Wednesday, Feb 26 2020 | Time 10:35 Hrs(IST)
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
National Share

ಎನ್‍ಪಿಆರ್ ಕುರಿತು ಮೋದಿ ಸರ್ಕಾರದ ವಿರುದ್ಧ ರಾಹುಲ್, ಚಿದಂಬರಂ ವಾಗ್ದಾಳಿ: ಬಿಜೆಪಿ ತರಾಟೆ

ನವದೆಹಲಿ, ಡಿ 26(ಯುಎನ್‍ಐ)- ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ವಿದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಸ್ವತ: ತಿಳಿಯಲು ರಾಹುಲ್ ಗಾಂಧಿ ಒಮ್ಮೆ ಅವಧಿ ಮೀರಿ ಯಾವುದಾದರೂ ದೇಶವೊಂದರಲ್ಲಿ ಉಳಿಯಲಿ ಎಂದು ಸವಾಲು ಹಾಕಿದೆ.
‘ರಾಹುಲ್ ಗಾಂಧಿ ಅವರು ಆಗಾಗ್ಗೆ ವಿದೇಶಕ್ಕೆ ತೆರಳುತ್ತಾರೆ. ಒಮ್ಮೆ ಅವರು ವೀಸಾ ಅವಧಿ ಮುಗಿದು ಹೆಚ್ಚಿನ ಕಾಲ ಅಲ್ಲೇ ಉಳಿಯಬೇಕು. ಗಡೀಪಾರು ಮಾಡುವ ಮುನ್ನ ಅಲ್ಲಿನ ಕೂಡಿಹಾಕುವ ಕೇಂದ್ರಕ್ಕೆ ತಳ್ಳಬೇಕು. ಆಗ ಅವರಿಗೆ ಬೇರೆ ದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ.’ ಎಂಬುದು ಅರ್ಥವಾಗುತ್ತದೆ ಎಂದು ಬಿಜಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತಿಳಿಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಕುರಿತಂತೆ ಚಿದಂಬರಂ ನೀಡಿರುವ ಹೇಳಿಕೆಯನ್ನು ಮಾಳವೀಯ ಟೀಕಿಸಿದ್ದಾರೆ. 2012ರಲ್ಲಿ ಚಿದಂಬರಂ ಪ್ರಸ್ತಾಪಿಸಿದ್ದ ಅಂಶಗಳಿರುವ ವಿಡೀಯೋವನ್ನು ಅವರು ಉಲ್ಲೇಖಿಸಿದ್ದಾರೆ. ‘ ದೇಶದ ನಿವಾಸಿಗಳಿಗೆ ಕಾರ್ಡ್ ನೀಡುವುದು ಎನ್ ಪಿ ಆರ್ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯು ಪೌರತ್ವ ಕಾರ್ಡ್ ಒದಗಿಸಲಿದೆ.’ ಎಂದು ಸ್ವತ: ಚಿದಂಬರಂ ಹೇಳಿದ್ದಾರೆ ಎಂದು ಮಾಳವೀಯ ಟೀಕಿಸಿದ್ದಾರೆ.
‘ವಾಸ್ತವವಾಗಿ ಪೌರತ್ವದಿಂದ ಎನ್‍ಪಿ ಆರ್ ಅನ್ನು ತೆಗೆದುಹಾಕಿದ್ದು ಎನ್‍ಡಿಎ ಸರ್ಕಾರ’ ಎಂದು ಮಾಳವೀಯ ಹೇಳಿದ್ದಾರೆ.
uni sls 1329