Sunday, Sep 27 2020 | Time 03:37 Hrs(IST)
Entertainment Share

ಎನ್‌ಕೌಂಟರ್ ಮೂಲಕ ಅತ್ಯಾಚಾರದ ಪಿಡುಗು ನಿರ್ಮೂಲನವಾದೀತು: ಉಪೇಂದ್ರ

ಬೆಂಗಳೂರು, ಡಿ ೦೭ (ಯುಎನ್‌ಐ) ಹೈದರಾಬದ್‌ನಲ್ಲಿ ತೆಲಂಗಾಣ ಪಶುವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ವಿಷಯ ಇನ್ನೂ ಚರ್ಚೆಯಲ್ಲಿದೆ
ಸಾರ್ವಜನಿಕರೂ ಸೇರಿದಂತೆ ಬಹುತೇಕ ಗಣ್ಯರು ಪೊಲೀಸರ ಕ್ರಮವನ್ನು ಸ್ವಾಗತಿಸಿ, ಶ್ಲಾಘಿಸಿದ್ದಾರೆ. ಕನ್ನಡ ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ.
ಪ್ರತಿಯೊಬ್ಬ ನಟ, ನಟಿಯರೂ ಕಾಮಪಿಶಾಚಿಗಳ ಸಾವನ್ನು ಸ್ವಾಗತಿಸಿದ್ದಾರೆ. ಇದೇವೇಳೆ ಸ್ಯಾಂಡಲ್‌ವುಡ್‌ನ ಬುದ್ಧಿವಂತ ನಟ, ನಿರ್ದೇಶಕ ಎನಿಸಿರುವ ಉಪೇಂದ್ರ, ಎನ್‌ಕೌಂಟರ್ ಮೂಲಕ ಅತ್ಯಾಚಾರದಂತಹ ಪಿಡುಗನ್ನು ತೊಲಗಿಸಲು ಸಾಧ್ಯವಾದೀತೇ ಎಂಬ ಪ್ರಶ್ನೆಯೆತ್ತಿದ್ದಾರೆ..
ಈ ಕುರಿತು ಟ್ವಿಟ್ ಮಾಡಿರುವ ಅವರು,ಒಂದು ಕಾಲದಲ್ಲಿ ಇದೇ ರೀತಿ ಎನ್ಕೌಂಟರ್ ಮಾಡಿ ರೌಡಿಸಂಗೆ ಕಡಿವಾಣ ಹಾಕಿದ ಹಾಗೆ, ನಿಷ್ಠಾವಂತ ಪೋಲೀಸ್ ಅಧಿಕಾರಿಗಳು ಮನಸು ಮಾಡಿದರೆ ಎನ್ಕೌಂಟರ್ ಮೂಲಕ ಈ ಅತ್ಯಾಚಾರದ ಪಿಡುಗನ್ನು ನಿರ್ಮೂಲ ಮಾಡಬಹುದು. ಆದರೆ ಇದನ್ನು ಹಣವಂತರು, ಪ್ರಭಾವಿಗಳು ದುರುಪಯೋಗ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ಈ ಟ್ವೀಟ್‌ಗೂ ಮುನ್ನ ಮಾಡಿರುವ ಟ್ವೀಟ್‌ನಲ್ಲಿ ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ? ಈ ರೀತಿಯ ಎನ್ಕೌಂಟರ್ರ್ ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ? ಎಂಬ ಪ್ರಶ್ನೆಯೆತ್ತುವ ಮೂಲಕ ಎಲ್ಲರನ್ನೂ ಚಿಂತನೆಗೆ ಒಳಪಡಿಸಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೦೮೪೭
More News
‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

26 Sep 2020 | 8:33 PM

ಬೆಂಗಳೂರು, ಸೆ 26 (ಯುಎನ್‍ಐ) ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

 Sharesee more..

ಹೊಟ್ಟೆನೋವು : ನಟ ಶರಣ್ ಆಸ್ಪತ್ರೆಗೆ ದಾಖಲು

26 Sep 2020 | 4:07 PM

 Sharesee more..

ಗಾನ ಸರಸ್ವತಿಯ ಮಡಿಲು ಸೇರಿದ ಸ್ವರ ಮಾಂತ್ರಿಕ

26 Sep 2020 | 12:47 PM

 Sharesee more..