Wednesday, Feb 26 2020 | Time 10:51 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಎನ್‍ಪಿಆರ್ ವಿರುದ್ಧ ರಾಹುಲ್ ಟೀಕೆಗೆ ಬಿಜೆಪಿ ಕಿಡಿ

ನವದೆಹಲಿ, ಡಿ 27 (ಎನ್‌ಪಿಆರ್) ನಾಗರಿಕ ರಾಷ್ಟ್ರೀಯ ನೋಂದಣಿ -ಎನ್‌ಪಿಆರ್ ವಿರುದ್ಧ ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
ಎನ್‍ಪಿಆರ್ 'ಬಡವರ ವಿರೋಧಿ' ‘ನಾಗರಿಕರ ಮೇಲೆ ತೆರಿಗೆ ವಿಧಿಸುವುದು ಹಾಗೂ ಭ್ರಷ್ಟಾಚಾರ ಕಾಂಗ್ರೆಸ್‍ ಪಕ್ಷದ ಭಾಗವಾಗಿದೆ ಎಂದು ಬಿಜೆಪಿ ಹೇಳಿದೆ.
"ನಾಗರಿಕರಿಗೆ ತೆರಿಗೆ ವಿಧಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ .... ಜನರಿಗೆ ತೆರಿಗೆ ವಿಧಿಸುವುದಕ್ಕೂ, ಎನ್‌ಪಿಆರ್‌ಗೆ ಯಾವುದೇ ಸಂಬಂಧವಿಲ್ಲ. ಎನ್‌ಪಿಆರ್ ಜನರ ಜೀವನ ಪರಿಸ್ಥಿತಿಗಳ ಗಣತಿ ಮಾತ್ರ ಮತ್ತು ಇದು ವಿವಿಧ ಕಲ್ಯಾಣ ಮತ್ತು ಫಲಾನುಭವಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಬಡವರಿಗೆ ಸಹಾಯ ಮಾಡಲಿದೆ" ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಜಯಂತಿ ತೆರಿಗೆ, 2 ಜಿ ತೆರಿಗೆ ಮತ್ತು ಜಿಜಾಜಿ (ಸೋದರ ಮಾವ) ತೆರಿಗೆ" ವಿಧಿಸುವ ಮೂಲಕ ಜನರ ದುಃಖವನ್ನು ಹೆಚ್ಚಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಅವರು ಹಳಿದ್ದಾರೆ.

'ಜಯಂತಿ ತೆರಿಗೆ' ಎಂಬ ಪದವು ಜಯಂತಿ ನಟರಾಜನ್ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಪರಿಸರ ಸಚಿವರಾಗಿದ್ದಾಗ ಪರಿಸರ ಮತ್ತು ಅರಣ್ಯ ತೆರವು ಹೆಸರಿನಲ್ಲಿ ಉಂಟಾದ ಅಡೆತಡೆಗಳನ್ನು ಉಲ್ಲೇಖಿಸುತ್ತದೆ.

ಅಂತೆಯೇ, '2 ಜಿ ತೆರಿಗೆ' ಯುಪಿಎ ಅಡಿಯಲ್ಲಿ 2 ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣದ ರೂಪದಲ್ಲಿ ಭ್ರಷ್ಟಾಚಾರವನ್ನು ಸಂಕೇತಿಸುತ್ತದೆ ಮತ್ತು ಜಿಜಾಜಿ ತೆರಿಗೆ ರಾಹುಲ್ ಗಾಂಧಿಯವರ ಸಹೋದರ ರಾಬರ್ಟ್ ವಾದ್ರಾಗೆ ಸಂಬಂಧಿಸಿದ 'ವಿವಿಧ ಭ್ರಷ್ಟಾಚಾರ ಪ್ರಕರಣಗಳು ಮತ್ತು ಭೂ ಹಗರಣಗಳನ್ನು' ಸೂಚಿಸುತ್ತದೆ.
"ಎನ್‌ಪಿಆರ್ ದತ್ತಾಂಶವು ಬಡವರಿಗೆ ಪಾರದರ್ಶಕತೆಗೆ ಸಹಾಯ ಮಾಡಲು ಉಪಯುಕ್ತವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲಿದೆ. ಹೀಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಸಮಾಧಾನಗೊಂಡಿದೆ ಎಂದು ಜಾವಡೇಕರ್ ಹೇಳಿದರು.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಸ್ವತಃ ಮಧ್ಯವರ್ತಿ ಸಿಂಡ್ರೋಮ್ ಬಗ್ಗೆ ಉಲ್ಲೇಖಿಸಿದ್ದರು. 80ರ ದಶಕದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೆಹಲಿಯಿಂದ ಮಧ್ಯವರ್ತಿಗಳ ಜೇಬಿಗೆ ಶೇ. 80ರಷ್ಟು ಹಣ ಬೀಳುತ್ತಿತ್ತು ಎಂದರು.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ದಿವಂಗತ ಹಿತೇಶ್ವರ ಸೈಕಿಯಾ ಬಾಂಗ್ಲಾದೇಶದ ಒಳನುಸುಳುವಿಕೆ ವಿಷಯದಲ್ಲಿ 'ರಾಜಿ ಮಾಡಿಕೊಂಡಿದ್ದರು ಎಂದ ಜಾವಡೇಕರ್, ಕಾಂಗ್ರೆಸ್ ಮುಖಂಡ ಕಿರಿಪ್ ಚಲಿಹಾ ಹೇಳಿಕೆ ಉಲ್ಲೇಖಿಸಿ, "ಅಕ್ರಮ ವಲಸೆ ಕಾಂಗ್ರೆಸ್ಗೆ ರಾಜಕೀಯ ಚೌಕಾಶಿ ಮಾಡುವ ವಿಷಯವಾಗಿದೆ ..." "ಮಹಾತ್ಮ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ವಿಭಿನ್ನವಾಗಿತ್ತು, ಈಗ ಅದು ಇಂದಿನ ಗಾಂಧಿಯವರ ಅಡಿಯಲ್ಲಿ ವಿಭಿನ್ನ ಪಕ್ಷವಾಗಿದೆ".ಎಂದು ಟೀಕಿಸಿದರು.
ಯುಎನ್‍ಐ ಎಸ್‍ಎ ವಿಎನ್ 1831
,