Monday, Jun 1 2020 | Time 02:55 Hrs(IST)
Special Share

ಎಂಪಿ ಬೆಳವಣಿಗೆ ಪ್ರಜಾಪ್ರಭುತ್ವದ ಕೊಲೆ: ನಾರಾಯಣಸಾಮಿ

ಪುದುಚೇರಿ, ಮಾರ್ಚ್ 11 (ಯುಎನ್‌ಐ) ಮಧ್ಯಪ್ರದೇಶದ ಬೆಳವಣಿಗೆಗಳನ್ನು ಮುಖ್ಯಮಂತ್ರಿ ವಿ ನಾರಾಯಣಸಾಮಿ "ಪ್ರಜಾಪ್ರಭುತ್ವದ ಕೊಲೆ" ಎಂದು ಬಣ್ಣಿಸಿದ್ದಾರೆ.
ಮೈಕ್ರೋ ಬ್ಲಾಗಿಂಗ್ ನಲ್ಲಿ ಬರೆದಿರುವ ಅವರು "ಕರ್ನಾಟಕದಲ್ಲಿ ಬಿಜೆಪಿ ಮಾಡಿದ ರೀತಿಯಲ್ಲಿ ಕಾರ್ಯತಂತ್ರ ಜಾರಿಗೊಳಿಸುತ್ತಿದೆ ಎಂದು ಬಲವಾಗಿ ಆರೋಪಿಸಿದರು.
ಇದು ಪ್ರಜಾಪ್ರಭುತ್ವದ ಕೊಲೆ. ಮಾಜಿ ಸಂಸದ ಜ್ಯೋತಿರಾಡಿತ್ಯ ಸಿಂಧಿಯಾ ಬಿಜೆಪಿ ಹಾಕಿದೆ ಮೋಸದ ಬಲೆಗೆ ಬಿದ್ದಿದ್ದಾರೆ. ಅವರಿಗೆ ಶೀಘ್ರದಲ್ಲೇ 'ಹಿಮಾಲಯದ ಪ್ರಮಾದದ ಅರಿವಾಗಲಿದೆ, ಅವರನ್ನು ಬಳಸಿಕೊಂಡ ನಂತರ ಬಿಜೆಪಿ ಹೊರಗೆ ಬಿಸಾಡಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಕಮಲ್ ನಾಥ್ ಅವರು ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನೂ ಅವರು ನಾರಾಯಣಸಾಮಿ ವ್ಯಕ್ತಪಡಿಸಿದ್ದಾರೆ.
ಯುಎನ್‌ಐ ಕೆಎಸ್ಆರ್ 1114