Sunday, Jul 5 2020 | Time 12:48 Hrs(IST)
 • ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ,ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ
 • ದೆಹಲಿಯಲ್ಲಿ ಸೋಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ; ಕೇಜ್ರವಾಲ್
 • ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ
 • ಭಾರತದಲ್ಲಿ 24,850 ಕೋವಿಡ್ ಪ್ರಕರಣಗಳು ವರದಿ, ಗುಣಮುಖರಾದವರ 4 ಲಕ್ಷಕ್ಕೇರಿಕೆ
 • ನ್ಯೂಜಿಲೆಂಡ್‌ನಲ್ಲಿ ಹೊಸದಾಗಿ ಮೂರು ಕೊರೊನಾ ಪ್ರಕರಣ ದೃಢ
 • ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿ: ಜನಜೀವನ ಸ್ತಬ್ಧ
 • ಕಂದಮಾಲ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ನಕ್ಸಲರು ಹತ
 • ಭಾರತದಲ್ಲಿ ಒಂದೇ ದಿನ ೨೪,೮೫೦ ಪ್ರಕರಣಗಳು, ೬೧೩ ಸಾವುಗಳು !
 • ಬ್ರೆಜಿಲ್‍ನಲ್ಲಿ ಒಂದೇ ದಿನ 38,000 ಹೊಸ ಕೊವಿಡ್‍ ಪ್ರಕರಣಗಳು ದೃಢ, 1,000ಕ್ಕೂ ಹೆಚ್ಚು ಸೋಂಕಿತರು ಸಾವು
 • ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ; ಡೊನಾಲ್ಡ್ ಟ್ರಂಪ್
 • ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
 • ಶ್ರೀನಗರ- ಪುಲ್ವಾಮ ರಸ್ತೆಯಲ್ಲಿ ಸ್ಫೋಟ, ಸಿಆರ್ಪಿಎಫ್ ಯೋಧನಿಗೆ ಗಾಯ
 • ಜಪಾನ್‍ ನಲ್ಲಿ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ-ಏಳು ಮಂದಿ ಸಾವು
 • ಸಣ್ಣ ಉದ್ಯಮಗಳಿಗೆ ತುರ್ತು ಸಾಲ, ತಾತ್ಕಾಲಿಕ ವಿಸ್ತರಣೆಗೆ ಟ್ರಂಪ್ ಸಹಿ
 • ಅಮೆರಿಕನ್ನರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ತಣ್ಣಿರು ಹಾಕಿದ ಕರೋನ
Karnataka Share

ಐಟಿ ನಗರ ಬೆಂಗಳೂರಿಗೆ ಉಚಿತ ವೈಫೈ: ಡಾ. ಸಿ.ಎನ್‌ ಅಶ್ವತ್ಥನಾರಾಯಣ ಘೋಷಣೆ

ಬೆಂಗಳೂರು, ನ 20 [ಯುಎನ್ಐ] ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನ ಗಮನ ಸೆಳೆದು ಸಿಲಿಕಾನ್ ಸಿಟಿ ಎಂದು ಕರಸಿಕೊಳ್ಳುವ ಬೆಂಗಳೂರಿಗೆ ಮುಂದಿನ 9 ತಿಂಗಳ ಒಳಗಾಗಿ ಉಚಿತ ವೈಫೈ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದು, ಪ್ರತಿದಿನ ಒಂದು ಗಂಟೆ ಅತ್ಯಂತ ವೇಗ ಇಂಟರ್ ನೆಟ್ ಸೌಲಭ್ಯ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪ್ರಕಟಿಸಿದ್ದಾರೆ.
