Friday, Feb 28 2020 | Time 08:40 Hrs(IST)
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಕವಿ, ತತ್ವಜ್ಞಾನಿ ತಿರುವಳ್ಳುವರ್ ಜಯಂತಿ; ಪ್ರಧಾನಿ, ಉಪರಾಷ್ಟ್ರಪತಿ ಗೌರವ ನಮನ

ನವದೆಹಲಿ, ಜ.16 (ಯುಎನ್ಐ) ತಮಿಳಿನ ಖ್ಯಾತ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅವರಿಗೆ ಗೌರವ ಸಲ್ಲಿಸಿದರು.
''ಮಹಾನ್ ತತ್ವಜ್ಞಾನಿ ತಿರುವಳ್ಳುವರ್ ಅವರಿಗೆ ಜನ್ಮದಿನದ ಅಂಗವಾಗಿ ನಮಸ್ಕರಿಸುತ್ತೇನೆ. ಅವರ ಉದಾತ್ತ ಚಿಂತನೆಗಳು ಮತ್ತು ಸಾಹಿತ್ಯ ಕೃತಿಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತವೆ. ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಸಹಾನುಭೂತಿಯತ್ತ ಕೆಲಸ ಮಾಡಲು ಅವರು ನಮಗೆ ಸ್ಫೂರ್ತಿ ನೀಡುತ್ತಾರೆ ' ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ವಳ್ಳುವರ್ ಎಂದು ಕರೆಯಲ್ಪಡುವ ತಿರುವಳ್ಳುವರ್ ಅವರು ನೈತಿಕತೆ, ರಾಜಕೀಯ ಮತ್ತು ಆರ್ಥಿಕ ವಿಷಯಗಳು ಮತ್ತು ಪ್ರೀತಿಯ ಕುರಿತು ಬರೆದಿರುವ ಸಂಗ್ರಹ ತಿರುಕ್ಕುರಲ್‌ ಎಂಬ ಹೆಸರಿನಿಂದ ಜನಪ್ರಿಯವಾಗಿದೆ.
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕೂಡ ತಮಿಳು ಮಹಾನ್ ಕವಿಯನ್ನು ಸ್ಮರಿಸಿದ್ದಾರೆ. ಅವರ ಕೃತಿಗಳನ್ನು, ನೈತಿಕತೆ, ಮೌಲ್ಯಗಳು ಮತ್ತು ಉದಾತ್ತ ಚಿಂನೆಗಳ ಕುರಿತಾದ ತಮಿಳು ಸಾಹಿತ್ಯದ ಶ್ರೇಷ್ಠ ಕೃತಿಗಳು ಎಂದು ಪರಿಗಣಿಸಲ್ಪಟ್ಟಿವೆ. ಆಡಳಿತ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿರುವ ಈ ಗ್ರಂಥವು ಎಲ್ಲ ಸಮಯದಲ್ಲೂ ಪ್ರಸ್ತುತವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಯುಎನ್ಐ ಎಎಚ್ 1630