Wednesday, Sep 23 2020 | Time 02:49 Hrs(IST)
Special Share

ಏರ್ ಇಂಡಿಯಾ ವಿಮಾನ ದುರಂತದಲ್ಲಿ 14 ಮಂದಿ ಸಾವು, 123 ಗಾಯ

ಕೋಳಿಕ್ಕೋಡ್, ಆ 7 (ಯುಎನ್‌ಐ) ದುಬೈನಿಂದ ಕೇರಳದ ಕೋಳಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ದುರಂತಕ್ಕೀಡಾಗಿದ್ದು, 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಾಯಗೊಂಡಿದ್ದಾರೆ. 15 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಏರ್‌ ಇಂಡಿಯಾ ವಿಮಾನ IX-1344 ರನ್‌ ವೇ ನಿಂದ ಜಾರಿ ಈ ದುರಂತ ಸಂಭವಿಸಿದೆ. ಭಾರಿ ಮಳೆಯಿಂದ ಈ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ವಿಮಾನದಲ್ಲಿ 191 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್ ಸೇರಿ ಆರು ಸಿಬ್ಬಂದಿ ಇದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ದುಬೈನಿಂದ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಮಯದಲ್ಲಿ ವಿಮಾನ ಪೈಲಟ್ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿದೆ. ಅಪಘಾತದ ರಭಸಕ್ಕೆ ವಿಮಾನ ಬಿರುಕುಗೊಂಡಿದೆ.
ಅದೃಷ್ಟವಾಶಾತ್ ವಿಮಾನಕ್ಕೆ ಬೆಂಕಿ ತಗಲುದೇ ಇರುವುದರಿಂದ ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ಸುಗಮವಾಗಿದೆ ಎನ್ನಲಾಗಿದೆ.
ಅಪಘಾತದ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತ ಹೇಳಿಕೆ ನೀಡಿದ್ದು, AXB1344, B737 ವಿಮಾನ ಕೋಳಿಕ್ಕೋಡ್ ಬಳಿಯ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ರನ್‌ವೇಯಿಂದ ಜಾರಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿಮಾನ ಎರಡು ಹೋಳಾಗಿದ್ದು, ಭಾರೀ ಮಳೆಯ ಕಾರಣಕ್ಕೆ ಪೈಲಟ್ ಲ್ಯಂಡಿಂಗ್ ಮಾಡುವಲ್ಲಿ ವಿಫಲವಾಗಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದೆ.
ಈ ಮಧ್ಯೆ ಪ್ರಧಾನಿ ಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಅಪಘಾತದ ವಿವರಣೆ ಪಡೆದಿದ್ದಾರೆ. ರಕ್ಷಣಾ ಕಾರ್ಯದ ಕುರಿತು ಮುಖ್ಯಮಂತ್ರಿ ಅವರಿಂದ ಮೋದಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ತಾವು ಕೋಳೊಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಕುರಿತು ನಿರಂತರ ಮಾಹಿತಿ ಪಡೆಯುತ್ತಿರುವುದಾಗಿ ಪಿಣರಾಯಿ ವಿಜಯನ್ ಪ್ರಧಾನಿ ಅವರಿಗೆ ತಿಳಿಸಿದ್ದಾರೆ.
ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿರುವ ಏರ್ ಇಂಡಿಯಾ ನಾಗರಿಕ ವಿಮಾನ ಅಪಘಾತದ ಘಟನೆ ದುರದೃಷ್ಟಕರ. ಈವರೆಗೆ ಇಬ್ಬರು ಮೃತಪಟ್ಟ ಮಾಹಿತಿಯಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಕ್ಷಣಾಕಾರ್ಯ ಮುಂದುವರಿದಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗೊಂಡಿರುವವರು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆಂದು ಸಚಿವ ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.
ಯುಎನ್‌ಐ ಆರ್‌ಕೆ 2230
More News
ಪ್ರಧಾನಿ ಮೋದಿ ಜೀ   ಚಹಕ್ಕಾಗಿ ರೈತರ ಪರ ಹೋರಾಟ ನಡೆಸುತ್ತಿಲ್ಲ: ಎಎಪಿ ಸಂಸದ ಸಂಜಯ್ ಸಿಂಗ್ ಟ್ವೀಟ್

