Wednesday, Aug 21 2019 | Time 23:57 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
business economy Share

ಕೈಗೆಟುಕುವ ದರದಲ್ಲಿದ್ದಾಗಲೇ ಭೂಮಿಯ ಮೇಲೆ ಬಂಡವಾಳ ಹೂಡಿ

ಬೆಂಗಳೂರು, ಜುಲೈ 21 (ಯುಎನ್ಐ) ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಮುನ್ನ ಬೆಂಗಳೂರಿನ ಮೂಲೆಯಲ್ಲಿ ಸಣ್ಣ ಉಪನಗರವಾಗಿದ್ದ ಯಲಹಂಕ ಇಂದು ನಗರದ ಹೃದಯ ಭಾಗಕ್ಕೆ ಸೇರ್ಪಡೆಯಾಗಿದೆ.

ಭೂಮಿ ಹಾಗೂ ನಿವೇಶನದ ಮೇಲೆ ಬಂಡವಾಳ ಹೂಡಲು ಇಚ್ಛಿಸುವವರಿಗೆ ಹೇಳಿ ಮಾಡಿಸಿದ ಜಾಗವಾಗಿದ್ದು ಕೈಗೆಟುಕುವ ದರದಲ್ಲಿದ್ದಾಗಲೇ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಲಾಭ ಗಳಿಸಬಹು ಎಂದು ರಿಯಲ್ ಎಸ್ಟೇಟ್ ತಜ್ಞರು ಹೂಡಿಕೆದಾರರಿಗೆ ಸಲಹೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಪತ್ತೆಯಾದ ಪುರಾತನ ಕಲ್ಲಿನ ಫಲಕಗಳಲ್ಲಿ ಕೂಡ ಯಲಹಂಕ ನಗರದ ಉಲ್ಲೇಖವಿರುವುದು ತಿಳಿದುಬಂದಿದೆ. ದಿನದಿಂದ ದಿನಕ್ಕೆ ಪ್ರಾಮುಖ್ಯತೆ ಪಡೆಯುತ್ತಿರುವ ಈ ನಗರ ಭವಿಷ್ಯದಲ್ಲಿ ಮತ್ತಷ್ಟು ವಿಕಸನಗೊಳ್ಳಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವೈಷ್ಣವಿ ಗ್ರೂಪ್ ನ ನಿರ್ದೇಶಕ ಶ್ರೀ ದರ್ಶನ್ ಗೋವಿಂದರಾಜು ಈ ಬಾಗದ ಬೆಳವಣಿಗೆ ಕುರಿತು ಮಾತನಾಡಿ “ಕೆಂಗೇರಿ ಉಪನಗರದಂತೆಯೇ ಯಲಹಂಕ ಸಹ ಹೊಸ ಮತ್ತು ಹಳೆಯ ಪಟ್ಟಣದ ಲಕ್ಷಣಗಳನ್ನು ಒಳಗೊಂಡು ಉಪಗ್ರಹ ಪಟ್ಟಣವಾಗಿ ಬೆಳೆಯಬೇಕೆಂದು ನಾವು ಬಯಸಿದ್ದೆವು. ಆದರೆ ಇದು ಸಾಧ್ಯವಾಗಲಿಲ್ಲ. ಆದರೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರ ವ್ಯಾಪ್ತಿಗೆ ಸೇರಿರುವುದರಿಂದ ಈ ಭಾಗ ಮತ್ತಷ್ಟು ಪ್ರಗತಿ ಹೊಂದಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣವಾಗಿ ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದಾಗ, ವಸ್ತುಗಳ ಬೆಲೆಗಳು ಇದ್ದಕ್ಕಿದ್ದಂತೆ ಗಗನಕ್ಕೇರಿದ್ದವು. ಆದರೆ ಇಂದು ಹಲವಾರು ಬದಲಾವಣೆಯೊಂದಿಗೆ ಮಾರುಕಟ್ಟೆಯ ದರ ಕಾಯ್ದುಕೊಂಡಿದೆ. ವಿಮಾನ ನಿಲ್ದಾಣದ ಎಕ್ಸ್ ಪ್ರೆಸ್ ಹೆದ್ದಾರಿಯಿಂದಾಗಿ ಬೆಂಗಳೂರು ಕೇಂದ್ರವನ್ನು ಮತ್ತಷ್ಟು ಸಮೀಪಕ್ಕೆ ತಂದಿದೆ.
ಯಲಹಂಕಾದ ಸುತ್ತಲಿನ ವಸತಿ, ವಾಣಿಜ್ಯ ಮತ್ತು ಸಣ್ಣ ಜಾಗದ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ.
ಕೆಐಎಎಲ್ ವಿಮಾನ ನಿಲ್ದಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಯಲಹಂಕ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎಕ್ಸ್ ಪ್ರೆಸ್ ಹೆದ್ದಾರಿಯಿಂದಾಗಿ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಿದೆ.

