Wednesday, May 27 2020 | Time 02:27 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Election Share

ಎನ್ ಪಿಪಿಗೆ ರಾಷ್ಟ್ರೀಯ ರಾಜಕೀಯ ಪಕ್ಷದ ಮಾನ್ಯತೆ

ಶಿಲಾಂಗ್, ಜೂ 8 (ಯುಎನ್ಐ) ಭಾರತೀಯ ಚುನಾವಣಾ ಆಯೋಗವು ನ್ಯಾಷನಲ್ ಪೀಪಲ್ಸ್ ಪಾರ್ಟಿಯನ್ನು (ಎನ್ ಪಿಪಿ) ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಘೋಷಿಸಿದೆ.
ಎನ್ ಪಿಪಿಗೆ ಸಿಕ್ಕ ರಾಷ್ಟ್ರೀಯ ರಾಜಕೀಯ ಪಕ್ಷದ ಸ್ಥಾನಮಾನದ ಗೌರವವನ್ನು ಮೇಘಾಲಯ ಮುಖ್ಮಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಕಾರ್ನಾಡ್ ಕೆ.ಸಂಗ್ಮಾ ಅವರು ಪಕ್ಷದ ಸಂಸ್ಥಾಪಕ ದಿವಂಗತ ಪುರ್ನೋ ಅಗಿಟಾಕ್ ಸಂಗ್ಮಾ ಅವರಿಗೆ ಸಮರ್ಪಿಸಿದ್ದಾರೆ.
"ಆಯೋಗವು ಎನ್ ಪಿಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ಪಕ್ಷದ ಮನವಿಯ ಮೇರೆಗೆ ಎನ್ ಪಿಪಿಗೆ "ಪುಸ್ತಕ" ಚಿಹ್ನೆಯನ್ನು ನಿಗದಿಪಡಿಸಲಾಗಿದೆ" ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಪ್ರಮೋದ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಎನ್ ಪಿಪಿಯು ಈಗಾಗಲೇ ಮೇಘಾಲಯ, ಮಣಿಪುರ್ ಹಾಗೂ ನಾಗಾಲ್ಯಾಂಡ್ ಅರುಣಾಚಲ್ ಪ್ರದೇಶಗಳಲ್ಲಿ ರಾಜ್ಯದ ಪಕ್ಷ ಎಂದು ಗುರುತಿಕೊಂಡಿದ್ದು, ಅರ್ಹತಾ ಷರತ್ತುಗಳನ್ನು ಪೂರ್ಣಗೊಳಿಸಿದ್ದರಿಂದ ರಾಜಕೀಯ ಪಕ್ಷದ ಮಾನ್ಯತೆ ನೀಡಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಯಾವುದೇ ಪಕ್ಷವನ್ನು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ಕನಿಷ್ಠ ನಾಲ್ಕು ರಾಜ್ಯಗಳ ಮಾನ್ಯತೆ ಪಡೆದಿರಬೇಕು. 2019ರಲ್ಲಿ ನಡೆದ ಅರುಣಾಚಲ್ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಮತದಾನದ ಶೇ.14.55ರಷ್ಟು ಮತಗಳನ್ನು ಎನ್ ಪಿಪಿ ಪಡೆದಿದ್ದು, 60ರ ಪೈಕಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಆಧರಿಸಿ ಎನ್ ಪಿಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಗಿದೆ.
ಮೇಘಾಲಯದಲ್ಲಿ ಎನ್ ಪಿಪಿ ಪಕ್ಷ ಮೇಘಾಲಯ ಡೆಮಾಕ್ರಟಿಕ್ ಅಲಾಯನ್ಸ್ (ಎಂಡಿಎ) ಸರ್ಕಾರದ ನೇತೃತ್ವ ವಹಿಸಿದ್ದು, 60ರ ಪೈಕಿ 21 ಶಾಸಕರನ್ನು ಹೊಂದಿದೆ.
"ಇಂದಿನ ದಿನ ಎನ್ ಪಿಪಿಗೆ ಅತ್ಯಂತ ಪ್ರಮುಖ ದಿನವಾಗಿದ್ದು, ಎಂಟನೇ ರಾಷ್ಟ್ರೀಯ ಪಕ್ಷ ಎಂದು ಚುನಾವಣಾ ಆಯೋಗಲು ಪ್ರಕಟಣೆ ಜಾರಿಗೊಳಿಸಿದೆ" ಎಂದು ಕಾರ್ನಾಡ್ ಹೇಳಿದ್ದಾರೆ.
ಯುಎನ್ಐ ಡಿವಿ ವಿಎನ್ 1035
There is no row at position 0.