Monday, Jul 13 2020 | Time 04:12 Hrs(IST)
Special Share

ಕಾಂಗ್ರೆಸ್, ರಾಹುಲ್ ವಿರುದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಸಂಚಲನ ಆರೋಪ

ನವದೆಹಲಿ,ಮೇ 14(ಯುಎನ್ಐ) ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ, ಮೆಹುಲ್ ಚೋಸ್ಕಿಯನ್ನು ಕಾಂಗ್ರೆಸ್ ಪಕ್ಷ ಸದಾ ರಕ್ಷಿಸುವ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಕಾಂಗ್ರೆಸ್ ವಿರುದ್ದ ಸಂಚಲನ ಆರೋಪ ಮಾಡಿದ್ದಾರೆ
ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಪಿ. ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ನೀರವ್ ಮೋದಿ,ಮೆಹುಲ್ ಚೋಸ್ಕಿ ಅವರು ನಡೆಸಿದ್ದ ಅವ್ಯವಹಾರಗಳನ್ನು ನೋಡಿ ನೋಡದಂತೆ ಕಣ್ಮುಚ್ಚಿಕೊಂಡಿದ್ದರು ಎಂದು ಆರೋಪಿಸಿದ್ದಾರೆ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ನ್ಯಾಯಮೂರ್ತಿ ಅಭಯ್ ಥಿಪ್ಸೆ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಅಕ್ರಮಗಳಿಗೆ ಶಿಕ್ಷೆಯಾಗದಂತೆ ರಕ್ಷಿಸಿದ್ದರು ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ ನೀರವ್ ಮೋದಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು ಎಂದು ಸಚಿವರು ಪೋಟೊ ಬಿಡುಗಡೆಮಾಡಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂಪಾಯಿ ಸಾಲ ವಂಚಿಸಿ ಬ್ರಿಟನ್ ಗೆ ಪರಾರಿಯಾಗಿರುವ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ತಮ್ಮ ಸರ್ಕಾರ ನಿರಂತರ ಪ್ರಯತ್ನಿಸುತ್ತಲೇ ಇದೆ.ನೀರವ್ ಮೋದಿಯನ್ನು ಸದ್ಯದಲ್ಲೆ ಬಂದಿಸುವುದಾಗಿ ಸಚಿವರು ಪ್ರಕಟಿಸಿದರು.

ಯುಎನ್ಐ ಕೆವಿಆರ್ 1357
More News
ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

12 Jul 2020 | 8:41 PM

ಲಕ್ನೋ, ಜುಲೈ ೧೨ (ಯುಎನ್‌ಐ) ಭೂಗತ ಪಾತಕಿ ವಿಕಾಸ್ ದುಬೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ಜರುಗಿಸಬೇಕು.

 Sharesee more..
ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್  ಸುರೇಶ್ ಕುಮಾರ್

ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್ ಸುರೇಶ್ ಕುಮಾರ್

12 Jul 2020 | 6:42 PM

ಕುಕ್ಕೆ ಸುಬ್ರಮಣ್ಯ,ಜುಲೈ ೧೨(ಯುಎನ್ಐ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗಳು ಜುಲೈ ೧೮ ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.

 Sharesee more..
ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ  ೨೦ ಚಿನ್ನದ  ಬಿಸ್ಕೆಟ್  !

ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ೨೦ ಚಿನ್ನದ ಬಿಸ್ಕೆಟ್ !

12 Jul 2020 | 6:35 PM

ತಿರುಮಲ, ಜುಲೈ ೧೨(ಯುಎನ್‌ಐ) ತಿರುಮಲ- ತಿರುಪತಿ ದೇವಸ್ಥಾನ ಆಸ್ತಿ ಪಾಸ್ತಿಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ನಂತರ ಶ್ವೇತ ಪತ್ರ ಪ್ರಕಟಿಸಲಾಗುವುದು ಎಂದು ಟಿಟಿಡಿ ಇ ಓ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

12 Jul 2020 | 6:19 PM

ನವದೆಹಲಿ, ಜುಲೈ 12 (ಯುಎನ್ಐ) ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8.50 ಲಕ್ಷದ ಸನಿಹ ತಲುಪಿದೆ.

 Sharesee more..
ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

12 Jul 2020 | 6:11 PM

ಮುಂಬೈ, ಜು 12 (ಯುಎನ್ಐ) ಕೋವಿಡ್ ಸೋಂಕು ದೃಢಪಟ್ಟಿರುವ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ, ನಟ ಅಭಿಷೇಕ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದ ನಾನಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 Sharesee more..