ದೇವನಹಳ್ಳಿಯಲ್ಲಿನ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ (ಏರೋಸ್ಪೇಸ್ ಸೆಝ್) ನಿಂದಾಗಿ ವಾಣಿಜ್ಯ ಸ್ಥಳಾವಕಾಶದ ಅಭಿವೃದ್ಧಿ ಇತ್ತೀಚೆಗೆ ಹೆಚ್ಚುತ್ತಿದೆ. ಬೃಹತ್ ಏರೋಸ್ಪೇಸ್ ಉತ್ಪಾದನಾ ಘಟಕವನ್ನು ನಿರ್ಮಿಸಲು 143 ಕೋಟಿ ಡಾಲರ್ ಹೂಡಿಕೆ ಮಾಡಿದೆ.

ಹೀಗಾಗಿ, ಆಸ್ತಿಯ ಮೇಲಿನ ಹೂಡಿಕೆಗೆ ಇದೀಗ ಅತ್ಯುತ್ತಮ ಅವಕಾಶವಿದೆ. ಅದೂ ಸೂಕ್ತ ದರದೊಂದಿಗೆ
ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು, ಪ್ರಖ್ಯಾತ ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಇತರ ಸಾಮಾಜಿಕ ಮೂಲ ಸೌಕರ್ಯಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಈ ಪ್ರದೇಶದಲ್ಲಿ ಅದರಲ್ಲೂ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಕೈಗೆಟಕುವ ದರದ, ಮಧ್ಯಮ ದರದ ಹಾಗೂ ಐಷಾರಾಮಿ ದರದ ವಿಭಾಗಗಳ ವಸತಿ ಸಮುಚ್ಚಯಗಳು ಸಮಾನವಾಗಿ ಅಭಿವೃದ್ಧಿ ಹೊಂದುತ್ತಿವೆ.

“ಈಗಿನ ಬೆಳವಣಿಗೆಯನ್ನು ನೋಡಿದರೆ ಭವಿಷ್ಯದಲ್ಲಿ ಹೈಸ್ಪೀಡ್ ರೇಲ್ ಲಿಂಕ್, ಮೆಟ್ರೊ ಲೈನ್ ಮತ್ತು ರಿಂಗ್ ರಸ್ತೆಗಳಂತಹ ಮೂಲ ಸೌಕರ್ಯದ ಅಭಿವೃದ್ಧಿಗಳು ಹೆಚ್ಚು ಉತ್ತೇಜನಗೊಳ್ಳುತ್ತವೆ ಎನ್ನುತ್ತಾರೆ ದರ್ಶನ್. ಹೆಚ್ಚುವರಿಯಾಗಿ ಯಲಹಂಕವನ್ನು ಸಂಪರ್ಕಿಸುವ ದೇವನಹಳ್ಳಿ- ಯಶವಂತಪುರ ಕಮ್ಯೂಟರ್ ರೈಲ್ ಸಿಸ್ಟಮ್ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಎನ್ ಎಚ್ -7 ವಿಸ್ತರಣೆ ಯಲಹಂಕಾದಲ್ಲಿ ಪ್ರಸ್ತಾಪಿಸಲಾದ ಇಂಟರ್ ಮೋರ್ಡಾಲ್ ಟ್ರಾನ್ಸಿಟ್ ಹಬ್ ಮತ್ತಷ್ಟು ಲಾಭ ತರಲಿದೆ” ಎನ್ನುವುದು ಅವರ ವಾದ.

ಈ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಯಲಹಂಕವು ದೊಡ್ಡ ಹೂಡಿಕೆಗೆ ಅವಕಾಶ ನೀಡಲಿದೆ. ಸ್ವಲ್ಪವೇ ದೂರದಲ್ಲಿ ಉತ್ತಮ ಸೌಕರ್ಯಗಳು ದೊರೆಯುವಂತೆ ಮಾಡುವುದು ಅತಿ ಸೂಕ್ತ ಕ್ರಮವಾಗಿದೆ. ಸಹಜವಾಗಿ, ಆ ಪ್ರದೇಶದಲ್ಲಿನ ಆಸ್ತಿ ಇನ್ನೂ ಕೈಗೆಟುಕುವ ದರದ ವ್ಯಾಪ್ತಿಯಲ್ಲಿದೆ ಎಂಬುದು ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ.

ದರ್ಶನ್ ಅವರು ಹೇಳುವಂತೆ "ಇಲ್ಲಿ ಒಂದು ಮನೆಗೆ ಹೂಡಿಕೆ ಮಾಡುವ ವ್ಯಕ್ತಿಯು ಮುಂದಿನ 2 ರಿಂದ 3 ವರ್ಷಗಳಲ್ಲಿ ಉತ್ತಮ ಲಾಭ ಪಡೆಯುತ್ತಾನೆ. ಅಂದಾಜಿನ ಪ್ರಕಾರ ಮುಂದಿನ 3 ರಿಂದ 4 ವರ್ಷಗಳಲ್ಲಿ ಈ ವ್ಯಕ್ತಿಯ ಪಡೆಯುವ ಲಾಭದ ಪ್ರಮಾಣ ಶೇ. 25ಕ್ಕೆ ಏರಿಕೆಯಾಗಲಿದೆ.
ಯುಎನ್ಐ ಡಿಸಿ ವಿಎನ್ 1617