Friday, Dec 6 2019 | Time 01:29 Hrs(IST)
Sports Share

ಓಮನ್ ವಿರುದ್ಧ ಭಾರತಕ್ಕೆೆ ಮಾಡು ಇಲ್ಲವೆ ಮಡಿ ಪಂದ್ಯ ನಾಳೆ

ಮಸ್ಕತ್, ನ 18 (ಯುಎನ್‌ಐ) ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಕಾಣದೆ ತೀವ್ರ ನಿರಾಸೆಗೆ ಒಳಗಾಗಿರುವ ಸುನೀಲ್ ಚೆಟ್ರಿ ನಾಯಕತ್ವದ ಭಾರತ ಫುಟ್ಬಾಲ್ ತಂಡ ನಾಳೆ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಕಾದಾಟ ನಡೆಸಲು ಸಜ್ಜಾಗಿದೆ.
ಕಳೆದ ಸೆಪ್ಟಂಬರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಓಮನ್ ವಿರುದ್ಧ ಭಾರತ ತಂಡ ಮೊದಲಾರ್ಧ ಅವಧಿಯಲ್ಲಿ ಸುನೀಲ್ ಚೆಟ್ರಿ ಗಳಿಸಿದ್ದ ಗೋಲಿನ ಸಹಾಯದಿಂದ ಗೆಲುವಿನ ಸನಿಹದಲ್ಲಿತ್ತು. ಆದರೆ, ಕೊನೆಯ 10 ನಿಮಿಷಗಳಲ್ಲಿ ಓಮನ್ ಎರಡು ಗೋಲು ಗಳಿಸಿ ಭಾರತದ ಗೆಲುವಿನ ನಗೆಯನ್ನು ಕಿತ್ತುಕೊಂಡಿತ್ತು.
ಪ್ರಸ್ತುತ ಓಮನ್ ತಂಡ, ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯದಲ್ಲಿ 4-1 ಭಾರಿ ಅಂತರದ ಗೆಲುವಿನ ವಿಶ್ವಾಸದಲ್ಲಿ ನಾಳೆ ಕಣಕ್ಕೆೆ ಇಳಿಯುತ್ತಿದೆ. ಮತ್ತೊಂದೆಡೆ ಭಾರತ ತಂಡ, ಏಷ್ಯನ್ ಚಾಂಪಿಯನ್ ಚಾಂಪಿಯನ್ ಕತಾರ್ ವಿರುದ್ಧ ಗೋಲು ರಹಿತ ಡ್ರಾನೊಂದಿಗೆ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವಾಳಿ ಅಭಿಯಾನವನ್ನು ಆರಂಭಿಸಿತ್ತು. ಆದರೆ, ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಸೋಲು ಹಾಗೂ ಇನ್ನುಳಿದ ಮೂರರಲ್ಲಿ ಡ್ರಾ ಸಾಧಿಸಿದೆ. ಅಲ್ಲದೆ, ಕಳೆದ ಪಂದ್ಯಗಳಲ್ಲಿ ತನಗಿಂತ ಕೆಳಕ್ರಮಾಂಕದ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ 1-1 ಅಂತರದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.
ಗುಂಪು ‘ಇ’ ನಲ್ಲಿರುವ ಭಾರತ ತಂಡ ಮೂರು ಅಂಕಗಳೊಂದಿಗೆ ಮೂರು ಅಂಕ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಓಮನ್ ತಂಡ ಒಂಬತ್ತು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ, ಕತಾರ್ ತಂಡ 10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ನಾಳೆ ನಡೆಯುವ ಪಂದ್ಯದಲ್ಲಿ ಓಮನ್ ವಿರುದ್ಧ ಭಾರತ ಜಯ ಸಾಧಿಸಿದರೆ, ಮುಂದಿನ ಸುತ್ತಿಗೆ ಪ್ರವೇಶ ಮಾಡಲಿದೆ. ಇಲ್ಲವಾದಲ್ಲಿ 2022ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರ ನಡೆಯಲಿದೆ.
