Wednesday, Jan 29 2020 | Time 13:41 Hrs(IST)
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
 • ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
business economy Share

ಐಪಿಚ್ ಮೂಲಕ 4 ಕೋಟಿ ರೂ ಹೂಡಿಕೆ ಘೋಷಣೆ ಮಾಡಿದ ವಿಲ್ ಗ್ರೋ

ಬೆಂಗಳೂರು, ಡಿ.7 (ಯುಎನ್ಐ) ಭಾರತದ ಅತ್ಯಂತ ಹಳೆಯ ಹಾಗು ಅಗ್ರಗಣ್ಯ ಸಾಮಾಜಿಕ ಉದ್ಯಮ ಕೇಂದ್ರವಾದ ವಿಲ್ ಗ್ರೋ 2019 ರ ಐಪಿಚ್ ಹೂಡಿಕೆದಾರರನ್ನು ಘೋಷಣೆ ಮಾಡಿದೆ. ಈ ವರ್ಷದಲ್ಲಿ 4 ಕೋಟಿ ರೂ ಹೂಡಿಕೆಯನ್ನು ಐಪಿಚ್ ಘೋಷಣೆ ಮಾಡಿದ್ದು ಕೃಷಿ, ಆರೋಗ್ಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದ ನವೋದ್ಯಮಗಳಿಗೆ ಈ ಬಂಡವಾಳವನ್ನು ಬಳಕೆ ಮಾಡಲಾಗುವುದು.
ಆರೋಗ್ಯ ಕ್ಷೇತ್ರದ ನವೋದ್ಯಮಗಳಿಗೆ ವಿಲ್ ಗ್ರೋ ಇಂಡಿಯಾ ಪ್ರಮುಖ ಹೂಡಿಕೆದಾರ. ತಂತ್ರಜ್ಞಾನದ ಮೇಲೆ ಹೆಚ್ಚು ಆದ್ಯತೆ ನೀಡಿದ್ದು ವ್ಯಕ್ತಿಯ ವಿಕಲಾಂಗತೆಯನ್ನು ಇದರ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿದೆ. ಪುನರ್ವಸತಿ ಮತ್ತು ವೈದ್ಯಕೀಯ ಸಾಧನಗಳ ತಯಾರಕ ಸಂಸ್ಥೆ ಬೀಏಬಲ್ 25,00,000 ರೂ ಬಂಡವಾಳ ಸ್ವೀಕರಿಸಿದೆ. ಆ್ಯಂಟಿ-ಸ್ಲಿಪ್, ಆಲ್-ಟೆರೈನ್ ಕ್ರಚ್ಚಸ್ ತಯಾರಕ ಸಂಸ್ಥೆ ಫ್ಲೆಕ್ಸ್ಮೊಟಿವ್ ಟೆಕ್ನಾಲಜಿಸ್ ಕೂಡ 25,00,000 ಬಂಡವಾಳ ಸ್ವೀಕರಿಸಿದೆ.
ಕೃಷಿಯಲ್ಲಿ ನೀರಿನ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ನವೋದ್ಯಮಗಳಿಗೆ ವಿಲ್ ಗ್ರೋ ಸಂಸ್ಥೆಯು ಹಿಂದೂಸ್ಥಾನ್ ಯುನಿಲಿವರ್ ಫೌಂಡೇಷನ್ ಜೊತೆಗೂಡಿ ಬಂಡವಾಳ ಹೂಡಿಕೆ ಮಾಡಿದೆ. ಕೆರೆ, ನದಿಗಳ ಜಲ ಸಂಪತ್ತನ್ನು ನಿರ್ವಹಣೆ ಮಾಡುವ ದಿಕ್ಕಿನಲ್ಲಿ ಕ್ರಿಸ್ಟ್ನಾಮ್ ಟೆಕ್ನಾಲಜಿಸ್ ಐಒಟಿ ಪರಿಹಾರವನ್ನು ತಯಾರಿಸುತ್ತಿದೆ. ಈ ನವೋದ್ಯಮವು 50,00,000 ರೂ ಬಂಡವಾಳ ಗಳಿಸಿದೆ. ಕೃಷಿ ಸಾಧನಗಳ ತಯಾರಿಕೆಯಲ್ಲಿ ಒಸ್ಸಿಲ್ಲೋ ಮಷಿನ್ ಶ್ರಮಿಸುತ್ತಿದೆ. ಸಣ್ಣ ಜಮೀನಿನಲ್ಲಿ ಉಪಯೋಗಿಸುವ ಎಲೆಕ್ಟ್ರಿಕ್ ಪ್ಯಾಡಿ ಸೀಡ್ಲಿಂಗ್ ಟ್ರಾನ್ಸ್ ಪ್ಲಾಂಟರ್ ಈ ಸಂಸ್ಥೆ ತಯಾರಿಸಿದ ಮೊದಲ ಉತ್ಪನ್ನ. ಈ ಸಂಸ್ಥೆಯು 30,00,000 ರೂ ಬಂಡವಾಳ ಗಳಿಸಿದೆ.
