Sunday, Aug 18 2019 | Time 04:38 Hrs(IST)
Karnataka Share

ಕಳ್ಳನನ್ನು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ ಸ್ಥಳೀಯರು

ಯಾದಗಿರಿ, ಜುಲೈ 17 (ಯುಎನ್ಐ) ಮನೆಯೊಂದರಲ್ಲಿ ಕಳ್ಳತನ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಳ್ಳನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಅಜೀಜ್ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ.
ಮರೆಪ್ಪ ಎಂಬಾತ ಬಂಧಿತ ಕಳ್ಳ. ಕುಟುಂಬ ಸದಸ್ಯರೆಲ್ಲ ಮನೆಯಲ್ಲಿರುವಾಗಲೇ ಆತ ಕಳ್ಳತನದಲ್ಲಿ ತೊಡಗಿದ್ದ. ಇದನ್ನು ಕಂಡ ಕುಟುಂಬಸ್ಥರು ತಕ್ಷಣ ಕೋಣೆಗೆ ಬೀಗ ಹಾಕಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಆಕ್ರೋಶಗೊಂಡ ಸ‍್ಥಳೀಯರು ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ನಗರ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಯುಎನ್ಐ ಪಿಕೆ ಜಿಎಸ್ಆರ್ 10:22