Monday, Jul 22 2019 | Time 07:15 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ಕಕ್ಷೆ ಸೇರಿದ ರಷ್ಯಾದ ನಾಲ್ಕು ಸೇನಾಪಡೆ ಉಪಗ್ರಹ

ಮಾಸ್ಕೋ, ಜುಲೈ 11 (ಸ್ಫುಟ್ನಿಕ್) ರಷ್ಯಾ ರಕ್ಷಣಾ ಸಚಿವಾಲಯ ಉಡಾವಣೆ ಮಾಡಿರುವ ನಾಲ್ಕು ಉಪಗ್ರಹಗಳು ನಿಗದಿತ ಕಕ್ಷೆ ಸೇರಿವೆ ಎಂದು ಗುರುವಾರ ಸಚಿವಾಲಯ ತಿಳಿಸಿದೆ.

ಬುಧವಾರ ಜಿಎಮ್‌ಟಿ 17.14 ಕ್ಕೆ ಉಡಾವಣೆ ಮಾಡಲಾಗಿದ್ದು ಪ್ಲೆಸೆಟ್ಸ್ಕ್ ನಿಂದ ಸೋಯುಜ್ – 2 ವಾಹಕದ ಮೂಲಕ ನಡೆದ ಎರಡನೇ ಉಡಾವಣೆ ಇದಾಗಿದೆ.

ಸೋಯುಜ್ – 2 ಉಪಗ್ರಹ ವಾಹಕ ಜುಲೈ 10 ರಂದು ಮಾಸ್ಕೋ ಕಾಲಮಾನ 8.14 ಕ್ಕೆ ನಭಕ್ಕೆ ಚಿಮ್ಮಿದ್ದು ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಯುಎನ್ಐ ಜಿಎಸ್ಆರ್ ಆರ್ ಕೆ 0829