Friday, Dec 6 2019 | Time 01:10 Hrs(IST)
Sports Share

ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್

ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್
ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್

ಪ್ಯಾರಿಸ್, ನ 18 (ಯುಎನ್‌ಐ) ಎಟಿಪಿ ಸೋಮವಾರ ಬಿಡುಗಡೆ ಮಾಡಿದ ವರ್ಷಾಂತ್ಯದ ಪುರುಷರ ಟೆನಿಸ್ ಶ್ರೇಯಾಂಕದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಐದನೇ ಬಾರಿ ವಿಶ್ವ ಅಗ್ರ ಸ್ಥಾಾನ ಅಲಂಕರಿಸಿದ್ದಾರೆ.

ಕಳೆದ ವಾರ ಮುಕ್ತಾಯವಾದ ಎಟಿಪಿ ಫೈನಲ್ಸ್‌ ಟೂರ್ನಿಯ ಗುಂಪು ಹಂತದಲ್ಲೇ ನಡಾಲ್ ನಿರ್ಗಮಿಸಿದ್ದರು. ಆದರೆ, ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸೆಮಿಫೈನಲ್ಸ್‌ ಹಣಾಹಣಿಯಲ್ಲಿ ಸ್ಟಿಫನೊಸ್ ಸಿಟ್ಸಿಪಸ್ ವಿರುದ್ಧ ಸೋಲು ಅನುಭವಿಸಿದ್ದರು. ಪ್ರಸಕ್ತ ವರ್ಷದ ಮುಕ್ತಾಯಕ್ಕೆೆ ನಡಾಲ್ ತನ್ನ ಖಾತೆಯಲ್ಲಿ 9,985 ಅಂಕಗಳನ್ನು ಕಲೆ ಹಾಕಿದ್ದಾರೆ. ಜೊಕೊವಿಚ್ ಅವರು 9,145 ಅಂಕ ಪಡೆದುಕೊಂಡು ಎರಡನೇ ಸ್ಥಾನಕ್ಕೆೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದರೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ರಫೆಲ್ ನಡಾಲ್, ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್ (6,590) ಅವರು ಕ್ರಮವಾಗಿ ಮೂರು ಸ್ಥಾನಗಳೊಂದಿಗೆ 2019ರ ಆವೃತ್ತಿಯನ್ನು ಮುಗಿಸಿದರು. ನಡಾಲ್ ಹಾಗೂ ಜೊಕೊವಿಚ್ ಅವರು ಪ್ರಸಕ್ತ ವರ್ಷದಲ್ಲಿ ಎರಡು ಮಹತ್ವದ ಟೂರ್ನಿಗಳಲ್ಲಿ ಜಯ ಸಾಧಿಸಿದ್ದಾರೆ. ಜೊಕೊವಿಚ್ ಅವರು ಆಸ್ಟ್ರೇಲಿಯಾ ಓಪನ್ ಹಾಗೂ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ನಡಾಲ್ ಅವರು ಫ್ರೆೆಂಚ್ ಓಪನ್ ಹಾಗೂ ಯುಎಸ್ ಓಪನ್ ಗೆದ್ದಿದ್ದಾರೆ.

ಸತತ ಎರಡನೇ ವರ್ಷವೂ ರೋಜರ್ ಫೆಡರರ್ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾಾರೆ. ಫ್ರೆೆಂಚ್ ಓಪನ್ ಫೈನಲ್ ನಲ್ಲಿ ನಡಾಲ್ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದ ಡೊಮಿನಿಚ್ ಥೀಮ್ 5,825 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕಳೆದ ಭಾನುವಾರ ಎಟಿಪಿ ಫೈನಲ್ಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದ 21ರ ಪ್ರಾಾಯದ ಸ್ಟಿಫನೊಸ್ ಸಿಟ್ಸಿಪಸ್ ಅವರು ಡೆನಿಲ್ ಮೆಡ್ವೆಡೆವ್ ಬಳಿಕ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ಅಗ್ರ ಶ್ರೇಯಾಂಕಿತ ಆ್ಯಂಡಿ ಮರ್ರೆೆ ಅವರು 126ನೇ ಶ್ರೇಯಾಂಕಕ್ಕೇರಿದ್ದಾರೆ.

ಯುಎನ್‌ಐ ಆರ್ ಕೆ 2014

More News

ಆರ್ಥರ್ ಶ್ರೀಲಂಕಾ ತಂಡದ ಕೋಚ್

05 Dec 2019 | 10:02 PM

 Sharesee more..

ಎಸ್ಎ ಜಿ: ಕರ್ನಾಟಕದ ಲಿಖಿತ್ ಗೆ ಬಂಗಾರ

05 Dec 2019 | 9:42 PM

 Sharesee more..

ಸೂಪರ್ ಡಿವಿಜನ್: ಡ್ರೀಮ್ ಯುನೈಟೆಡ್ ಎಫ್ ಸಿಗೆ ಜಯ

05 Dec 2019 | 9:40 PM

 Sharesee more..

ದಿಗ್ಗಜ ಬೌಲರ್ ಬಾಬ್ ವಿಲ್ಲೀಸ್ ನಿಧನ

05 Dec 2019 | 8:05 PM

 Sharesee more..