ಫಸಲನ್ನು ಹೆಚ್ಚಿಸುವ ಉದ್ದೇಶದಿಂದ ಐಒಟಿ, ಕೃತಕ ಬುದ್ದಿವಂತಿಕೆ, ರಿಮೋಟ್ ಸೆನ್ಸಿಂಗ್ ಮತ್ತು ಮಷಿನ್ ಲರ್ನಿಂಗ್ ಸೇರಿಸಿ ಸ್ಮಾರ್ಟ್ ಸೇವೆ ಒದಗಿಸಲು ಕಲ್ಟಿವೇಟ್ ಸಂಸ್ಥೆ ಶ್ರಮಿಸುತ್ತಿದೆ. ಈ ನವೋದ್ಯಮವು 50,00,000 ರೂ ಗಳಿಸಿದೆ. ಬತ್ತಿಹೋದ ಬೋರ್ ವೆಲ್ ರೀಚಾರ್ಜ್ ಮಾಡಲು ಉರ್ಧವಾಮ್ ಸಂಸ್ಥೆಯು ಬೋರ್ ಚಾರ್ಜರ್ ಎನ್ನುವ ವಿನೂತನ ಉತ್ಪನ್ನವನ್ನು ತಯಾರಿಸಿದೆ. ಈ ನವೋದ್ಯಮಕ್ಕೆ ವಿಲ್ ಗ್ರೋ ಮತ್ತು ಹಿಂದೂಸ್ಥಾನ್ ಯುನಿಲಿವರ್ ಫೌಂಡೇಷನ್ 30,00,000 ರೂ ಬಂಡವಾಳ ಒದಗಿಸಿದೆ.
ಮಹತ್ವದ ಬೆಳವಣಿಗೆಯಲ್ಲಿ ವಿಲ್ ಗ್ರೋ ಸಂಸ್ಥೆಯ ಇನ್ಕ್ಯೂಬೇಟೀ ಲಾಲ್ 101,00,000 ಯುಎಸ್ ಡಾಲರ್ ಅನ್ನು ಉಪಯಾ ಸೊಷಿಯಲ್ ವೆಂಚರ್ಸ್ ಮತ್ತು ಬಿಯಾಂಡ್ ಕ್ಯಾಪಿಟಲ್ ಫಂಡ್ ನಿಂದ ಪಡೆದಿದೆ. ವಿಲ್ ಗ್ರೋ ಸಂಸ್ಥೆಯ ಯುಎಸ್ಎ ಅಂಗಸಂಸ್ಥೆಯಾದ ಐಐಇಎಫ್ ಇನ್ನು ಎರಡು ಸಂಸ್ಥೆಗಳನ್ನು ಪರಿಶೀಲಿಸುತ್ತಿದೆ.
“ಈ ನವೋದ್ಯಮಗಳಿಗೆ ಐಪಿಚ್ ಮೂಲಕ ಬಂಡವಾಳವನ್ನು ಒದಗಿಸಲಾಗುತ್ತಿರುವುದ ಸಂಭ್ರಮಿಸುವ ವಿಷಯ. ನೈಜ ಸಮಸ್ಯೆಗಳನ್ನು ಬಗೆಹರಿಸುವ ಇಂತಹ ನವೋದ್ಯಮಗಳ ಅವಶ್ಯಕತೆ ಇನ್ನು ಹೆಚ್ಚಿದೆ. ಇವು ನವೋದ್ಯಮಗಳಲ್ಲಿ ಕ್ರಾಂತಿಯನ್ನು ತರುತ್ತವೆ. ಇಂತಹ ನವೊದ್ಯಮಗಳಿಗೆ ಬಂಡವಾಳ, ಸಲಹೆ ಹಾಗು ಮತ್ತಿತರ ಅಗತ್ಯ ಸೌಲಭ್ಯ ಒದಗಿಸಲಾಗುವುದು” ಎಂದು ವಿಲ್ ಗ್ರೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಪೌಲ್ ಬಾಸಿಲ್ ತಿಳಿಸಿದ್ದಾರೆ.
ಯುಎನ್ಐ ಎಎಚ್ 1051
More News

ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ

29 Jan 2020 | 12:25 PM

 Sharesee more..
ಸೆನ್ಸೆಕ್ಸ್ 144 ಅಂಕ ಏರಿಕೆ

ಸೆನ್ಸೆಕ್ಸ್ 144 ಅಂಕ ಏರಿಕೆ

28 Jan 2020 | 5:46 PM

ಮುಂಬೈ, ಜ 28 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 144 ಅಂಕ ಏರಿಕೆ ಕಂಡು 41,299.68 ರಲ್ಲಿತ್ತು.

 Sharesee more..
ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ

28 Jan 2020 | 5:38 PM

ಮುಂಬೈ, ಜ 28 (ಯುಎನ್ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 7 ಪೈಸೆ ಏರಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 37 ಪೈಸೆಯಷ್ಟಿದೆ.

 Sharesee more..