Monday, Jun 1 2020 | Time 02:26 Hrs(IST)
business economy Share

ಎಂಎಸ್‍ಎಂಇಗಳ ಕುರಿತು ಗಡ್ಕರಿ, ನಿರ್ಮಲಾ ಸೀತಾರಾಮನ್‍ ಹೇಳಿಕೆಗಳ ಕುರಿತು ಚಿದಂಬರಂ ತರಾಟೆ

ಎಂಎಸ್‍ಎಂಇಗಳ ಕುರಿತು ಗಡ್ಕರಿ, ನಿರ್ಮಲಾ ಸೀತಾರಾಮನ್‍ ಹೇಳಿಕೆಗಳ ಕುರಿತು ಚಿದಂಬರಂ ತರಾಟೆ
ಎಂಎಸ್‍ಎಂಇಗಳ ಕುರಿತು ಗಡ್ಕರಿ, ನಿರ್ಮಲಾ ಸೀತಾರಾಮನ್‍ ಹೇಳಿಕೆಗಳ ಕುರಿತು ಚಿದಂಬರಂ ತರಾಟೆ

ನವದೆಹಲಿ, ಮೇ15 (ಯುಎನ್ಐ)-ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ(ಎಂಎಸ್ಎಂಇ) ಪರಿಸ್ಥಿತಿ ಕುರಿತು ಕೇಂದ್ರ ಸಚಿವರ ಹೇಳಿಕೆಗಳ ಕುರಿತು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.



ಸರ್ಕಾರಗಳು ಮತ್ತು ಸಾರ್ವಜನಿಕ ಉದ್ದಿಮೆಗಳು ಎಂಎಸ್‍ಎಂಇಗಳಿಗೆ 5 ಲಕ್ಷ ಕೋಟಿ ರೂ. ಬಾಕಿ ನೀಡಬೇಕಾಗಿವೆ ಎಂದು ಎಂಎಸ್‍ಎಂಇ ಸಚಿವ ನಿತಿನ್‍ ಗಡ್ಕರಿ ಹೇಳಿದ್ದಾರೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ ಅವರು, ಎಂಎಸ್‍ಎಂಇ (45 ಲಕ್ಷ ಸಂಖ್ಯೆ)ಗಳಿಗೆ ಸರ್ಕಾರದ ಖಾತರಿಯೊಂದಿಗೆ 3 ಲಕ್ಷ ಕೋಟಿ ರೂ ಸಾಲದ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.



ಹಾಗಾದರೆ, ಸಾಲದಾತರು ಯಾರು? ಸಾಲಗಾರರು ಯಾರು? ‘ ಇಬ್ಬರೂ ಸಚಿವರು ಇವರೆಲ್ಲರ ಬಾಕಿ ಇತ್ಯರ್ಥ ಪಡಿಸುವರೇ? ಸರ್ಕಾರದ ನೆರವು ಇಲ್ಲದೆ ಎಂಎಸ್‍ಎಂಇಗಳು ತಾವಾಗಿಯೇ ಉಳಿಯಲು ಬಿಡುವರೇ? ಎಂದು ಚಿದಂಬರಂ ಅವರು ಸಚಿವರ ಹೇಳಿಕೆಗಳ ಕುರಿತು ಟೀಕಿಸಿದ್ದಾರೆ.



ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಹಣಕಾಸು ಪರಿಹಾರ ಯೋಜನೆಯನ್ನು ಕಳೆದ ಬುಧವಾರ ಅನಾವರಣಗೊಳಿಸಿದ ಸಚಿವೆ ನಿರ್ಮಲಾ ಸೀತಾರಾಮನ್‍ ಅವರು, ಎಂಎಸ್‍ಎಂಇಗಳಿಗೆ ಸರ್ಕಾರದ ಖಾತರಿಯೊಂದಿಗೆ 3 ಲಕ್ಷ ಕೋಟಿ ರೂ. ಸಾಲದ ನೆರವು ಪ್ರಕಟಿಸಿದ್ದರು. ಆದರೆ, ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎಂಎಸ್‍ಎಂಇ ಸಚಿವ ನಿತಿನ್‍ ಗಡ್ಕರಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‍ಎಂಇಗಳಿಗೆ ಭಾರಿ ಮೊತ್ತದ ಬಾಕಿ ಉಳಿಸಿಕೊಂಡಿವೆ. ಈ ಕಾರಣದಿಂದ ಎಂಎಸ್‍ಎಂಇಗಳು ಅಳಿವು-ಉಳಿವಿಗೆ ಹೋರಾಡುತ್ತಿವೆ ಎಂದು ಹೇಳಿದ್ದರು.



ಯುಎನ್‍ಐ ಎಸ್‍ಎಲ್‍ಎಸ್‍ 1548

More News
ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

31 May 2020 | 5:40 PM

ನವದೆಹಲಿ, ಮೇ 31 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ ಐಎಲ್) ಭಾರತದ ಹೂಮ್ಯಾನಿಟೇರಿಯನ್ (ಮಾನವೀಯ) ರಪ್ತುನ ಮುಂಚೂಣಿಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ.

 Sharesee more..