Friday, Oct 30 2020 | Time 06:33 Hrs(IST)
Karnataka Share

ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು: ಮುಂದುವರೆದ ಶೋಧ ಕಾರ್ಯ

ಹಾವೇರಿ,ಸೆ. 21 (ಯುಎನ್ಐ) ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.
ಆರೆಮಲ್ಲಾಪುರ ಗ್ರಾಮದ ಬೆಟ್ಟಪ್ಪ ಮೋಹನ್ ಮುಳ್ಳಿನ(25), ಮತ್ತು ಜಗದೀಶ ವೆಂಕಪ್ಪ (23) ನದಿ ಪಾಲಾದವರು.
ಕೋಣನತಂಬಿಗಿ - ನಿಟ್ಟೂರು ಕ್ರಾಸ್ ತುಂಗಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಎರಡು ಎತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಎನ್ಐ ಪಿಕೆ ಎಎಚ್ 1201
More News
ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

29 Oct 2020 | 9:12 PM

ಬೆಂಗಳೂರು, ಅ 28 (ಯುಎನ್ಐ) 1. ರಾಜ್ಯದಲ್ಲಿ 4 ಸಾವಿರದ 25 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 8 ಲಕ್ಷದ 16 ಸಾವಿರದ 809ಕ್ಕೆ ಏರಿಕೆಯಾಗಿದೆ.

 Sharesee more..
ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

29 Oct 2020 | 8:53 PM

ತುಮಕೂರು,ಅ 29 (ಯುಎನ್ಐ) ಹಿಂದಿನ ಸರ್ಕಾರದ ಒಳ್ಳೆಯ ಯೋಜನೆ, ಕಾರ್ಯಕ್ರಮಗಳಿಗೆ ಅನುದಾನ ನೀಡದೇ ಇತಿಶ್ರೀ ಹಾಡಿದ್ದೆ ಬಿಜೆಪಿ, ಯಡಿಯೂರಪ್ಪ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯವಾಗ್ದಾಳಿ ಮಾಡಿದ್ದಾರೆ.

 Sharesee more..