Sunday, Jan 26 2020 | Time 23:06 Hrs(IST)
 • ‘ಪದ್ಮ ‘ ಪ್ರಶಸ್ತಿ ಪುರಸ್ಕೃತರಿಗೆ ನಳಿನ್‍ ಕುಮಾರ್ ಕಟೀಲ್‍ ಅಭಿನಂದನೆ
 • ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆೆ ರೈಲ್ವೇಸ್ ಸವಾಲು
 • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೀಗರಾಗಲಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ
 • ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಮೋದಿ
 • ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ : ಪ್ರಧಾನಿ ಮೋದಿ
 • ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ: ಕುಮಾರಸ್ವಾಮಿ ತಿರುಗೇಟು
 • ಸಂವಿಧಾನ ಅಪಾಯದ ಅಂಚಿನಲ್ಲಿದೆ : ಡಾ ಜಿ ಪರಮೇಶ್ವರ
 • ಕರೋನಾ ವೈರಸ್‌ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಾರ್ಯವ್ಯವಸ್ಥೆ
 • ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
 • 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಎಸ್‍ ಎಲ್‍ ಭೈರಪ್ಪ ಆಯ್ಕೆ
 • ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
 • ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ ಬೌಲಿಂಗ್ ವಿಭಾಗವನ್ನು ಕೊಂಡಾಡಿದ ಕೊಹ್ಲಿ
 • ಗಣರಾಜ್ಯೋತ್ಸವದಂದು ಪ್ರಧಾನಿಗೆ ಸಂವಿಧಾನದ ಪ್ರತಿ ರವಾನಿಸಿದ ಕಾಂಗ್ರೆಸ್
 • ಮತ್ತೆ ಸಿಡಿದ ಕನ್ನಡಿಗ ರಾಹುಲ್ : ನ್ಯೂಜಿಲೆಂಡ್ ಎದುರು ಭಾರತಕ್ಕೆ ಎರಡನೇ ಜಯ
 • 100 ಪದವಿ ಪೂರ್ವ ವಸತಿ ಕಾಲೇಜುಗಳ‌ ಸ್ಥಾಪನೆ: ಗೋವಿಂದ ‌ಕಾರಜೋಳ
Parliament Share

ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ.45ರಷ್ಟು ಏರಿಕೆ

ನವದೆಹಲಿ, ಜುಲೈ 22 (ಯುಎನ್‌ಐ) ಭಾರತೀಯ ಅಥವಾ ವಿದೇಶಿ ಹಡಗುಗಳಲ್ಲಿ ಕೆಲಸ ಮಾಡುವ ಭಾರತೀಯ ಸಮುದ್ರಯಾನ ಸಿಬ್ಬಂದಿಯ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಶೇ 45 ರಷ್ಟು ವೃದ್ಧಿಯಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ಸೋಮವಾರ ತಿಳಿಸಿದೆ.
ಸಿಬ್ಬಂದಿ ಸಂಖ್ಯೆ 2016 ರಲ್ಲಿ 1,43,940 ರಿಂದ 2018 ರಲ್ಲಿ 2,08,799 ಕ್ಕೆ ಏರಿದೆ ಎಂದು ಹಡಗು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್‍ಸುಖ್‍ ಮಾಂಡವಿಯಾ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತೀಯ ಸಮುದ್ರಯಾನ ಸಿಬ್ಬಂದಿಯ ಪ್ರಮಾಣವನ್ನು ಹೆಚ್ಚಳಕ್ಕೆ ಸಹಾಯ ಮಾಡಲು ಸರ್ಕಾರ ಹಲವಾರು ಉಪಕ್ರಮಗಳು ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ, ನೌಕಾ ಸಿಬ್ಬಂದಿಯನ್ನು ಸುರಕ್ಷಿತ ಮಾರ್ಗಗಳ ಮೂಲಕ ಹಡಗುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಂದರೆ ನೋಂದಾಯಿತ ಸಂಸ್ಥೆಗಳ ಮೂಲಕವೇ ನಿಯಮಗಳ ಮೂಲಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು ಎಂದು ಸಚಿವರು ಹೇಳಿದರು.
ಕಡಲ ಕಾರ್ಮಿಕರ ನಿರ್ಣಯ, 2006ಕ್ಕೆ ಅನುಗುಣವಾಗಿ ರೂಪಿಸಲಾದ ಸಂಬಂಧಿತ ನಿಯಮಗಳ ಮೂಲಕ ಭಾರತೀಯ ನೌಕಾ ಸಿಬ್ಬಂದಿಯ ಉದ್ಯೋಗ ಮತ್ತು ಕಲ್ಯಾಣವನ್ನು ನಿಯಂತ್ರಿಸುವುದರೊಂದಿಗೆ, ಹೆಚ್ಚು ಹೆಚ್ಚು ವಿದೇಶಿ ಹಡಗು ಮಾಲೀಕರು ತಮ್ಮ ಹಡಗುಗಳಲ್ಲಿ ಭಾರತೀಯ ನೌಕಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾಗರ ವಲಯದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಹಡಗುಗಳಲ್ಲೇ ತರಬೇತಿ ಅವಕಾಶಗಳನ್ನು ಹೆಚ್ಚಿಸುವುದು, ಪರೀಕ್ಷೆ ಮತ್ತು ಧೃಡೀಕರಣ ವ್ಯವಸ್ಥೆಯನ್ನು ಸುಧಾರಿಸುವುದು ಸೇರಿವೆ ಎಂದು ಅವರು ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್