Friday, Feb 28 2020 | Time 07:15 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಓಮನ್ ದೊರೆಗೆ ಶ್ರದ್ಧಾಂಜಲಿ ಸಲ್ಲಿಸಲು ಮಸ್ಕಟ್ ಗೆ ತೆರಳುವ ಭಾರತೀಯ ನಿಯೋಗಕ್ಕೆ ನಖ್ವಿ ನೇತೃತ್ವ

ನವದೆಹಲಿ, ಜ 13(ಯುಎನ್‍ಐ)- ಈ ತಿಂಗಳ 10ರಂದು ಕೊನೆಯುಸಿರೆಳೆದ ಓಮನ್ ದೊರೆಗೆ ಅಂತಿಮ ನಮನ ಸಲ್ಲಿಸಲು ಮಸ್ಕಟ್ ಗೆ ತೆರಳುವ ಭಾರತೀಯ ನಿಯೋಗದ ನೇತೃತ್ವವನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ವಹಿಸಲಿದ್ದಾರೆ.
ಭಾರತ ಸರ್ಕಾರ ಮತ್ತು ದೇಶದ ಜನರ ಪರವಾಗಿ ಪ್ರಾಮಾಣಿಕ ಹಾಗೂ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲು ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಭಾರತೀಯ ನಿಯೋಗವನ್ನು ಈ ತಿಂಗಳ 14ರಂದು ಮಸ್ಕಟ್ ಗೆ ಕೊಂಡೊಯ್ಯಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ಸೋಮವಾರ ತಿಳಿಸಿದೆ.
ಸಚಿವರು ಪ್ರಧಾನಿ ನರೇಂದ್ರಮೋದಿ ಅವರ ಸಂತಾಪ ಸಂದೇಶವನ್ನು ಓಮನ್ ದೊರೆ ಸುಲ್ತಾನ್ ಸಯ್ಯದ್ ಹೈತಮ್ ಬಿನ್ ತಾರಿಖ್ ಬಿನ್ ತೈಮುರ್ ಅಲ್ -ಸಯಿದ್ ಅವರಿಗೆ ಕೊಂಡೊಯ್ಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಓಮನ್ ದೊರೆಯ ನಿಧನದಿಂದ ಭಾರತದ ಜನತೆಗೆ ಅತೀವ ದು:ಖವಾಗಿದೆ. ಸುಲ್ತಾನ್ ಖಬೂಸ್ ಅವರ ನಿಧನದಿಂದ ವಿಶ್ವಕ್ಕೆ ಸರಿಪಡಿಸಲಾಗದ ನಷ್ಟವಾಗಿದೆ. ದೂರದೃಷ್ಟಿಯ ಮತ್ತು ಅತ್ಯುತ್ತಮ ಆಡಳಿತಗಾರರಾಗಿದ್ದ ಅವರು ತಮ್ಮ ದೇಶವನ್ನು ಪ್ರಗತಿ, ಸಮೃದ್ಧಿಯತ್ತ ಕೊಂಡೊಯ್ದದ್ದು ಮಾತ್ರವಲ್ಲದೆ, ವಿಶ್ವ ಮತ್ತು ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದಾರೆ.’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸುಲ್ತಾನ್ ಖಬೂಸ್ ಅವರ ನಾಯಕತ್ವದಲ್ಲಿ ಓಮನ್ ನೊಂದಿಗೆ ಭಾರತ ‘ನಿಕಟ ಮತ್ತು ಸ್ನೇಹ ಬಾಂಧವ್ಯ’ವನ್ನು ಹೊಂದಿತ್ತು.
ಯುಎನ್‍ಐ ಎಸ್ ಎಲ್‍ಎಸ್ 1728