ಇದಕ್ಕಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಸ್ಪಾಟ್‌ ಸ್ಥಾಪಿಸಲಾಗುವುದು. ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಟೆಕ್ ಸಮಾವೇಶದ ಅಂಗವಾಗಿ ಈ ಘೋಷಣೆ ಮಾಡಿದ ಅವರು, ನಾಲ್ಕು ವರ್ಷಗಳಿಂದ ವೈಫೈ ಸೌಲಭ್ಯಕ್ಕೆ ಬೇಡಿಕೆ ಇದೆ. ಬೆಂಗಳೂರು ಡಿಜಿಟಲ್ ನಗರ ನಿರ್ಮಾಣಕ್ಕೆ ೧ ಗೀಗಾ ಬೈಟ್ ನಷ್ಟು ಅಂತಾರಾಷ್ಟ್ರೀಯ ಸಾಮರ್ಥ್ಯದ ಇಂಟರ್ ನೆಟ್ ಕಲ್ಪಿಸಲು ಆಕ್ಟ್ ಸಂಸ್ಥೆ ಮುಂದಾಗಿದೆ.ಈ ಯೋಜನೆಯನ್ನು ೯ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ವಿಷನ್ ಪಾರ್ ವೈಪೈ ಯೋಜನೆಯನ್ನು ಅತಿ ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು , ೮೦೦ ಚದರ ಕಿಲೋಮೀಟರ್ ವ್ಯಾಪ್ತಿಯ ನಗರಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ವೈಫೈ ಸ್ಪಾಟ್ ಗಳನ್ನು ನಿರ್ಮಿಸಲಾಗುವುದು. "ನಗರದ ಜನರ ಬಹುದಿನಗಳ ಬೇಡಿಕೆ ವೈಫೈ ಸ್ಪಾಟ್ ಅಳವಡಿಕೆಗೆ ಕಾಲ ಕೂಡಿಬಂದಿದೆ. ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ. ಪ್ರತಿಯೊಬ್ಬರಿಗೂ ವೈಫೈ ಸೌಲಭ್ಯ ಸಿಗುವಂತಾಗಬೇಕು. ನಗರದಲ್ಲಿ ಇನ್ನು ಮುಂದೆ ಪ್ರತಿಯೊಬ್ಬರಿಗೂ ಕನಿಷ್ಠ ಒಂದು ತಾಸು ಉಚಿತ ಇಂಟರ್‌ನೆಟ್‌ ಸಿಗುವಂತಾಗಬೇಕು ಎಂದರು.
ಸ್ಮಾರ್ಟ್‌ ಸಿಟಿಗಾಗಿ ವೈಫೈ ಟವರ್‌, ಕ್ಯಾಮರಾ ಸೇರಿದಂತೆ ಎಲ್ಲ ಸೌಕರ್ಯಯವನ್ನು ಒದಗಿಸಲು 100 ಕೋಟಿ ರೂ. ವೆಚ್ಚವಾಗಲಿದೆ. ಇಂಟರ್ನೆಟ್‌ ಸೌಲಭ್ಯ ಒದಗಿಸುವ ಸಂಬಂಧ ಆ್ಯಕ್ಟ್‌ ಸಂಸ್ಥೆ ಜತೆ ಸರ್ಕಾರ ಮಾತುಕತೆ ನಡೆಸಿತ್ತು. ಸಮಾಜ ಸೇವೆ ದೃಷ್ಟಿಯಿಂದ ಇಂಟರ್ನೆಟ್‌ ಸೇವೆ ಒದಗಿಸಲು ಸಂಸ್ಥೆ ಮುಂದೆ ಬಂದಿದೆ ಹೊರತು ಪ್ರಚಾರದ ಉದ್ದೇಶದಿಂದ ಅಲ್ಲ. ಕಾನೂನು ಚೌಕಟ್ಟಿನ ಪರಿಮಿತಿಯಲ್ಲಿ, ಪಾಲಿಕೆ ವತಿಯಿಂದ ವೈಫೈ ಸ್ಟಾಟ್‌ಗಳನ್ನು ಅಳವಡಿಸಲಾಗುವುದು. ನಾವು ಇದಕ್ಕೆ ಯಾವುದೇ ಹಣ ವ್ಯಯಿಸುತ್ತಿಲ್ಲ ಎಂದರು.
ಆಕ್ಟ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರ ಬಾಲಾ ಮಾತನಾಡಿ, "ಬೆಂಗಳೂರನ್ನು ಡಿಜಿಟಲ್‌ ಸಿಟಿ ಮಾಡುವ ನಿಟ್ಟಿನಲ್ಲಿ ದೊರೆತಿರುವ ಈ ಅವಕಾಶಕ್ಕೆ ಧನ್ಯವಾದ ಹೇಳುತ್ತೇವೆ. ಹಲವಾರು ಸಂದರ್ಭಗಳಲ್ಲಿ ನಾವು ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಡಿಜಿಟಲ್‌ ಸಂಪರ್ಕದ ಮೂಲಕ ನಗರದ ಜನತೆಗೆ ನಮ್ಮ ಸೇವೆ ಒದಗಿಸಲು ಮುಂದಾಗಿದ್ದೇವೆ. 1 ಗಿಗಾ ಬೈಟ್‌ ಸ್ಪೀಡ್‌ ಇಂಟರ್ನೆಟ್‌ ಒದಗಲಿಸಲು ನಾವು ಬದ್ಧ. ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ ಸಂಪರ್ಕ ಕ್ರಾಂತಿ ನಡೆಯಲಿದೆ. ಈ ಮೂಲಕ ನಗರದ ಜನ ಜೀವನದಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದು," ಎಂದರು.
ಯುಎನ್ಐ ಎಂಎಸ್ಆರ್ ವಿಎನ್ 1605