Wednesday, Jan 29 2020 | Time 13:45 Hrs(IST)
 • ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು, 40 ಜನರಿಗೆ ಗಾಯ
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
Sports Share

ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ

ಕೋಲ್ಕತಾ, ಡಿ 8 (ಯುಎನ್‌ಐ) ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಎಟಿಕೆ ತಂಡದ ಪರ ಗಮನಾರ್ಹ ಪ್ರದರ್ಶನ ತೋರುತ್ತಿರುವ ಫಿಜಿಯನ್ ವೃತ್ತಿಪರ ಫುಟ್ಬಾಲ್‌ ಆಟಗಾರ ರಾಯ್ ಕೃಷ್ಣ ಅವರು ನವೆಂಬರ್ ತಿಂಗಳ ಐಎಸ್‌ಎಲ್‌ ಹಿರೋ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೆಮ್‌ಶೆಡ್‌ಪುರ ಎಫ್‌ಸಿಯ ಸರ್ಜಿಯೊ ಕ್ಯಾಸ್ಟೆಲ್‌, ಒಡಿಶಾ ಎಫ್‌ಸಿಯ ಅರಿಂದನೆ ಸ್ಯಾಂಟನ, ಎಫ್‌ಸಿ ಗೋವಾದ ಮೌರ್ತದಾ ಫಾಲ್‌ ಹಾಗೂ ಬೆಂಗಳೂರು ಎಫ್‌ಸಿ ತಂಡದ ಗೋಲ್‌ ಕೀಪರ್‌ ಗುರುಪ್ರೀತ್‌ ಸಂಧು ಈ ಪ್ರಶಸ್ತಿ ಪೈಪೋಟಿಯಲ್ಲಿ ಇದ್ದರು. ಆದರೆ, ಅಂತಿಮವಾಗಿ ಈ ಪ್ರಶಸ್ತಿ ರಾಯ್‌ ಕೃಷ್ಣ ಪಾಲಾಯಿತು.
ಭಾರತ ಮೂಲದ ರಾಯ್ ಕೃಷ್ಣ ಅವರು ಹಲವು ಪಂದ್ಯಗಳಲ್ಲಿ ಮೂರು ಗೋಲುಗಳಿಸಿದ್ದಾರೆ. ಅಲ್ಲದೇ, ಎಟಿಕೆ ಪ್ರಸಕ್ತ ಟೂರ್ನಿಯಲ್ಲಿ ಸೋಲಿಲ್ಲದೆ ಅಜೇಯರಾಗಿ ಉಳಿಯುವಲ್ಲಿ ಇವರ ಪಾತ್ರ ಅಮೋಘವಾದದ್ದು. ತಿಂಗಳ ಹಿರೋ ಆಟಗಾರ ಪ್ರಶಸ್ತಿ ಪಡೆದ ಎರಡನೇ ಎಟಿಕೆ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಡೇವಿಡ್‌ ವಿಲಿಯಮ್ಸ್ ಪಡೆದಿದ್ದರು.
ತಿಂಗಳ ಆರಂಭದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ತಂಡದ ವಿರುದ್ಧ ಕೃಷ್ಣ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಸಾಲ್ಟ್ ಲೇಕ್‌ ತವರು ಕ್ರೀಡಾಂಗಣದಲ್ಲಿ ಎಟಿಪಿ ಪರ ರಾಯ್‌ ತಮ್ಮ ಅಮೋಘ ಕೌಶಲ ಮೆರೆದಿದ್ದರು. ನಂತರ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಕಠಿಣ ಹೋರಾಟದ ನಡುವೆಯೂ ಡ್ರಾ ಸಾಧಿಸಿತ್ತು.
ನವೆಂಬರ್‌ನಲ್ಲಿ ತವರು ಅಭಿಮಾನಿಗಳ ಎದುರು ಕೃಷ್ಣ ಮತ್ತೊಂದು ಗೋಲು ಗಳಿಸಿದ್ದರು. ಇವರ ಗೋಲಿನ ನೆರವಿನಿಂದ ಎಟಿಕೆ ತಂಡ, ಮುಂಬೈ ಎಫ್‌ಸಿ ವಿರುದ್ಧ 2-2 ಸಮಬಲ ಸಾಧಿಸಿತು. ಇದರೊಂದಿಗೆ ಎಟಿಕೆ ಸೋಲಿನ ಸುಳಿಯಿಂದ ಪಾರಾಗಿತ್ತು.
ಶನಿವಾರ ನಡೆದಿದ್ದ ಪಂದ್ಯದಲಲ್ಲೂ ರಾಯ್‌ ಕೃಷ್ಣ ಎರಡು ಗೋಲು ಗಳಿಸಿದ್ದರು. ಇದರ ಫಲವಾಗಿ ಎಟಿಕೆ ತಂಡ 3-0 ಅಂತರದಲ್ಲಿ ನಾರ್ಥ್ಈಸ್ಟ್ ಯುನೈಟೆಡ್‌ ತಂಡದ ವಿರುದ್ಧ ಜಯ ಸಾಧಿಸಿತ್ತು.
ಯುಎನ್‌ಐ ಆರ್‌ ಕೆ 1224