ಪ್ರಧಾನಿ ಮೋದಿ ಜೀ ಚಹಕ್ಕಾಗಿ ರೈತರ ಪರ ಹೋರಾಟ ನಡೆಸುತ್ತಿಲ್ಲ: ಎಎಪಿ ಸಂಸದ ಸಂಜಯ್ ಸಿಂಗ್ ಟ್ವೀಟ್

22 Sep 2020 | 8:39 PM

ನವದೆಹಲಿ, ಸೆ 22(ಯುಎನ್ಐ) ಸದನದಿಂದ ಅಮಾನತ್ತಿಗೊಳಗಾಗಿ ನಿರಶನ ನಡೆಸುತ್ತಿದ್ದ ಮೇಲ್ಮನೆಯ 8 ಸಂಸದರಿಗೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಿಂಗ್ ಚಹಾ ನೀಡಿದ್ದನ್ನು ಪ್ರಧಾನಿ ಮೋದಿ ಪ್ರಶಂಸಿಸರುವ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸ್ಪಂದಿಸಿದ್ದಾರೆ.

 Sharesee more..
ಡ್ರಗ್ಸ್ ಜಾಲ; ಮುಂಬೈ ಖ್ಯಾತ ನಟಿಯರ ಮೇಲೆ ಎನ್‌ಸಿಬಿ ಕಣ್ಣು; ರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ

ಡ್ರಗ್ಸ್ ಜಾಲ; ಮುಂಬೈ ಖ್ಯಾತ ನಟಿಯರ ಮೇಲೆ ಎನ್‌ಸಿಬಿ ಕಣ್ಣು; ರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ

22 Sep 2020 | 8:32 PM

ಮುಂಬೈ, ಸೆ 22 (ಯುಎನ್ಐ) ಬಾಲಿವುಡ್‌ ಚಿತ್ರೋದ್ಯಮದಲ್ಲಿ ಡ್ರಗ್‌ ದಂಧೆಯನ್ನು ಎಳೆಎಳೆಯಾಗಿ ಹೊರಗೆಳೆಯುತ್ತಿರುವ ಮದ್ಯವ್ಯಸನ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಹಲವು ದೊಡ್ಡ ಚಿತ್ರ ನಟರು ಮತ್ತು ಅವರ ಪ್ರಚಾರ ಏಜೆಂಟರ ವ್ಯವಹಾರಗಳ ಮೇಲೆ ಕಣ್ಣಿರಿಸಿದೆ.

 Sharesee more..
ಕೋವಿಡ್‌19 ; ಯಡಿಯೂರಪ್ಪ ಸೇರಿ 7  ಸಿಎಂಗಳ  ಜೊತೆ  ಪ್ರಧಾನಿ ನಾಳೆ ವರ್ಚುವಲ್ ಸಮಾಲೋಚನೆ

ಕೋವಿಡ್‌19 ; ಯಡಿಯೂರಪ್ಪ ಸೇರಿ 7 ಸಿಎಂಗಳ ಜೊತೆ ಪ್ರಧಾನಿ ನಾಳೆ ವರ್ಚುವಲ್ ಸಮಾಲೋಚನೆ

22 Sep 2020 | 8:22 PM

ನವದೆಹಲಿ, ಸೆ 22(ಯುಎನ್ಐ) ಕೋವಿಡ್ -19 ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೈಗೊಂಡಿರುವ ಸಿದ್ದತೆ ಹಾಗೂ ಸ್ಥಿತಿಗತಿಗಳ ಪರಾಮರ್ಶೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಉನ್ನತ ಮಟ್ಟದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

 Sharesee more..