Wednesday, Sep 23 2020 | Time 02:40 Hrs(IST)
Sports Share

ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್

ಲಾಹೋರ್, ಆಗಸ್ಟ್ (ಯುಎನ್ಐ)
ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕೌಂಟಿ ಕ್ರಿಕೆಟ್‌ನ ನಾಟಿಂಗ್‌ಹ್ಯಾಮ್‌ಶೈರ್ ತಂಡದಿಂದ ಲಭ್ಯವಾಗಿದ್ದ 1.7 ಕೋಟಿ ರೂ.ಗಳ ಒಪ್ಪಂದವನ್ನು ನಿರಾಕರಿಸಿದ್ದಾಗಿ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಡಾಯಿ ಕೊಚ್ಚಿಕೊಂಡಿದ್ದಾರೆ.
'ಆಪರೇಷನ್‌ ವಿಜಯ್' ಹೆಸರಿನಲ್ಲಿ ನಡೆದ 1999ರ ಕಾರ್ಗಿಲ್‌ ಯುದ್ಧವನ್ನು 16 ಸಾವಿರ ಅಡಿಗಳ ಎತ್ತರದಲ್ಲಿ ನಡೆಸಲಾಗಿತ್ತು. ಯುದ್ಧದಲ್ಲಿ ಪಾಕಿಸ್ತಾನದ 1042 ಸೈನಿಕರು ಕೊನೆಯುಸಿರೆಳೆದರೆ, ಭಾರತದ 527 ಯೋಧರು ದೇಶದ ರಕ್ಷಣೆ ಸಲುವಾಗಿ ಹುತಾತ್ಮರಾಗಿ ಜಯ ತಂದುಕೊಟ್ಟಿದ್ದರು.
"ಹೆಚ್ಚಿನವರಿಗೆ ಈ ಸಂಗತಿ ಗೊತ್ತಿಲ್ಲ. ನನಗೆ ನಾಟಿಂಗ್‌ಹ್ಯಾಮ್‌ಶೈರ್‌ ತಂಡದಿಂದ ಕೌಂಟಿ ಕ್ರಿಕೆಟ್‌ ಆಡಲು 1.7 ಕೋಟಿ ರೂ.ಗಳ ಒಪ್ಪಂದಕ್ಕೆ ಆಹ್ವಾನ ಸಿಕ್ಕಿತ್ತು. ಆದರೆ, ಕಾರ್ಗಿಲ್‌ ಯುದ್ಧ ಸಲುವಾಗಿ ನಾನು ಅದನ್ನು ಸ್ವೀಕರಿಸಿರಲಿಲ್ಲ. ಬಳಿಕ 2002ರಲ್ಲಿ ಮತ್ತೊಂದು ದೊಡ್ಡ ಮೊತ್ತದ ಒಪ್ಪಂದ ಲಭ್ಯವಾಯಿತು," ಎಂದು ಪಾಕಿಸ್ತಾನದ ಎಆರ್‌ವೈ ನ್ಯೂಸ್‌ಗೆ ನೀಡಿರುವ ವಿಶೇಷ ಸಂದರ್ಶನದ ವೇಳೆ ಅಖ್ತರ್ ಹೇಳಿಕೊಂಡಿದ್ದಾರೆ.
"ನಾನು ಲಾಹೋರ್‌ನ ಗಡಿ ಭಾಗದಲ್ಲಿ ನಿಂತಿದ್ದೆ. ಆಗ ಜನರಲ್‌ ಒಬ್ಬರು ಅಲ್ಲಿ ಏನು ಮಾಡುತ್ತಿರುವುದಾಗಿ ನನ್ನನ್ನು ಪ್ರಶ್ನಿಸಿದ್ದರು. ಯುದ್ಧ ಇನ್ನೇನು ಆರಂಭವಾಗಲಿದೆ ಸತ್ತರೆ ಒಟ್ಟಿಗೆ ಸಾಯೋಣ ಎಂದಿದ್ದೆ. ಎರಡು ಬಾರಿ ಕ್ರಿಕೆಟ್‌ ಆಟದಿಂದ ಇದೇ ಕಾರಣಕ್ಕೆ ಹೊರಬಂದಿದ್ದೇನೆ. ಅಷ್ಟೇ ಅಲ್ಲದೆ ಕಾಶ್ಮೀರದಲ್ಲಿನ ನನ್ನ ಸ್ನೇಹಿತರಿಗೆ ಕರೆ ಮಾಡಿ ನಾನು ಕೂಡ ಯುದ್ಧ ಮಾಡಲು ಸಿದ್ಧನಿರುವುದಾಗಿ ಹೇಳಿದ್ದೆ," ಎಂದಿದ್ದಾರೆ.
ಅಖ್ತರ್ ಇದಕ್ಕೂ ಮೊದಲು ಕ್ರಿಕೆಟ್‌ಗೆ ರಾಜಕೀಯ ಮಧ್ಯಸ್ಥಿಕೆ ತರಬಾರದು. ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್‌ ಚಟುವಟಿಕೆಗಳು ಮುಂದುವರಿಯಬೇಕು ಎಂದಿದ್ದರು. ಅಷ್ಟೇ ಅಲ್ಲದೆ ಕೋವಿಡ್‌-19 ಮಹಾಮಾರಿ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಇತ್ತಂಡಗಳು ಯುಎಇನಲ್ಲಿಏಕದಿನ ಕ್ರಿಕೆಟ್ ಸರಣಿಯೊಂದನ್ನು ಆಡಬೇಕೆಂದು ಸಲಹೆಯನ್ನೂ ನೀಡಿದ್ದರು.
ಇದಕ್ಕೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಕೂಡ ಬೆಂಬಲ ನೀಡಿದ್ದರು. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಣ ರಾಜಕೀಯ ಸ್ಥಿತಿ ಸುಧಾರಿಸುವವರೆಗೆ ಮತ್ತು ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸುವವರೆಗೆ ಇತ್ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಅಸಾಧ್ಯದ ಮಾತು ಎಂದು ಟೀಮ್‌ ಇಂಡಿಯಾ ಮಾಜಿ ಕಪ್ತಾನರಾದ ಕಪಿಲ್‌ ದೇವ್‌ ಮತ್ತು ಸುನಿಲ್ ಗವಾಸ್ಕರ್‌ ತಕ್ಕ ಉತ್ತರ ಕೊಟ್ಟಿದ್ದರು.
ಯುಎನ್ಐಆರ್ ಕೆ 2100
More News
ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

22 Sep 2020 | 10:32 PM

ಶಾರ್ಜಾ, ಸೆ.22 (ಯುಎನ್ಐ)- ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ರಾಜಸ್ಥಾನ ಸ್ಕೋರ್ ಬೋರ್ಡ್

22 Sep 2020 | 9:34 PM

 Sharesee more..

ಪೀಟ್ ಸಂಪ್ರಾಸ್ ದಾಖಲೆಯನ್ನು ಮೀರಿದ ಜೊಕೊವಿಚ್

22 Sep 2020 | 6:47 PM

 Sharesee more..