Monday, Jun 1 2020 | Time 02:14 Hrs(IST)
Sports Share

ಒಲಿಂಪಿಕ್ಸ್‌ನಲ್ಲಿ ಐಒಸಿಯೊಂದಿಗೆ ಕೆಲಸ ಮಾಡಲಾಗುವುದು: ಜಪಾನ್

ಟೋಕಿಯೊ, ಮೇ 22 (ಯುಎನ್ಐ)- 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಂಘಟನಾ ಸಮಿತಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಡುವಿನ ವ್ಯತ್ಯಾಸಗಳ ವರದಿಗಳ ನಂತರ, ಸಂಘಟಕರು ಐಒಸಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.

ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ ಆಯೋಜಿಸಲು ಜಪಾನ್ ಐಒಸಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೋಕಿಯೋ 2020 ವಕ್ತಾರ ಮಾಸಾ ಟಕಯಾ ಶುಕ್ರವಾರ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷ ನಡೆಯದಿದ್ದರೆ ಅದನ್ನು ರದ್ದುಗೊಳಿಸಲಾಗುವುದು ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಗುರುವಾರ ಹೇಳಿದ್ದರು. ಟೋಕಿಯೊ 2020 ವಕ್ತಾರರ ಹೇಳಿಕೆ ಬಾಕ್ ಹೇಳಿಕೆಯ ನಂತರ ಬಂದಿದ್ದು ವಿಶೇಷವಾಗಿತ್ತು.

ಒಲಿಂಪಿಕ್ಸ್‌ಗೆ ಹೊಸ ದಿನಾಂಕಗಳನ್ನು ಘೋಷಿಸಲಾಗಿದೆ ಮತ್ತು ಮುಂದಿನ ವರ್ಷ ಅದನ್ನು ಸುಗಮವಾಗಿ ಆಯೋಜಿಸುವುದು ನಮ್ಮ ಕೆಲಸ ಎಂದು ಟಕಯಾ ಹೇಳಿದರು. ಟೋಕಿಯೊ 2020 ಐಒಸಿಯೊಂದಿಗೆ ಈ ಕುರಿತು ಕಾರ್ಯನಿರ್ವಹಿಸುತ್ತಿದೆ.

ಟೋಕಿಯೊ 2020 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೋಶಿರೊ ಮುಟೊ ಅವರು ಮಾಧ್ಯಮ ವರದಿಗಳಲ್ಲಿ ಬಾಕ್ ಅವರ ಹೇಳಿಕೆಯನ್ನು ನೋಡಿದ್ದೇನೆ ಎಂದು ಹೇಳಿದರು. "ನಾವು ಮಾಧ್ಯಮ ಸಂದರ್ಶನದಲ್ಲಿ ಬಾಕ್ ಅವರ ಹೇಳಿಕೆಯನ್ನು ನೋಡಿದ್ದೇವೆ. ನಾವು ಇಲ್ಲಿಯವರೆಗೆ ಅವರೊಂದಿಗೆ ನೇರವಾಗಿ ಮಾತನಾಡಲಿಲ್ಲ, ಆದ್ದರಿಂದ ಅವರ ಹೇಳಿಕೆಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ಯುಎನ್ಐ ವಿಎನ್ಎಲ್ 1930