Sunday, Aug 18 2019 | Time 04:35 Hrs(IST)
Karnataka Share

ಕರಾವಳಿ, ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲ

ಬೆಂಗಳೂರು, ಜುಲೈ 17 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಪ್ರದೇಶದ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಕುಕನೂರು ಹಾಗೂ ನಾರಾಯಣಪುರದಲ್ಲಿ ಅತಿ ಹೆಚ್ಚು ಅಂದರೆ ತಲಾ 9 ಸೆ.ಮೀ ಮಳೆಯಾಗಿದೆ.
ಉಳಿದಂತೆ, ತಾಳಿಕೋಟೆ 8, ಕುಂದಾಪುರ 6, ಕೋಟಾ, ಭಟ್ಕಳ, ಶಿರಾಳಿ, ಕೊಪ್ಪಳ, ಕೆ.ಆರ್. ಪೇಟೆ, ಕೂಡ್ಲಿಗಿಯಲ್ಲಿ ತಲಾ 5, ಡಿಯೋದರ್ಗ್ ತಲಾ 4, ಮೂಡುಬಿದಿರೆ, ಸಿದ್ದಾಪುರ, ಮಂಕಿ, ಕ್ಯಾಸ್ಟಲ್ ರಾಕ್, ತಾವರೆಕೆರೆ, ಕೆರೂರು, ನೆಲೋಗಿ, ಲಿಂಗಸುಗೂರು, ಮಸ್ಕಿ, ಆಗುಂಬೆ, ಶ್ರವಣಬೆಳಗೊಳದಲ್ಲಿ ತಲಾ 3, ಪಣಂಬೂರು, ಸುಬ್ರಹ್ಮಣ್ಯ, ಹೊನ್ನಾವರ, ಕೆಂಬಾವಿ, ಮುದಗಲ್, ಸಿಂಧನೂರು, ಬಾಲಗನೂರು, ಬಸರಾಳು, ಸಿರಗುಪ್ಪ, ಎಚ್.ಬಿ.ಹಳ್ಳಿ ಹಾಗೂ ದಾವಣಗೆರೆಯಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಗುರುವಾರ ಮುಂಜಾನೆಯವರೆಗೆ ಕರಾವಳಿ ಹಾಗೂ ಒಳನಾಡು ಪ್ರದೇಶದ ಹಲವಡೆ ವರ್ಷಧಾರೆಯಾಗುವ ಸಾಧ್ಯತೆಯಿದೆ. ಸಮುದ್ರ ತಟದಲ್ಲಿ ಅಲೆಗಳ ಗಾತ್ರ ಹೆಚ್ಚಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 29 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಬಹುದಾಗಿದೆ.
ಯುಎನ್ಐ ಎಸ್ಎಚ್ ಎಸ್ಎ 1701