Sunday, Mar 29 2020 | Time 00:31 Hrs(IST)
Entertainment Share

ಕನ್ನಡ ಚಿತ್ರಗಳು ವಿದೇಶಿಗರು ಹುಬ್ಬೇರಿಸುವಂತಿರಲಿ: ಗಿರೀಶ್ ಕಾಸರವಳ್ಳಿ

ಬೆಂಗಳೂರು, ಫೆ 27 (ಯುಎನ್‍ಐ) ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈ ಬಾರಿ ಹಲವು ವಿಶೇಷತೆಗಳಿಗೆ ವೇದಿಕೆಯಾಗಿದ್ದು, ಅವುಗಳಲ್ಲಿ ನಿರ್ದೇಶಕರ ಫಿಲಂ ಬಜಾರ್ ಗುರುವಾರ ಉದ್ಘಾಟನೆಗೊಂಡಿದೆ

ಫಿಲಂ ಬಜಾರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಖ್ಯಾತ ನಿರ್ಮಾಪಕ, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಶಾಸಕ ಕುಮಾರ್ ಬಂಗಾರಪ್ಪ ನಿರ್ದೇಶಕ ಸಾಯಿಪ್ರಕಾಶ್, ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್. ನಟ ಆದಿತ್ಯ, ಮುರಳೀಧರ ಹಾಲಪ್ಪ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್, ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆ ವೇದಿಕೆ ಇದಾಗಿದ್ದು, ಕನ್ನಡ ಚಿತ್ರಗಳನ್ನು ವಿಶ್ವವ್ಯಾಪಿ ಹರಡಿಸಲು ಸಾಧ್ಯವಾಗಲಿದೆ

ಫಿಲ್ಮ್ ಬಜಾರ್ ಉದ್ಘಾಟನೆ ಬಳಿಕ ಮಾತನಾಡಿದ ಗಿರೀಶ್ ಕಾಸರವಳ್ಳಿ, ಕನ್ನಡ ಚಿತ್ರಗಳನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು, ವಾರಕ್ಕೆ ಹತ್ತು ಹನ್ನೆರಡು ಚಿತ್ರಗಳನ್ನು ಸ್ಪರ್ಧೆಯ ಮೇಲೆ ಒಂದೇ ದಿನ ಬಿಡುಗಡೆ ಮಾಡಬಾರದು. ವೀದೆಶಿಗರು ಕನ್ನಡ ಚಿತ್ರರಂಗವನ್ನು, ಕನ್ನಡ ಚಿತ್ರಗಳ ಗುಣಮಟ್ಟವನ್ನು ಕಂಡು ಹುಬ್ಬೇರಿಸಬೇಕೇ ವಿನಃ ಹೀಗಳೆಯುವಂತಿರಬಾರದು ಎಂದು ಸಲಹೆ ನೀಡಿದರು.

ಯುಎನ್‍ಐ ಎಸ್‍ಎ ವಿಎನ್ 2005