Sunday, Mar 29 2020 | Time 00:33 Hrs(IST)
National Share

ಎನ್ ಪಿಆರ್ ಮತ್ತು ಎನ್ ಆರ್ ಸಿಗೆ ಸಂಬಂಧವಿಲ್ಲ-ಕೇಂದ್ರ ಸಚಿವ ಕಿಷನ್ ರೆಡ್ಡಿ ಸ್ಪಷ್ಟನೆ

ಹೈದರಾಬಾದ್, ಡಿ 26(ಯುಎನ್‍ಐ)_ ರಾಷ್ಟ್ರೀಯ ಜನಸಂಖ್ಯೆ ನೋಂದಣಿ(ಎನ್ ಪಿಆರ್)ಯು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯ ಮುಂದುವರೆದ ಭಾಗವಾಗಿದೆ ಎಂದು ಕೆಲ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮದ ಕೆಲ ವಲಯಗಳಲ್ಲಿ ವ್ಯಕ್ತವಾಗುತ್ತಿರುವ ಮಾಹಿತಿಯ ನಿರಾಧಾರ ಮತ್ತು ತೀವ್ರ ಖಂಡನೀಯ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಷನ್ ರೆಡ್ಡಿ ಹೇಳಿದ್ದಾರೆ.
ಎನ್ ಪಿಆರ್‍ಗೂ ಎನ್ ಆರ್ ಸಿಗೂ ಸಂಬಂಧವಿಲ್ಲ. ಸದ್ಯದ ಎನ್ ಪಿ ಆರ್ 2021ನೇ ಜನಗಣತಿಯ ಪ್ರಕ್ರಿಯೆಯ ಭಾಗವಾಗಿದೆ. 2010ರಲ್ಲಿ ಯುಪಿಎ ಸರ್ಕಾರ ಆರಂಭಿಸಿದ ಎನ್ ಪಿ ಆರ್ ಪ್ರಕ್ರಿಯೆಯನ್ನು ಎನ್ ಡಿಎ ಸರ್ಕಾರ ಮುಂದುವರೆಸುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬನ ಪೋಷಕರ ಜನ್ಮಸ್ಥಳ, ಆಧಾರ್ ಕಾರ್ಡ್ ಸಂಖ್ಯೆ, ಮನೆಯಿರುವ ಸ್ಥಳದ ಬಗ್ಗೆಯಷ್ಟೇ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇವು ಎನ್ ಪಿಆರ್ ಗೆ ಅಗತ್ಯವೂ ಆಗಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ದೂರಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಈ ಮೂಲಕ ಆಯುಷ್ಮಾನ್ ಸೇರಿದಂತೆ ಬಡತನ ನಿರ್ಮೂಲನೆಯ ಅನೇಕ ಯೋಜನೆಗಳು ಯಶಸ್ವಿಯಾಗಿ ತಡೆಯೊಡ್ಡುತ್ತಿವೆ ಎಂದು ಕಿಶನ್‍ರೆಡ್ಡಿ ಹೇಳಿದ್ದಾರೆ.
ನಿಖರ ಮತ್ತು ಸಮಗ್ರ ಮಾಹಿತಿ ಇಲ್ಲದೆ, ಎಲ್ಲ ಜನರ ಕಲ್ಯಾಣಕ್ಕೆ ಬದ್ಧವಾಗಿರುವ ಸರ್ಕಾರವೊಂದು ಯೋಜನೆಗಳಿಗೆ ನೀತಿಗಳನ್ನು ರೂಪಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಯುಎನ್‍ಐ ಎಸ್ ಎಲ್ ಎಸ್ 1922
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..