Sunday, Mar 29 2020 | Time 00:30 Hrs(IST)
Sports Share

ಏಷ್ಯಾ, ವಿಶ್ವ ಇಲೆವೆನ್ ತಂಡ ಪ್ರಕಟ

ಢಾಕಾ, ಫೆ.25 (ಯುಎನ್ಐ)- ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮದಿನಾಚರಣೆ ಪ್ರಯುಕ್ತ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ತಂಡಗಳ ನಡುವೆ ಕಾದಾಟ ನಡೆಯಲಿದ್ದು, ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ.
ಶೇರ್ ಎ ಬೆಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾರ್ಚ್ 21 ಹಾಗೂ 22 ರಂದು ಪಂದ್ಯ ನಡೆಯಲಿದೆ ಎಂದು ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ (ಬಿಸಿಬಿ) ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅವರು ಒಂದು ಪಂದ್ಯ ಆಡಲು ಒಪ್ಪಿದ್ದಾರೆ. ಉಳಿದ ಪಂದ್ಯಗಳ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದಿದ್ದಾರೆ.
ಉಳಿದಂತೆ ಟೀಮ್ ಇಂಡಿಯಾದ ರಿಷಭ್ ಪಂತ್, ಕುಲ್ ದಿಪ್ ಯಾದವ್, ಶಿಖರ್ ಧವನ್ ಮತ್ತು ಮೊಹಮ್ಮದ್ ಶಮಿ ಏಷ್ಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್, “ನಾವು ಭಾರತದಿಂದ ನಾಲ್ಕು ಆಟಗಾರರ ಹೆಸರನ್ನು ಹೊಂದಿದ್ದೇವೆ. ಆದರೆ, ಇನ್ನು ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕಿದೆ” ಎಂದಿದ್ದಾರೆ.
ಅಫ್ಘಾನಿಸ್ತಾನ ಪರ ರಶೀದ್ ಖಾನ್, ಮುಜೀಬ್ ರಹಮಾನ್, ಶ್ರೀಲಂಕಾ ಪರ ಲಸಿತ್ ಮಲಿಂಗ್, ತಿಸಾರ ಪೆರೆರಾ, ನೇಪಾಳ ಸಂದೀಪ್ ಲಮಿಶೇನ್ ಏಷ್ಯಾ ತಂಡದಲ್ಲಿ ಸ್ಥಾಣ ಪಡೆದಿದ್ದಾರೆ. ಆತಿಥೇಯ ತಂಡದ ತಮೀಮ್ ಇಕ್ಬಾಲ್, ಮುಷ್ಫೀಕರ್ ರಹೀಮ್, ಮುಷ್ತಾಫಿಜುರ್ ರಹಾಮನ್ ಸಹ ಏಷ್ಯಾ ತಂಡದಲ್ಲಿದ್ದಾರೆ.
ಏಷ್ಯಾ ತಂಡ: ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ತಮೀಮ್ ಇಕ್ಬಾಲ್, ಲಿಟನ್ ದಾಸ್, ಮುಷ್ಫಿಕರ್ ರಹೀಮ್, ಮುಷ್ತಾಫಿಜುರ್ ರಹಮಾನ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಸಂದೀಪ್ ಲಮಿಶೇನೆ, ಥಿಸರಾ ಪೆರೆರಾ, ಲಸಿತ್ ಮಾಲಿಂಗ.
ವಿಶ್ವ ಇಲೆವೆನ್: ಫಾಫ್ ಡು ಪ್ಲೆಸಿಸ್ (ಸಿ), ಅಲೆಕ್ಸ್ ಹೇಲ್ಸ್, ಕ್ರಿಸ್ ಗೇಲ್, ನಿಕೋಲಸ್ ಪೋರನ್, ರಾಸ್ ಟೇಲರ್, ಜಾನಿ ಬೈರ್‌ಸ್ಟೋ, ಆದಿಲ್ ರಶೀದ್, ಮಿಚೆಲ್ ಮೆಕ್ಲೆನ್ ಗನ್, ಆಂಡ್ರ್ಯೂ ಟೈ, ಶೆಲ್ಡನ್ ಕಾಟ್ರೆಲ್, ಲುಂಗಿ ಗಿಡಿ, ಕೀರನ್ ಪೊಲಾರ್ಡ್.
ಯುಎನ್ಐ ವಿಎನ್ಎಲ್ 1920
More News

ಮಾಧ್ಯಮದ ಮೇಲೆ ಧೋನಿ ಪತ್ನಿ ಆಕ್ರೋಶ

28 Mar 2020 | 9:55 PM

 Sharesee more..

ತುರ್ತು ಯೋಜನೆಯ ಕೆಲಸ: ಐಸಿಸಿ

28 Mar 2020 | 9:45 PM

 Sharesee more..
ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

28 Mar 2020 | 9:32 PM

ನವದೆಹಲಿ, ಮಾ.28 (ಯುಎನ್ಐ)- ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕೊರೊನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ತಮ್ಮ ಎಂಪಿ ನಿಧಿಯಿಂದ 1 ಕೋಟಿ ರೂ.ಗಳ ಅನುದಾನವನ್ನು ಶನಿವಾರ ಪ್ರಕಟಿಸಿದ್ದಾರೆ.

 Sharesee more..