಗಿದೆ ಎಂದರು.
ದೆಹಲಿ ಸರ್ಕಾರ ಉಚಿತ ನೀರು ಪೂರೈಕೆಯ ಹೆಸರಿನಲ್ಲಿ ಕೊಳಚೆ ನೀರು ಒದಗಿಸುತ್ತಿದೆ. ನಾವು ಚುನಯಿತರಾದರೆ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದ ಜೊತೆಗೆ, ಮೂರು ವರ್ಷದಲ್ಲಿ ದೆಹಲಿಯ ಜನರು ಆರ್ ಓ ಶುದ್ಧೀಕರಣ ಯಂತ್ರ ಬಳಸದಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಯುಎನ್ಐ ಎಸ್ಎಚ್ 1736