Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National Share

ಕರ್ತಾಪುರ ಕಾರಿಡಾರ್‌ನ ಮೂಲಸೌಕರ್ಯ ಶೀಘ್ರ ಪೂರ್ಣ: ಭಾರತ ವಿಶ್ವಾಸ

ನವದೆಹಲಿ, ಜು 11 (ಯುಎನ್ಐ) ಕರ್ತಾಪುರ ಕಾರಿಡಾರ್‌ನ ಮೂಲಸೌಕರ್ಯಗಳು ಆದಷ್ಟು ಬೇಗ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಭಾರತ ಹೇಳಿದೆ.
ಕರ್ತಾರ್‌ಪುರ ಕಾರಿಡಾರ್ ಯೋಜನೆಗೆ ಸಂಬಂಧಿಸಿ ಎರಡು ಪ್ರಮುಖ ಅಂಶಗಳಾದ ಪ್ರಯಾಣಿಕರ ಟರ್ಮಿನಲ್ ಮತ್ತು ಕರ್ತಾರ್‌ಪುರದ ಶೂನ್ಯ ಬಿಂದುವನ್ನು ಸಂಪರ್ಕಿಸಲಿರುವ ನಾಲ್ಕು ಪಥದ ಹೆದ್ದಾರಿ ಕೂಡ ಮೂಲಸೌಕರ್ಯದಲ್ಲಿ ಸೇರಿದೆ.
ಈ ಎರಡು ಯೋಜನೆಗಳ ಕಾರ್ಯಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ, ಒಂದು ಸೆಪ್ಟೆಂಬರ್ 2019 ರ ವೇಳೆಗೆ ಮತ್ತು ಇನ್ನೊಂದನ್ನು 2019 ರ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಆದ್ದರಿಂದ ನಾವು ವಿಷಯದಲ್ಲಿ ನಿಧಾನವಾಗಿದ್ದೇವೆ ಎಂದು ಹೇಳುವ ವರದಿಗಳು ಸತ್ಯಕ್ಕೆ ದೂರವಾದುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೊದಲೇ ನಿರ್ಧಾರವಾದಂತೆ, ಕರ್ತಾರ್‌ಪುರ ಕಾರಿಡಾರ್‌ನ ಮಾದರಿ ಮತ್ತು ಸಂಬಂಧಿತ ತಾಂತ್ರಿಕ ವಿಷಯಗಳ ಬಗ್ಗೆ ಅಂತಿಮಗೊಳಿಸುವ ಕರಡು ಒಪ್ಪಂದದ ಕುರಿತು ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಜುಲೈ 14 ರಂದು ವಾಘಾ ಗಡಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಈ ಕಾರಿಡಾರ್ ಪಾಕಿಸ್ತಾನದ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಅನ್ನು ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದೊಂದಿಗೆ ಸಂಪರ್ಕಿಸುತ್ತದೆ. ಭಾರತದಿಂದ ಸಿಖ್ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.
ಯುಎನ್ಐ ಎಎಚ್ 1822