Monday, Jun 1 2020 | Time 02:57 Hrs(IST)
Sports Share

ಐಪಿಎಲ್ ಗಿಂತಲೂ ವಿಶ್ವಕಪ್ ಮಿಗಿಲು: ಬಾರ್ಡರ್

ಐಪಿಎಲ್ ಗಿಂತಲೂ ವಿಶ್ವಕಪ್ ಮಿಗಿಲು: ಬಾರ್ಡರ್
ಐಪಿಎಲ್ ಗಿಂತಲೂ ವಿಶ್ವಕಪ್ ಮಿಗಿಲು: ಬಾರ್ಡರ್

ನವದೆಹಲಿ, ಮೇ 22 (ಯುಎನ್ಐ) ವಿಶ್ವಾದ್ಯಂತ ಆತಂಕವನ್ನುಂಟು ಮಾಡಿರುವ ಕೋವಿಡ್-19 ವೈರಸ್ ಸೋಂಕು ಹತೋಟಿಗೆ ಬಾರದಿರುವ ಹಿನ್ನೆಲೆಯಲ್ಲಿ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವ ಕಪ್ ಟೂರ್ನಿ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ವಿಶ್ವ ಕಪ್ ನಡೆಯದಿದ್ದರೆ, ಭಾರತದಲ್ಲಿ ಐಪಿಎಲ್ ನಡೆಸಲು ಚಿಂತನ-ಮಂಥನಗಳು ನಡೆಯುತ್ತಿವೆ. ಆದರೆ ಈ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಅಲನ್ ಬಾರ್ಡನ್ ಬೇರಸ ವ್ಯಕ್ತಪಡಿಸಿದ್ದು, ಭಾರತ ಲೀಗ್ ಒಂದಕ್ಕೆ ವಿಶ್ವ ಕಪ್ ಗಿಂತ ಹೆಚ್ಚು ಆದ್ಯತೆ ನೀಡುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ಕೋವಿಡ್ ಪಿಡುಗಿನಿಂದ ಟೋಕಿಯೊ ಒಲಿಂಪಿಕ್ಸ್ ಸೇರಿದಂತೆ ಬಹುತೇಕ ಟೂರ್ನಿಗಳನ್ನು ಮುಂದೂಡಲಾಗಿದೆ. ಹೀಗಿದ್ದರೂ ಟಿ20 ವಿಶ್ವ ಕಪ್ ನಡೆಸುವ ಬಗೆಗಿನ ಚರ್ಚೆಗಳು ಮನ್ನಲೆಯಲ್ಲಿವೆ. ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ವಿಶ್ವ ಕಪ್ ನಡೆಸಲು ಯೋಜಿಸಲಾಗಿದೆ. ಕಳೆದ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

'ವಿಶ್ವ ಕಪ್ ಮುಂದೂಡಿ ಐಪಿಎಲ್ ಗೆ ಅವಕಾಶ ಕಲ್ಪಿಸುವುದು ಕ್ರೀಡಾ ಜಗತ್ತಿನ ಕೆಟ್ಟ ನಡವಳಿಕೆಯಾಗುತ್ತದೆ.ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ, ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜನೆಗೆ ಪ್ರತಿಭಟನಾರ್ಥವಾಗಿ ಯಾವುದೇ ದೇಶಗಳು ಮತ್ತು ಮಂಡಳಿಗಳು ತಮ್ಮ ಆಟಗಾರರನ್ನು ಕಳಿಸಬಾರದು, ' ಎಂದಿದ್ದಾರೆ.

ಯುಎನ್ಐಆರ್ ಕೆ 1703