Wednesday, Feb 26 2020 | Time 09:49 Hrs(IST)
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಎಸ್ ಬಿಐ : ಹಣ ವಿತ್ ಡ್ರಾ ಮಾಡಲು ಹೊಸ ವರ್ಷದಿಂದ ಹೊಸ ನಿಯಮ ಜಾರಿ

ನವದೆಹಲಿ, ಡಿಸೆಂಬರ್ 27 (ಯುಎನ್ಐ) ಭಾರತೀಯ ಸ್ಟೇಟ್ ಬ್ಯಾಂಕ್ಗಳ (ಎಸ್ಬಿಐ)ಎಟಿಎಂಗಳಲ್ಲಿ ಹಣ ಹಿಂಪಡೆಯಲು ಹೊಸ ವರ್ಷದಿಂದ, ಹೊಸ ನಿಯಮ, ಒನ್ ಟೈಂ ಪಾಸ್ವರ್ಡ್, ಒಟಿಪಿ ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್ ಬಿಐ ಹೇಳಿದೆ
ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 10,000 ರೂ.ಗಳಿಗಿಂತಲೂ ಹೆಚ್ಚು ಹಣ ವಿತ್ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಎಟಿಎಂ ಕಾರ್ಡ್ಗಳ ದುರುಪಯೋಗ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ಬ್ಯಾಂಕ್ ಪ್ರಕಟಿಸಿದೆ.
ಎಟಿಎಂನಿಂದ ಹಣ ವಿತ್ಡ್ರಾ ಮಾಡುವವರು ಎಟಿಎಂ ಯಂತ್ರದಲ್ಲಿ ತಮ್ಮ ಪಿನ್ ಸಂಖ್ಯೆ, 10,ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಮೂದಿಸಿದ ನಂತರ, ಗ್ರಾಹಕರ ಖಾತೆಯೊಂದಿಗೆ ಜೋಡಿಸಲ್ಪಟ್ಟಿರುವ ಅವರ ಮೊಬೈಲ್ ಸಂಖ್ಯೆಗೆ ನಾಲ್ಕು ಅಂಕಿಗಳ ಒಟಿಪಿ ರವಾನೆಯಾಗಲಿದೆ . ಆ ಸಂಖ್ಯೆಯನ್ನು ಎಟಿಎಂನಲ್ಲಿ ನಮೂದಿಸಿದ ನಂತರವಷ್ಟೇ ಗ್ರಾಹಕರು ಹಣ ಪಡೆಯಲು ಸಾಧ್ಯವಾಗಲಿದೆ.
ಯುಎನ್ಐ ಕೆಎಸ್ಆರ್ 2212