Friday, Feb 28 2020 | Time 09:38 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಏಪ್ರಿಲ್ 1 ರಿಂದ ಜನಗಣತಿ 2021 ಆರಂಭ : ಮೊಬೈಲ್ ಆಪ್ ಮೂಲಕ ಗಣತಿ

ನವದೆಹಲಿ, ಜ 10 (ಯುಎನ್ಐ) ಭಾರತದ 2021 ರ ಜನಗಣತಿ ಈ ವರ್ಷದ ಏಪ್ರಿಲ್ 1 ರಂದು ಆರಂಭವಾಗಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದೆ.

ಮೊಬೈಲ್ ಫೋನ್ ಅಪ್ಲಿಕೇಷನ್ ಮೂಲಕ ಜನಗಣತಿ 2021 ನಡೆಯಲಿದೆ. ಸಾಂಪ್ರದಾಯಿಕ ಕಾಗದ, ಪೆನ್ನು ಬಳಸಿ ಬರೆದು ಎಣಿಸುವ ಪದ್ಧತಿಯಿಂದ ಹೊರಬಂದು ಆಪ್ ಬಳಕೆಗೆ ಈ ಬಾರಿಯ ನಾಂದಿಯಾಗಲಿದೆ.

ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ಪಡೆದು ಆ ಮೂಲಕ ಶೌಚಾಲಯ, ಟಿವಿ, ಅಂತರ್ಜಾಲ ಸೌಲಭ್ಯ, ಕುಟುಂಬ ಹೊಂದಿರುವ ವಾಹನ, ಕುಡಿಯುವ ನೀರಿನ ಮೂಲ ಮೊದಲಾದ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುವುದು.

ಇತರ ಜೊತೆಗೆ ವಾಸಸ್ಥಳದ ಮಾಹಿತಿಯನ್ನೂ ಪಡೆಯಲಾಗುವುದು. ಇದು ವಸತಿರಹಿತರಿಗೆ ಆಶ್ರಯ ನೀಡುವ ಯೋಜನೆಗೂ ಪೂರಕವಾಗಿರಲಿದೆ.
ಯುಎನ್ಐ ಜಿಎಸ್ಆರ್ 0847