Sunday, Dec 8 2019 | Time 14:12 Hrs(IST)
 • ರಣಜಿ ಟ್ರೋಫಿ: ಕರ್ನಾಟಕ-ತಮಿಳುನಾಡು ಕಾದಾಟ ನಾಳೆ
 • ರಾಮನಗರ ಕ್ಲೀನಿಂಗ್ ಮಾಡಲಿ, ಆಲ್‌ ದಿ ಬೆಸ್ಟ್‌ : ಡಿಸಿಎಂಗೆ ಡಿ ಕೆ ಶಿವಕುಮಾರ್ ಟಾಂಗ್
 • ಗಾಂಧಿ ಕೊನೆ ಕೈ ಬರಹದ ಹಸ್ತಪ್ರತಿ ಹರಾಜು !
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
Parliament Share

ಏರ್ ಇಂಡಿಯಾದ ಪುನರುಜ್ಜೀವನಕ್ಕೆ ಸರ್ಕಾರ ಬದ್ಧ: ಪುರಿ

ನವದೆಹಲಿ, ಜುಲ 11 (ಯುಎನ್ಐ) ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾದ ಪುನರುಜ್ಜೀವನಕ್ಕಾಗಿ ಕಾರ್ಯತಂತ್ರ ಹೂಡಿಕೆಗೆ ಬದ್ಧ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ
ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ, ಜೆಟ್ ಏರ್ ವೇಸ್ ಮುಚ್ಚಿದ ಹೊರತಾಗಿಯೂ, ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 17ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಜೆಟ್ ಏರ್ ವೇಸ್ ಮುಚ್ಚಿದ್ದರೂ, ವಿಮಾನಗಳ ಹಾರಾಟದಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ. ಕೇವಲ ಏರ್ ಇಂಡಿಯಾ ಮಾತ್ರವಲ್ಲದೆ ಇತರ ಹಲವು ವಿಮಾನಯಾನ ಸಂಸ್ಥೆಗಳು ಸಹ ಆರ್ಥಿಕ ಸಂಕಷ್ಟದಲ್ಲಿವೆ. ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳು ಮತ್ತು ಇಂಧನದ ಮೇಲೆ ವಿಧಿಸಲಾಗುವ ಶೇ 28 ರಿಂದ 30ರ ವ್ಯಾಟ್ ಮತ್ತು ಕರೆನ್ಸಿಯ ಏರಿಳಿತದ ಕಾರಣದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಅವರು ವಿವರಿಸಿದ್ದಾರೆ.
ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ನಾಗರಿಕರಿಗೆ ಇದರ ಪ್ರಯೋಜನ ಸಿಗಲಿದೆ. "ನಾವು ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಮೂಲಕ ಕಂಪನಿಯು ಭಾರತೀಯರ ಕೈಯಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, “ಏರ್ ಇಂಡಿಯಾಗೆ ಹೂಡಿಕೆ ಮಾಡಲು ಸರ್ಕಾರ ಬದ್ಧವಾಗಿದ್ದರೂ ಸಹ, ಹಣಕಾಸಿನ ನೆರವಿನೊಂದಿಗೆ ಏರ್ ಇಂಡಿಯಾದ ಪುನರುಜ್ಜೀವನ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ, ಇದು ಸ್ಪರ್ಧಾತ್ಮಕ ಮತ್ತು ಲಾಭದಾಯಕ ವಿಮಾನಯಾನ ಸಮೂಹವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ'' ಎಂದಿದ್ದಾರೆ.
ಏರ್ ಇಂಡಿಯಾಗಿ 3,975 ಕೋಟಿ ರೂ. ಸೇರಿದಂತೆ ಆರ್ಥಿಕ ಸಹಕಾರ ಒದಗಿಸಲಾಗುವುದು, ಏರ್ ಇಂಡಿಯಾ ಲಿಮಿಟೆಡ್ ನಿಂದ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ ಪಿವಿ)ಗೆ 29,464 ಕೋಟಿ ಸಾಲದ ಮೊತ್ತ ವರ್ಗಾವಣೆ ಮಾಡಲಾಗುವುದು. 2018-19ನೇ ಸಾಲಿನ ಬಡ್ಡಿಗಾಗಿ ಏರ್ ಇಂಡಿಯಾ ಲಿಮಿಟೆಡ್ ಗೆ 7,600 ಕೋಟಿ ಮತ್ತು ಎಸ್ ಪಿವಿಗೆ 1300 ಕೋಟಿ ರೂ, ಸರ್ಕಾರದ ಖಾತರಿ ನೀಡಲಾಗುವುದು ಎಂದು ಸಚಿವ ಹರ್ ದೀಪ್ ಸಿಂಗ್ ಪುರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಯುಎನ್ಐ ಎಸ್ಎ ವಿಎನ್ 1357
More News
ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

06 Dec 2019 | 6:53 PM

ನವದೆಹಲಿ, ಡಿ 6 (ಯುಎನ್ಐ) ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ ತಪ್ಪಿಸಿ ಇದರ ಬಗ್ಗೆ ಜನಜಾಗೃತಿ ಮೂಡಿಸಲು ಮಹಿಳಾ ಸುರಕ್ಷತಾ ದಿನ ಇಲ್ಲವೇ ಮಹಿಳಾ ಸುರಕ್ಷತಾ ಸಪ್ತಾಹ ಆಚರಣೆ ಮಾಡಬೇಕೆಂದು ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಬಲ ಕೂಗು ಕೇಳಿಬಂದಿದೆ.

 Sharesee more..

ಸಚಿವರ ಗೈರು; ರಾಜ್ಯಸಭಾ ಕಲಾಪ ಮುಂದೂಡಿಕೆ

06 Dec 2019 | 4:49 PM

 Sharesee more..
ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

05 Dec 2019 | 6:17 PM

ನವದೆಹಲಿ, ಡಿಸೆಂಬರ್ 5 (ಯುಎನ್ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಹಲ,ಗದ್ದಲದ ಕಾರಣ ಕಲಾಪವನ್ನು ಎರಡು ಭಾರಿ ಮುಂದೂಡಿದ ಘಟನೆ ಜರುಗಿತು.

 Sharesee more..