Wednesday, May 27 2020 | Time 02:40 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Parliament Share

ಕಳೆದ 3 ವರ್ಷಗಳಲ್ಲಿ ನಿರ್ಭಯಾ ನಿಧಿಯಡಿ 59 ಪ್ರಸ್ತಾವನೆ ಸ್ವೀಕಾರ: ಸ್ಮೃತಿ ಇರಾನಿ

ನವದೆಹಲಿ, ಜುಲೈ 11 (ಯುಎನ್‌ಐ) ಕಳೆದ 3 ವರ್ಷಗಳಲ್ಲಿ ನಿರ್ಭಯಾ ನಿಧಿಯಡಿ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಆಡಳಿತಗಳಿಂದ ಸರ್ಕಾರ ಒಟ್ಟು 59 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಸದನಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು, 'ಕಳೆದ 3 ವರ್ಷಗಳಲ್ಲಿ 2016-17, 2017-18 ಮತ್ತು 2018-19 ರ ಅವಧಿಯಲ್ಲಿ ನಿರ್ಭಯಾ ನಿಧಿಯಡಿ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಆಡಳಿತಗಳಿಂದ ಸರ್ಕಾರ ಒಟ್ಟು 59 ಪ್ರಸ್ತಾವನೆಗಳನ್ನು ಸರ್ಕಾರ ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ, 30 ಯೋಜನೆಗಳು / ಕಾರ್ಯಕ್ರಮಗಳನ್ನು ನಿರ್ಭಯಾ ನಿಧಿಯಡಿ ಅನುದಾನಕ್ಕಾಗಿ ಅಧಿಕಾರಿಗಳ ಉನ್ನತ ಸಮಿತಿ ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದ್ದಾರೆ.

ಮಹಿಳಾ ಸುರಕ್ಷತೆಗೆ ಸಂಬಂಧಿಸಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ನಿರ್ಭಯಾ ನಿಧಿಯಡಿ ಕೇಂದ್ರ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ 4 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಅತ್ಯಾಚಾರ ಮತ್ತು ಆಸಿಡ್‌ ದಾಳಿ ಸಂತ್ರಸ್ತರಿಗೆ ಹಣಕಾಸು ನೆರವು ನೀಡುವುದು, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಪೊಲೀಸ್ ಘಟಕಗಳನ್ನು ಸ್ಥಾಪಿಸಲು ಈ ಹಣವನ್ನು ಬಳಸಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ಸೌಲಭ್ಯ ಪಡೆದ ನಗರಗಳ ಪೈಕಿ ದೆಹಲಿ, ಕೊಲ್ಕತ್ತ, ಮುಂಬೈ, ಚೆನ್ನೈ, ಹೈದರಾಬಾದ್‌, ಬೆಂಗಳೂರು, ಅಹ್ಮದಾಬಾದ್‌ ಮತ್ತು ಲಖನೌ ಸೇರಿವೆ ಎಂದು ಸರ್ಕಾರ ಹೇಳಿತ್ತು.

2012ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಯುವತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಈ ನಿಧಿಗೆ ‘ನಿರ್ಭಯಾ ನಿಧಿ’ ಎಂದು ಹೆಸರಿಡಲಾಗಿದೆ.
ಯುಎನ್‌ಐ ಎಸ್ಎಲ್‌ಎಸ್‌ ಎಎಚ್‌ 1658
There is no row at position 0.