Wednesday, Feb 26 2020 | Time 10:46 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ

ವಿಜಯವಾಡ, ಜ18(ಯುಎನ್‍ಐ)- ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಸ್ಥಾಪಕ ಹಾಗೂ ಖ್ಯಾತ ಚಿತ್ರನಟರಾದ ಎನ್ ಟಿ ರಾಮರಾವ್ ಅವರ 24ನೇ ಜನ್ಮ ವಾರ್ಷಿಕಾಚರಣೆ ಅಂಗವಾಗಿ ಇಲ್ಲಿನ ಮಂಗಳಗಿರಿಯಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ರಾಷ್ಟ್ರೀಯ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತು ಇತರ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು.
ಚಂದ್ರಬಾಬು ನಾಯ್ಡು ಅವರು ಎನ್ ಟಿ ರಾಮರಾವ್ ಅವರ ಆಳೆತ್ತರದ ಪ್ರತಿಮೆಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ತೆಲುಗು ಜನರ ಆತ್ಮಗೌರವ ರಕ್ಷಿಸಲು ಎನ್ ಟಿ ರಾಮರಾವ್ ಅವರು ತೆಲುಗುದೇಶಂ ಪಕ್ಷ ಸ್ಥಾಪಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಕಾರ್ಯಗತಗೊಂಡಿವೆ. ಎನ್ ಟಿ ರಾಮರಾವ್ ಅವರು ಎಲ್ಲೇ ಇದ್ದರೂ ಆಂಧ್ರಪ್ರದೇಶ ರಾಜಧಾನಿಯ ಬಗ್ಗೆ ತೃಪ್ತಿ ಪಡುವಂತೆ ರಾಜಧಾನಿ ಅಮರಾವತಿ ನಿರ್ಮಾಣವನ್ನು ಆರಂಭಿಸಲಾಗಿತ್ತು. ದುರಾದೃಷ್ಟವಶಾತ್ ಈಗ ರಾಜಧಾನಿ ವಿವಾದದ ಕೇಂದ್ರವಾಗಿದೆ ಎಂದು ವಿಷಾಧಿಸಿದರು.
ರಾಜಧಾನಿ ವಿಶಾಖಪಟ್ಟಣಂಗೆ ಸ್ಥಳಾಂತರವಾಗದಂತೆ ಮತ್ತು ಅಮರಾವತಿಯಲ್ಲೇ ರಾಜಧಾನಿ ಉಳಿಸಿಕೊಳ್ಳಲು ಜನರು ಪ್ರತಿಜ್ಞೆ ಸ್ವೀಕರಿಸಬೇಕು. ‘ ಅಮರಾವತಿ ರಕ್ಷಿಸಿ-ಆಂಧ್ರ ಪ್ರದೇಶ ರಕ್ಷಿಸಿ’ ಎಂಬುದು ಎಲ್ಲರ ಘೋಷಣೆಯಾಗಬೇಕು.
ಕಾರ್ಯಕ್ರಮದ ಬಳಿಕ ಚಂದ್ರಬಾಬು ನಾಯ್ಡು ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ತೆಲುಗುದೇಶಂ ರಾಜ್ಯಾಧ್ಯಕ್ಷ ಕೆ. ಕಲಾ ವೆಂಕಟರಾವ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಯುಎನ್‍ಐ ಎಸ್ ಎಲ್‍ಎಸ್ 1716