Friday, Feb 28 2020 | Time 09:09 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಎಡಪಂಥೀಯರಿಂದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ: ಶಿಕ್ಷಣ ತಜ್ಞರ ಕಳವಳ; ಪ್ರಧಾನಿಗೆ ಪತ್ರ

ನವದೆಹಲಿ, ಜ. 12 (ಯುಎನ್‌ಐ) ಎಡಪಂಥೀಯ ಕಾರ್ಯಕರ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ 200 ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಮ್ಮ ಕುಂದುಕೊರತೆಯನ್ನು ತಿಳಿಸಿ, ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಜೆಎನ್‌ಯುನಿಂದ ಹಿಡಿದು ಜಾಮಿಯಾ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿನ ಇತ್ತೀಚಿನ ಘಟನೆಗಳು ಎಡಪಂಥೀಯ ಕಾರ್ಯಕರ್ತರಿಂದ ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ. ಇದು ಶೈಕ್ಷಣಿಕ ವಲಯದಲ್ಲಿನ ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದು ಗುಜರಾತ್‍ ಎಸ್‌ಪಿ ವಿಶ್ವವಿದ್ಯಾಲಯ ಕುಲಪತಿ ಶ್ರೀಶ್ ಭಾಯ್ ಕುಲಕರ್ಣಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮಧ್ಯಪ್ರದೇಶದ ಸಾಗರ್‌ನ ಗೌರ್ ವಿಶ್ವವಿದ್ಯಾಲಯ ಕುಲಪತಿ ಆರ್.ಪಿ. ತಿವಾರಿ, ಬಿಹಾರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಎಚ್‌ಸಿಎಸ್ ರಾಥೋಡ್, ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಕುಲಪತಿ ಕೆ.ಕೆ.ಅಗರ್‍ ವಾಲ್‍ ಸೇರಿದಂತೆ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಎಡಪಂಥೀಯರು ಸೇರಿದಂತೆ ಕೆಲವರು ನಡೆಸುತ್ತಿರುವ ಈ ರೀತಿಯ ರಾಜಕೀಯದಿಂದ ಬಡ ವಿದ್ಯಾರ್ಥಿಗಳು ನಲುಗುವಂತಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಾಮಾಣಿಕ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂತವರ ರಾಜಕೀಯದಿಂದ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ಪತ್ರ ಹೇಳಿದೆ. ‘ ಈ ವಿದ್ಯಾರ್ಥಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಮತ್ತು ಪರ್ಯಾಯ ರಾಜಕಾರಣವನ್ನು ನಿರೂಪಿಸುವ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತಾರೆ. ಅಲ್ಲದೆ, ಇವರು ಬಹುಸಂಖ್ಯಾತ ಎಡ ಪಂಥೀಯ ರಾಜಕಾರಣಕ್ಕೆ ಅನುಗುಣವಾಗಿ ನಿರ್ಬಂಧಿತರಾಗಿರಬೇಕಾಗುತ್ತದೆ.’ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
"ಎಡಪಂಥೀಯ ಭದ್ರಕೋಟೆಗಳಲ್ಲಿ ಮುಷ್ಕರಗಳು, ಧರಣಿಗಳು ಸಾಮಾನ್ಯವಾಗಿದೆ. ಎಡ ಪಂಥೀಯ ಸಿದ್ಧಾಂತಕ್ಕೆ ಅನುಗುಣವಾಗಿರದ ಕಾರಣ ವೈಯಕ್ತಿಕ ಗುರಿ, ಸಾರ್ವಜನಿಕ ಅಪಪ್ರಚಾರ ಮತ್ತು ಕಿರುಕುಳ ಹೆಚ್ಚುತ್ತಿದೆ.’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯುಎನ್‍ಐ ಎಸ್‍ಎಲ್‍ಎಸ್‍ ಎಎಚ್ 2120