Friday, Feb 28 2020 | Time 09:49 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಓಬಿಸಿ ಆಯೋಗ ವಿಸ್ತರಣೆಗೆ ಸಂಪುಟ ಒಪ್ಪಿಗೆ

ನವದೆಹಲಿ, ಜ 22 (ಯುಎನ್ಐ) ಹಿಂದುಳಿದ ವರ್ಗಗಳ (ಒಬಿಸಿ) ಉಪವರ್ಗೀಕರಣ ವಿವಾದವನ್ನು ಪರಿಶೀಲಿಸಲು ರಚಿಸಲಗಿರುವ ಆಯೋಗದ ಅವಧಿಯನ್ನು 2020ರ ಜುಲೈ 31ರವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಪಟ್ಟಿಯಲ್ಲಿ ಒಬಿಸಿಗಳೊಳಗಿನ ಉಪ-ವರ್ಗೀಕರಣದ ವಿಷಯವನ್ನು ಪರಿಶೀಲಿಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾದ ಆಯೋಗದ ಅಧಿಕಾರಾವಧಿಯನ್ನು ವಿಸ್ತರಿಸಲು ಸಮ್ಮತಿ ಸೂಚಿಸಿತು.
ಓಬಿಸಿ ಸಮುದಾಯ ಕೇಂದ್ರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೂ ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ , ಸಮುದಾಯಗಳಿಗೆ ಸೇರಿದ ಎಲ್ಲ ವ್ಯಕ್ತಿಗಳಿಗೆ ಅದರ ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಸಂಪುಟ ಸಭೆಯ ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಆಯೋಗದ ಸ್ಥಾಪನೆ ಮತ್ತು ಆಡಳಿತ ವೆಚ್ಚಗಳನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಭರಿಸಲಿದೆ. ಆಯೋಗದ ಅವಧಿಯನ್ನು ವಿಸ್ತರಿಸಲು ಮತ್ತು ಅದರ ಉಲ್ಲೇಖದ ನಿಯಮಗಳಲ್ಲಿ ಸೇರ್ಪಡೆಗೊಳಿಸುವ ಆದೇಶಗಳನ್ನು ಗೆಜೆಟ್‌ನಲ್ಲಿ 'ಅಧ್ಯಕ್ಷರು ನೀಡಿದ ಅನುಮೋದನೆಯ ನಂತರ, ಆದೇಶದ ರೂಪದಲ್ಲಿ ತಿಳಿಸಲಾಗುತ್ತದೆ.
2017 ರ ಅಕ್ಟೋಬರ್ 2ರಂದು ನಿವೃತ್ತ ನ್ಯಾಯಮೂರ್ತಿ ಜಿ.ರೋಹಿಣಿ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಯುಎನ್ಐ ಎಸ್ ಎಚ್ 1814