Tuesday, Nov 24 2020 | Time 23:17 Hrs(IST)
 • ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ 2020 ಉದ್ಘಾಟಿಸಲಿರುವ ಪ್ರಧಾನಮಂತ್ರಿ
 • 80 ನೇ ಅಖಿಲ ಭಾರತ ಸಭಾಧ್ಯಕ್ಷರ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಿ ಭಾಷಣ
 • ಸಚಿವ ಸಂಪುಟ ಪುನಾರಚನೆಗೂ ಮುನ್ನವೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ
 • ಭಾರತೀಯ ಸೇನೆಯಿಂದ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
 • ರಾಜ್ಯದಲ್ಲಿ 1870 ಹೊಸ ಕೋವಿಡ್ ಪ್ರಕರಣ ವರದಿ; ಚೇತರಿಕೆಯ ಪ್ರಮಾಣ 8 40 ಲಕ್ಷಕ್ಕೇರಿಕೆ
 • ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಗೆ ಬಿಡಿಎ ಅಧ್ಯಕ್ಷ ಸ್ಥಾನ
 • ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್
 • 2021ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ- ನಿರ್ಮಲ್ ಕುಮಾರ್ ಸುರಾನ ವಿಶ್ವಾಸ
 • ಮದುವೆಗಾಗಿ ಬಲವಂತದ ಧಾರ್ಮಿಕ ಮತಾಂತರ ನಿಷೇಧಕ್ಕೆ ಸುಗ್ರೀವಾಜ್ಞೆ ಜಾರಿಗೆ ತರಲು ಉತ್ತರ ಪ್ರದೇಶ ಸಚಿವ ಸಂಪುಟ ಒಪ್ಪಿಗೆ
 • ಚೀನಾಗೆ ಮತ್ತೆ ಬಿಸಿ ಮುಟ್ಟಿಸಿದ ಭಾರತ- ಮೂರನೇ ಕಂತನಲ್ಲಿ 43 ಅ್ಯಪ್ ನಿಷೇಧ
 • ಇನ್ನೊಂದು ತಿಂಗಳಲ್ಲಿ ಲಸಿಕೆ: ವಿತರಣೆಗೆ ಸಜ್ಜಾಗಿ: ಕರ್ನಾಟಕಕ್ಕೆ ಮೋದಿ ಸೂಚನೆ
 • 43 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಿದ ಸರ್ಕಾರ
 • ಕೆವಾಡಿಯಾದಲ್ಲಿ ರಾಷ್ಟ್ರಪತಿಯವರಿಂದ ನಾಳೆ ಪೀಠಾಸೀನಾಧಿಕಾರಿಗಳ ಸಮಾವೇಶ ಉದ್ಘಾಟನೆ
 • ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ : ಸಚಿವ ಪ್ರಭು ಚವ್ಹಾಣ್
 • ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣ ರಾವ್ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Entertainment Share

ಕಾಜಲ್ - ಕಿಚ್ಲು ಕಲ್ಯಾಣ

ಮುಂಬೈ, ಅ 30 (ಯುಎನ್‍ಐ) ಖ್ಯಾತ ನಟಿ ಕಾಜಲ್ ಅಗರ್ವಾಲ್ ಇಂದು ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಜೊತೆ ಕಾಜಲ್ ಶುಕ್ರವಾರ ಸಪ್ತಪದಿ ತುಳಿದಿದ್ದು, ವಾಣಿಜ್ಯ ನಗರಿಯಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕೋವಿಡ್‍ ಕಾರಣದಿಂದ ಕುಟುಂಬ ಸದಸ್ಯರು, ಆಪ್ತರು ಹಾಗೂ ಹತ್ತಿರದ ಸಂಬಂಧಿಕರು ಮಾತ್ರ ಪಾಲ್ಗೊಂಡಿದ್ದರು.

ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ ಎರಡು ದಿನಗಳಿಂದ ಕಾಜಲ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿ ನಡೆದಿದ್ದು, ಹಳದಿ, ಮೆಹಂದಿ ಶಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಾಜಲ್ ಕೈ ಹಿಡಿದಿರುವ ಗೌತಮ್ ಕಿಚ್ಲು ಉದ್ಯಮಿಯಾಗಿದ್ದು, ಒಳಾಂಗಣ ವಿನ್ಯಾಸ ಮತ್ತು ಮನೆ ಅಲಂಕಾರಿಕ ಪರಿಕರಗಳನ್ನು ಒದಗಿಸುವ ಇ-ಕಾಮರ್ಸ್ ವೇದಿಕೆಯಾದ ಡಿಸ್ಕರ್ನ್ ಲಿವಿಂಗ್ ಸ್ಥಾಪಕರಾಗಿದ್ದಾರೆ.

ನಟಿ ಕಾಜೋಲ್ ಅವರು ಸಿಂಗಮ್, ಮಗಧೀರ, ಕವಚಮ್, ತುಪ್ಪಕ್ಕಿ, ಜಿಲ್ಲಾ, ಟೆಂಪರ್, ಮಿಸ್ಟರ್ ಪರ್ಫೆಕ್ಟ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
“ಗೌತಮ್ ಕಿಚ್ಲು ಜತೆ ನಾನು ಮದುವೆಯಾಗುತ್ತಿರುವ ವಿಚಾರವನ್ನು ಹಂಚಿಕೊಳ್ಳಲು ಅಪಾರ ಸಂತೋಷವಾಗಿದೆ. ಕೋವಿಡ್ ಕಾರಣದಿಂದ ಸಣ್ಣ, ಖಾಸಗಿ ಸಮಾರಂಭದಲ್ಲಿ ವಿವಾಹ ನಡೆಯುತ್ತಿದೆ. ನಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ರೋಮಾಂಚನಗೊಂಡಿದ್ದೇವೆ. ಹೊಸ ಪಯಣದ ಆರಂಭದಲ್ಲಿ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತೇವೆ. ನಿಮ್ಮೆಲ್ಲರ ನಿರಂತರ ಬೆಂಬಲಕ್ಕೆ ಧನ್ಯವಾದಗಳು” ಎಂದು ಹಸೆಮಣೆ ಏರುವ ಮುನ್ನ ಕಾಜೋಲ್ ಅಗರ್ ವಾಲ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಯುಎನ್‍ಐ ಎಸ್‍ಎ 1500
More News
ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

24 Nov 2020 | 8:50 PM

ಮುಂಬೈ, ನ.24 (ಯುಎನ್ಐ) ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ್ದಾರೆ.

 Sharesee more..
ಜಗ್ಗೇಶ್ ಜತೆ ಡಾ ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

ಜಗ್ಗೇಶ್ ಜತೆ ಡಾ ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

24 Nov 2020 | 8:45 PM

ಬೆಂಗಳೂರು, ನ 24 (ಯುಎನ್‍ಐ) ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಜಗ್ಗೇಶ್‍, ಚಿತ್ರರಂಗ ಪ್ರವೇಶಿಸಿ ತಮ್ಮೆಲ್ಲ ಕನಸುಗಳನ್ನು ನನಸಾಗಿಸಿಕೊಂಡವರು.

 Sharesee more..

ಯಾವುದದು ಪ್ಯಾನ್ ಇಂಡಿಯಾ? ಜಗ್ಗೇಶ್ ಕಿಡಿ

24 Nov 2020 | 6:30 PM

 Sharesee more..