ಎಂಟು ಗುಂಪಿನ ರನ್ನರ್ ಅಪ್ ತಂಡಗಳು ಅರ್ಹತಾ ಸುತ್ತಿನ ಮೂರನೇ ಹಂತಕ್ಕೆೆ ನಿಯಮಿತವಾಗಿ ಅರ್ಹತೆ ಪಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಭಾರತ ತಂಡ, ಓಮನ್ ವಿರುದ್ಧ ಡ್ರಾ ಮಾಡಿಕೊಂಡಲ್ಲಿ ಎರಡನೇ ಸುತ್ತಿನ ಪ್ರವೇಶ ಕಠಿಣವಾಗಲಿದೆ. ಭಾರತ ಕೊನೆಯ ಮೂರು ಪಂದ್ಯಗಳನ್ನು ಮುಂದಿನ ವರ್ಷ ಆಡಲಿದೆ. ಕತಾರ್ ವಿರುದ್ಧ ಮಾರ್ಚ್ 26, ಬಾಂಗ್ಲಾದೇಶ ವಿರುದ್ಧ ಜೂನ್ 4 ಹಾಗೂ ಅಫ್ಘಾನಿಸ್ತಾನ ವಿರುದ್ಧ ಜೂನ್ 9 ರಂದು ಸೆಣಸಲಿದೆ.
ಓಮನ್ ವಿರುದ್ಧ ಭಾರತ ಪಾಯಿಂಟ್ ಕಲೆ ಹಾಕಿದ್ದೇ ಆದಲ್ಲಿ 2023ರ ಏಷ್ಯನ್ ಕಪ್ ಟೂರ್ನಿಯ ಅರ್ಹತಾ ಸುತ್ತಿನ ಮೂರನೇ ಹಂತಕ್ಕೆೆ ನೇರವಾಗಿ ಅರ್ಹತೆ ಪಡೆಯಲಿದೆ. ಸ್ಟಿಮ್ಯಾಕ್ ಇಗೊರ್ ಸಾರಥ್ಯದ ಭಾರತ ತಂಡ ನಾಯಕ ಸುನೀಲ್ ಚೆಟ್ರಿ ಅವರ ಮೇಲೆ ಅವಲಂಬಿತವಾಗಿಲ್ಲ. ಆದರೆ, ಕಳೆದ ನಾಲ್ಕು ಪಂದ್ಯಗಳಲ್ಲಿ ಸುನೀಲ್ ಚೆಟ್ರಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಗೋಲು ಗಳಿಸಬಹುದಾದ ಹಲವು ಅವಕಾಶಗಳನ್ನು ಬ್ಲೂ ಟೈಗರ್ಸ್ ಕೈಚೆಲ್ಲಿಕೊಂಡಿತ್ತು.
ಭಾರತ ತಂಡ, ಹಿರಿಯ ಸೆಂಟರ್ ಡಿಫೆಂಡರ್ ಅನಾಸ್ ಎಡತೋಡಿಕ್ ಅವರ ಅನುಪಸ್ಥಿಯಲ್ಲಿ ಆಡಲಿದೆ. ಕೌಟುಂಬಿಕ ತುರ್ತು ಪರಿಸ್ಥಿಯಿಂದ ಅವರು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ತವರಿಗೆ ಮರಳಿದ್ದರು. ಸಂದೇಶ ಜಿಂಗ್ಯಾನ್, ರೋಲಿಂಗ್ ಬೋರ್ಗ್‌ಸ್‌ ಹಾಗೂ ಅಮರಜೀತ್ ಸಿಂಗ್ ಅವರ ಸೇವೆಯನ್ನು ಭಾರತ ಕಳೆದುಕೊಂಡಿದೆ.
ಭಾರತ ತಂಡ:
ಸುನೀಲ್ ಚೆಟ್ರಿ(ನಾಯಕ) ಗುಪ್ರಿತ್ ಸಿಂಗ್ ಸಂಧು, ಅಮರೀಂದರ್ ಸಿಂಗ್, ಧೀರಜ್ ಸಿಂಗ್, ಪ್ರೀತಮ್ ಕೊಟಲ್, ನಿಶು ಕುಮಾರ್, ರಾಹುಲ್ ಭೆಕೆ, ನರೇಂದರ್, ಆದಿಲ್ ಖಾನ್, ಸಾರ್ಥಕ್, ಸುಭಾಸಿಷ್ ಬೋಸ್, ಮಂದರ್ ರಾವ್, ಉದಾಂತ ಸಿಂಗ್, ಜಾಕಿ ಚಂದ್ ಸಿಂಗ್, ಡೌಂಗೆಲ್, ರೇನಿಯರ್, ವಿನಿತ್ ರಾಯ್,ಸಹಲ್ ಅಬ್ದುಲ್, ಪ್ರಣಯ್, ಅನಿರುದ್ ಥಾಪ, ಚಾಂಗ್ಟೆೆ, ಬ್ರೆೆಂಡನ್ ಫೆರ್ನಾಂಡಿಸ್, ಆಶೀಕ್ ಕರುಣಿಯನ್, ಮನ್ವೀರ್ ಸಿಂಗ್, ಫಾರೂಖ್ ಚೌಧರಿ.
ಸಮಯ: ನಾಳೆ ರಾತ್ರಿ 08:30
ಸ್ಥಳ: ಸುಲ್ತಾನ್ ಕ್ಯೂಬಾಸ್ ಕ್ರೀಡಾ ಸಂಕೀರ್ಣ, ಮಸ್ಕತ್
ಯುಎನ್‌ಐ ಆರ್ ಕೆ 1942
More News

ಆರ್ಥರ್ ಶ್ರೀಲಂಕಾ ತಂಡದ ಕೋಚ್

05 Dec 2019 | 10:02 PM

 Sharesee more..

ಎಸ್ಎ ಜಿ: ಕರ್ನಾಟಕದ ಲಿಖಿತ್ ಗೆ ಬಂಗಾರ

05 Dec 2019 | 9:42 PM

 Sharesee more..

ಸೂಪರ್ ಡಿವಿಜನ್: ಡ್ರೀಮ್ ಯುನೈಟೆಡ್ ಎಫ್ ಸಿಗೆ ಜಯ

05 Dec 2019 | 9:40 PM

 Sharesee more..

ದಿಗ್ಗಜ ಬೌಲರ್ ಬಾಬ್ ವಿಲ್ಲೀಸ್ ನಿಧನ

05 Dec 2019 | 8:05 PM

 Sharesee more..