Friday, Dec 6 2019 | Time 01:31 Hrs(IST)
Special Share

ಕುಖ್ಯಾತ ಮಾವೋವಾದಿ ಕುಂದನ್ ಪಹನ್‌ಗೆ ಜೈಲಿನಿಂದಲೇ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಎನ್‌ಐಎ

ರಾಂಚಿ, ನವೆಂಬರ್ 11 (ಯುಎನ್ಐ) ಮಾಜಿ ಸಚಿವ ರಮೇಶ್ ಸಿಂಗ್ ಮುಂಡಾ ಅವರ ಹತ್ಯೆ ಸೇರಿದಂತೆ 120 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ಮಾವೋವಾದಿ ಕುಂದನ್ ಪಹಾನ್ ಎಂಬಾತನಿಗೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಕುಂದನ್ ಪಹಾನ್ ಪರ ವಕೀಲರು ತಾಮರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಕೋರಿ ಎನ್ಐಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಎನ್‌ಐಎ ನ್ಯಾಯಾಧೀಶ ನವನೀತ್ ಕುಮಾರ್ ಅವರು ಆರೋಪಿ ಪಹಾನ್‌ ಗೆ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಪ್ರಸ್ತುತ ಹಜಾರಿಬಾಗ್ ಜೈಲಿನಲ್ಲಿರುವ ಕುಂದನ್ ಪಹಾನ್ ಚುನಾವಣೆಯಲ್ಲಿ ಪ್ರಸ್ತುತ ಜೈಲಿನಲ್ಲಿರುವ ರಾಜ ಪೀಟರ್ ಎಂಬಾತನ ವಿರುದ್ಧ ತಾಮರ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ.
ತಾಮರ್ ಕ್ಷೇತ್ರದ ಶಾಸಕ ರಮೇಶ್ ಸಿಂಗ್ ಮುಂಡಾ ಅವರನ್ನು ಆಗಸ್ಟ್ 9, 2017 ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಕ್ರಿಶನ್ ಪತಾರ್ ಅಲಿಯಾಸ್ ರಾಜಾ ಪೀಟರ್ ಜೈಲಿನಲ್ಲಿದ್ದಾನೆ. ಹಾಲಿ ಶಾಸಕ ವಿಕಾಸ್ ಸಿಂಗ್ ಮುಂಡಾ ಮತ್ತು ಪ್ರಕಾಶ್ ಚಂದ್ರ ಒರಾನ್ ಕೂಡ ಕಣದಲ್ಲಿರುವ ಇತರ ಇಬ್ಬರು ನಾಯಕರಾಗಿದ್ದಾರೆ.
ಕುಂದನ್ ಪಹಾನ್ ಮೇ 14, 2017 ರಂದು ರಾಜ್ಯ ಪೊಲೀಸರ ಮುಂದೆ ಶರಣಾಗಿದ್ದ. ಸಂಸದ ಸುನೀಲ್ ಮಹತೋ, ಮಾಜಿ ಸಚಿವ ಮತ್ತು ಶಾಸಕ ರಮೇಶ್ ಸಿಂಗ್ ಮುಂಡಾ, ಬುಂದು ಡಿಎಸ್ಪಿ ಪ್ರಮೋದ್ ಕುಮಾರ್ ಮತ್ತು ಇತರ ಐವರು ಪೊಲೀಸರು ಮತ್ತು ವಿಶೇಷ ಘಟಕದ ಇನ್ಸ್‌ಪೆಕ್ಟರ್ ಫ್ರಾನ್ಸಿಸ್ ಇಂಡೆವಾರ್ ಅವರ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.
ಮೇ 21, 2008 ರಂದು ರಾಂಚಿ-ಟಾಟಾ ರಸ್ತೆಯಲ್ಲಿ ಖಾಸಗಿ ಬ್ಯಾಂಕಿನ ನಗದು ಸಾಗಿಸುತ್ತಿದ್ದ ವ್ಯಾನ್‌ನಿಂದ 5 ಕೋಟಿ ರೂ. ಮತ್ತು ಒಂದು ಕಿಲೋಗ್ರಾಂ ಚಿನ್ನವನ್ನು ಲೂಟಿ ಮಾಡಿದ ಘಟನೆ ನಡೆದಾಗ ಪಹಾನ್ ಹೆಸರು ಜಗತ್ತಿಗೆ ಅರಿವಾಯಿತು. ಕುಂತಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈತನ ವಿರುದ್ಧ 50 ಪ್ರಕರಣಗಳು ದಾಖಲಾಗಿವೆ. ರಾಂಚಿಯಲ್ಲಿ 42, ಚೈಬಾಸಾದಲ್ಲಿ 27, ಸರೈಕೆಲಾದಲ್ಲಿ 7 ಮತ್ತು ಗುಮ್ಲಾದಲ್ಲಿ ಒಂದು ಪ್ರಕರಣ ಈತನ ವಿರುದ್ಧ ದಾಖಲಾಗಿವೆ.
ಯುಎನ್ಐ ಎಎಚ್ 2110
More News
ಜಯಲಲಿತಾ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

ಜಯಲಲಿತಾ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

05 Dec 2019 | 9:29 PM

ಚೆನ್ನೈ, ಡಿ ೦೫ (ಯುಎನ್‌ಐ) ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಮೂರನೇ ವರ್ಷದ ಪುಣ್ಯತಿಥಿಯನ್ನು ಗುರುವಾರ ಆಚರಿಸಲಾಗಿದೆ

 Sharesee more..
ಈರುಳ್ಳಿ ಬೆಲೆ ಏರಿಕೆ ವಿರುದ್ದ  ಕಾಂಗ್ರೆಸ್ ಸಂಸದರ ಪ್ರತಿಭಟನೆಯಲ್ಲಿ  ಪಾಲ್ಗೊಂಡ  ಪಿ ಚಿದಂಬರಂ

ಈರುಳ್ಳಿ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಸಂಸದರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿ ಚಿದಂಬರಂ

05 Dec 2019 | 9:22 PM

ನವದೆಹಲಿ, ಡಿ 5(ಯುಎನ್ಐ)- ದೇಶದಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಗಗನ ಮುಖಿಯಾಗಿರುವುದನ್ನು ಪ್ರತಿಭಟಿಸಿ ಸಂಸತ್ ಭವನದ ಆವರಣದಲ್ಲಿ ಗುರುವಾರ ಬೆಳಗ್ಗೆ ಅಧೀರ್ ರಂಜನ್ ಚೌಧರಿ, ಅಮರ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ, ರಾಜ್ಯಸಭಾ ಸದಸ್ಯ ಪಿ.

 Sharesee more..