Sunday, Mar 29 2020 | Time 00:51 Hrs(IST)
National Share

ಕೇಜ್ರಿ ಪ್ರಮಾಣ ವಚನ, ದೆಹಲಿಯಲ್ಲಿ ಬಿಗಿಭದ್ರತೆ

ನವದೆಹಲಿ, ಫೆ 16 (ಯುಎನ್ಐ) ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಹಲವು ವಿಶೇಷ ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯೇ ಸಾವಿರಾರು ಮಂದಿ ಕಾರ್ಯಕರ್ತರು ಪಕ್ಷದ ಕೇಂದ್ರ ಕಚೇರಿಯ ಎದುರು ಜಮಾಯಿಸಿದ್ದರು.ಈ ಕಾರಣಕ್ಕಾಗಿ ದೆಹಲಿಯಲ್ಲಿ ಭಾರಿ ಬಿಗಿಭದ್ರತೆ ಏರ್ಪಡಿಸಲಾಗಿದೆ.

ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದೆಹಲಿ ಬಸ್ ಭದ್ರತೆಗೆ ನಿಯೋಜಿತರಾಗಿರುವ ದೇವಿ ಒಬ್ಬ ಪಿಕ್ಪಾಕೆಟರ್ನನ್ನು ಬಂಧಿಸಿದ್ದರೆ, ಅವರ ಸಹೋದ್ಯೋಗಿ ಅರುಣ್ ಕುಮಾರ್ (22) ನಾಲ್ಕು ವರ್ಷದ ಬಾಲಕಿಯ ಅಪಹರಣ ತಡೆದಿದ್ದರು. ಇವರಿಬ್ಬರೂ ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ವೈದ್ಯರು, ಶಿಕ್ಷಕರು, ನೈರ್ಮಲ್ಯ ಕಾರ್ಮಿಕರು, ಬಸ್ ನಿರ್ವಾಹಕರು, ಚಾಲಕರು, ಮಾರ್ಷೆಲ್ಗಳು, ಆಟೊ ಚಾಲಕರು, ರೈತರು, ಅಂಗನವಾಡಿ ಕಾರ್ಯಕರ್ತೆರು, ಅಥ್ಲೀಟ್ಗಳು, ವಿದ್ಯಾರ್ಥಿಗಳು, ಎಂಜಿನಿಯರ್, ಉದ್ಯಮಿ, ಆಂಬುಲೆನ್ಸ್ ಚಾಲಕರು ಹೀಗೆ ವಿವಿಧ ವರ್ಗದ ಜನಸಾಮಾನ್ಯರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಯುಎನ್ಐ ಕೆಎಸ್ಆರ್ 1052
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..