Sunday, Jul 5 2020 | Time 12:47 Hrs(IST)
  • ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ,ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ
  • ದೆಹಲಿಯಲ್ಲಿ ಸೋಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ; ಕೇಜ್ರವಾಲ್
  • ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ
  • ಭಾರತದಲ್ಲಿ 24,850 ಕೋವಿಡ್ ಪ್ರಕರಣಗಳು ವರದಿ, ಗುಣಮುಖರಾದವರ 4 ಲಕ್ಷಕ್ಕೇರಿಕೆ
  • ನ್ಯೂಜಿಲೆಂಡ್‌ನಲ್ಲಿ ಹೊಸದಾಗಿ ಮೂರು ಕೊರೊನಾ ಪ್ರಕರಣ ದೃಢ
  • ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿ: ಜನಜೀವನ ಸ್ತಬ್ಧ
  • ಕಂದಮಾಲ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ನಕ್ಸಲರು ಹತ
  • ಭಾರತದಲ್ಲಿ ಒಂದೇ ದಿನ ೨೪,೮೫೦ ಪ್ರಕರಣಗಳು, ೬೧೩ ಸಾವುಗಳು !
  • ಬ್ರೆಜಿಲ್‍ನಲ್ಲಿ ಒಂದೇ ದಿನ 38,000 ಹೊಸ ಕೊವಿಡ್‍ ಪ್ರಕರಣಗಳು ದೃಢ, 1,000ಕ್ಕೂ ಹೆಚ್ಚು ಸೋಂಕಿತರು ಸಾವು
  • ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ; ಡೊನಾಲ್ಡ್ ಟ್ರಂಪ್
  • ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
  • ಶ್ರೀನಗರ- ಪುಲ್ವಾಮ ರಸ್ತೆಯಲ್ಲಿ ಸ್ಫೋಟ, ಸಿಆರ್ಪಿಎಫ್ ಯೋಧನಿಗೆ ಗಾಯ
  • ಜಪಾನ್‍ ನಲ್ಲಿ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ-ಏಳು ಮಂದಿ ಸಾವು
  • ಸಣ್ಣ ಉದ್ಯಮಗಳಿಗೆ ತುರ್ತು ಸಾಲ, ತಾತ್ಕಾಲಿಕ ವಿಸ್ತರಣೆಗೆ ಟ್ರಂಪ್ ಸಹಿ
  • ಅಮೆರಿಕನ್ನರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ತಣ್ಣಿರು ಹಾಕಿದ ಕರೋನ
Sports Share

ಐಪಿಎಲ್ ಗೆಲ್ಲಲು ಕೊಹ್ಲಿ, ಡಿವಿಲಿಯರ್ಸ್‌ ನೆಚ್ಚಿಕೊಳ್ಳುವಂತಿಲ್ಲ : ಮೊಯಿನ್ ಅಲಿ

ನವದೆಹಲಿ, ನ 18 (ಯುಎನ್‌ಐ) ಇಂಡಿಯನ್ ಪ್ರೀಮಿಯರ್ ಲೀಗ್ ಗೆಲ್ಲಲು ನಾಯಕ ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್‌ರನ್ನು ಮಾತ್ರ ನೆಚ್ಚಿಕೊಳ್ಳುವಂತಿಲ್ಲ. ನನ್ನಂತಹ ಬ್ಯಾಟ್ಸ್‌ಮನ್ ಅಥವಾ ಯಾರೇ ಆಗಲಿ ಮುಂದೆ ಬಂದು ಅತ್ಯುತ್ತಮ ಬ್ಯಾಟಿಂಗ್ ಮಾಡುವ ಅಗತ್ಯವಿದೆ ಎಂದು ಎಂದು ಮೊಯಿನ್ ಅಲಿ ತಿಳಿಸಿದ್ದಾರೆ.
ಬೆಂಗಳೂರು ತಮ್ಮ ಉಳಿಯೇ ಉಳಿಸಿಕೊಂಡಿರುವ ಇಬ್ಬರೇ ವಿದೇಶಿ ಆಟಗಾರರ ಪೈಕಿ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಬೆಂಗಳೂರು ಅದೃಷ್ಟದ ಬಗ್ಗೆ ಮಾತನಾಡಿರುವ ಅಲಿ, "ಕಪ್ ಗೆಲ್ಲಲು ಕೇವಲ ಕೊಹ್ಲಿ ಹಾಗೂ ವಿಲಿಯರ್ಸ್ ಅವರನ್ನೇ ನೆಚ್ಚಿಕೊಳ್ಳುವಂತಿಲ್ಲ" ಎಂದಿದ್ದಾರೆ.
ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ 13ನೇ ಆವೃತ್ತಿಗೆ ಕಾಲಿರಿಸುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟದ ಹುಡುಕಾಟದಲ್ಲಿದೆ.
ಪ್ರಸ್ತುತ ಐಪಿಎಲ್ 2020 ಆವೃತ್ತಿಗಾಗಿ ಬೆಂಗಳೂರು ತಂಡದಲ್ಲಿ ಗಮನಾರ್ಹ ಬದಲಾವಣೆ ತರಲಾಗಿದ್ದು, ಈಗಾಗಲೇ ತಂಡಕ್ಕೆ ಅಗತ್ಯವಿಲ್ಲದ 12 ಆಟಗಾರರನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ 2019 ಡಿಸೆಂಬರ್ 19ರಂದು ನಡೆಯಲಿರುವ ಹರಾಜಿಗೆ ಭರ್ಜರಿ ಪೂರ್ವ ತಯಾರಿಯನ್ನು ನಡೆಸಿದೆ.
"ನಮಗೆ ಉತ್ತಮ ಆರಂಭದ ಅಗತ್ಯವಿದೆ. ನನಗನಿಸುತ್ತದೆ ಬೆಂಗಳೂರು ತಂಡವು ಯಾವಾಗಲೂ ನಿಧಾನವಾಗಿ ಅಭಿಯಾನ ಆರಂಭಿಸುತ್ತದೆ. ನಾವು ಹೆಚ್ಚು ಧೈರ್ಯಶಾಲಿಯಾಗಿರಬೇಕು. ವಿಶೇಷವಾಗಿ ಬೆಂಗಳೂರಿನಲ್ಲಿ ವಿಕೆಟ್ ಅತ್ಯುತ್ತಮವಾಗಿರುತ್ತದೆ. ಬೌಂಡರಿಗಳು ಕಿರುದಾಗಿದ್ದು, ಬೌಲರ್‌ಗಳನ್ನು ಭೀತಿಗೊಳಿಸುತ್ತದೆ" ಎಂದು ಮೊಯಿನ್ ತಿಳಿಸಿದರು.
ಯುಎನ್‌ಐ ಆರ್ ಕೆ 2215