Wednesday, Feb 26 2020 | Time 08:44 Hrs(IST)
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಕಾಂಗ್ರೆಸ್ ಪಕ್ಷ ‘ಮುಸ್ಲಿಂ ಲೀಗ್ ಕಾಂಗ್ರೆಸ್‍’ ಎಂದು ಮರು ನಾಮಕರಣಗೊಳ್ಳಲಿ : ಬಿಜೆಪಿ

ನವದೆಹಲಿ, ಜ 22 (ಯುಎನ್‍ಐ) ನಿರಂತರವಾಗಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ‘ಮುಸ್ಲಿಂ ಲೀಗ್ ಕಾಂಗ್ರೆಸ್‍’ ಎಂದು ಮರುನಾಮಕರಣಗೊಳ್ಳುವುದು ಸೂಕ್ತ ಎಂದು ಭಾರತೀಯ ಜನತಾ ಪಕ್ಷ ವಾಗ್ದಾಳಿ ನಡೆಸಿದೆ.

"ದೇಶದ ಅತ್ಯಂತ ಹಳೆಯ ಪಕ್ಷವೆನಿಸಿರುವ ಕಾಂಗ್ರೆಸ್‍, ಮುಸ್ಲಿಂ ಲೀಗ್ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ. ಇದು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತದೆ, ಮತ್ತು ಮುಸ್ಲಿಮರಿಗೂ ಕೇವಲ ತುಟಿಗೆ ತುಪ್ಪ ಸವರುವ ಕೆಲಸ ಮಾಡುತ್ತದೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತ, ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಅವರ ಇತ್ತೀಚಿನ ಹೇಳಿಕೆಗಳ ಉದಾಹರಣೆಗಳನ್ನು ಬಿಜೆಪಿ ಮುಖಂಡರು ಉಲ್ಲೇಖಿಸಿದ ಅವರು, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೊದಲು ಕಾಂಗ್ರೆಸ್ ಮುಸ್ಲಿಮರ ಅನುಮೋದನೆಯನ್ನು ಪಡೆದುಕೊಂಡಿದೆ ಎಂದರು.
ಪಿಎಫ್‌ಐನ ಆರು ಜನರನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ. "ಇದೇ ಸಂಸ್ಥೆಯು ಈ ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರಿಂದಲೂ ಬೆಂಬಲಿತವಾಗಿದೆ ಮತ್ತು ಇದೇ ಪಿಎಸ್‍ಐ ಆರ್ ಎಸ್‍ ಎಸ್ ‍ ಹಾಗೂ ಬಿಜೆಪಿಯ ಜನರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ" ಎಂದು ಆರೋಪಿಸಿರು.

“ಕಾಂಗ್ರೆಸ್ ಪಕ್ಷ ಮತ್ತು ಅದರ ಕೆಲವು ಮಿತ್ರಪಕ್ಷಗಳು ಸಿಎಎ ವಿರೋಧಿ ಪ್ರತಿಭಟನೆಯನ್ನು ಹಿಂದೂಗಳ ವಿರುದ್ಧ ಮಾನಹಾನಿ ಆರೋಪ ಹೊರಿಸಲು ಬಳಸಿಕೊಂಡಿವೆ ಮುಸ್ಲಿಮರು ಬಿಜೆಪಿ ತಮ್ಮ ಪ್ರಧಾನ ಶತ್ರು ಎಂದು ಹೇಳುತ್ತಿದ್ದಾರೆ. ಹೀಗಾಗಿ 'ಅವರನ್ನು ಅಧಿಕಾರದಿಂದ ದೂರವಿರಿಸಲು ನಾವು ಶಿವಸೇನೆಯೊಂದಿಗೆ ಸರ್ಕಾರವನ್ನು ಮಾಡಬೇಕು” ಎಂದು ಅಶೋಕ್ ಚವಾಣ್ ಹೇಳಿದ್ದನ್ನು ಉಲ್ಲೇಖಿಸಿದ ಸಂಬಿತ್ ಪಾತ್ರ, ಕಾಂಗ್ರೆಸ್ ಕೇವಲ ಮುಸ್ಲಿಮರ ಮರ್ಜಿಗಾಗಿ ಕೆಲಸ ಮಾಡುತ್ತದೆಯೇ? ಹಿಂದೂಗಳ ಬಗ್ಗೆ ಯಾವುದೇ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.
ಯುಎನ್‍ಐ ಎಸ್‍ಎ ವಿಎನ್ 1355