Sunday, Mar 29 2020 | Time 00:31 Hrs(IST)
National Share

ಒಂದು ಕೋಟಿ ಜನರನ್ನು ಸಂಪರ್ಕಿಸುವ ಗುರಿ : ಎಎಪಿ ಅಭಿಯಾನ

ನವದೆಹಲಿ, ಫೆ ೧೬ (ಯುಎನ್‌ಐ) ಆಮ್ ಆದ್ಮಿ ಪಕ್ಷ ಎಲ್ಲಾ ರಾಜ್ಯಗಳಲ್ಲಿ ಪಕ್ಷದ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಲು ಫೆ ೨೩ ರಿಂದ ಮಾ ೨೩ ರವರೆಗೆ ಒಂದು ತಿಂಗಳ ಅಭಿಯಾನ ನಡೆಸಲಿದೆ ಎಂದು ಪಕ್ಷದ ಹಿರಿಯ ನಾಯಕ ಗೋಪಾಲ್ ರೈ ಭಾನುವಾರ ಹೇಳಿದ್ದಾರೆ.

ಪಕ್ಷದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯ ಘಟಕಗಳು ರಾಷ್ಟ್ರೀಯ ನಿರ್ಮಾಣ ಅಭಿಯಾನವನ್ನು ಫೆಬ್ರವರಿ ೨೩ ರಿಂದ ಮಾರ್ಚ್ ೨೩ ರವರೆಗೆ ಹಮ್ಮಿಕೊಳ್ಳಲಿದ್ದು ಸ್ವಯಂಸೇವಾ ಕಾರ್ಯಕರ್ತರು ಸಭೆ ನಡೆಸಲಿದ್ದಾರೆ. ಒಂದು ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದ್ದು ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.

ಪೋಸ್ಟರ್ ಪ್ರದರ್ಶಿಸುವ ಅಭಿಯಾನವನ್ನೂ ನಡೆಸಲಿದ್ದು ಎಲ್ಲಾ ರಾಜ್ಯಗಳ ಪದಾಧಿಕಾರಿಗಳು ಆಗ್ಗಾಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಮಹತ್ವದ ಕ್ರಮಗಳ ಬಗ್ಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಯುಎನ್‌ಐ ಜಿಎಸ್‌ಆರ್ ೨೧೦೩
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..